ಪುಟ:Siitaa-Raama.pdf/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

________________

68

ಲಂಕಾದಹನವಾದಂದಿನಿಂದ ರಾವಣನು ಏನು ಮಾಡುತಿದ್ದನು ?” ಸ್ವಲ್ಪ ಬೆದರಿದ್ದನು, ಯಾವಾಗಲೂ ಮುಂದೇನಾಗುವುದೊ ಎಂದೇ ವಿಚಾರ ಮಾಡುತಲಿದ್ದನು. ಸೀತೆಯ ಉದ್ಧಾರಕ್ಕಾಗಿ ಇನ್ಯಾರಾದರೂ ಬರುವ ಮೊದಲೇ ಅವಳನ್ನು ಒಲಿಸಿಕೊಳ್ಳಲೂ ಪೇಚಾಡುತಲಿದ್ದನು. ಎಂದಿನಂತೆ ಅಂದೂ ಸಭೆ ಸೇರಲು, ಅತಿ ಭಯಂಕರ ಪರಾಕ್ರಮಿಗಳಾದ ರಾಕ್ಷಸರು ಸಭೆಗೆ ಬಂದಿರಲು, ದೂತನೊಬ್ಬನು ಬಂದು, ' ಇದುವರೆಗೆ ನಾವು ಎಂದೂ ಕೇಳದಿದ್ದ, ಎಂದೂ ಎಣಿಸದಿದ್ದ ಜಯಧ್ವನಿಯೊಂದು ಇಂದು ಕೇಳಿಸು ತಲಿದೆ, ಏನೊಂದು ತಿಳಿಯದು,' ಎಂದು ಭೀತನಾಗಿ ಕಾಲಿಗೆರಗಿ ಹೇಳಿ ಕೊಂಡನು, 1 ಲಂಕೆಯನ್ನು ಸುಡಬಂದ ವಾನರರಂತಹರನೇಕರು ಹಿಂಡಾಗಿ ಇಲ್ಲಿಗೆ ಬಂದು ಸೀತೆಯನ್ನು ಬಿಡಿಸಿಕೊಂಡೊಯ್ಯಲಿರಬಹುದು,' ಎಂದು ರಾವಣನು ನುಡಿದನು. ಸಭಿಕರಲ್ಲಿ ಒಬ್ಬೊಬ್ಬರಾಗಿ ಎದ್ದು ನಿಂತು, ತಂತಮ್ಮ ಪರಾಕ್ರಮವನ್ನು ಹೊಗಳಿಕೊಂಡು ಆಯುಧ ಜಳಪಿಸಿ' ಯುದ್ದ ವಾಗಲಿ ಎಂದರು. ಕಾಡುಮೃಗಗಳು, ಮನುಷ್ಯರು, ದೇವತೆಗಳು ಮುಂತಾದವ ರನ್ನು ಸೋಲಿಸಿದ ರಾಕ್ಷಸವೀರರು ಭಯಪಡುವುದುಂಟೆ?

ರಾವಣನ ತಮ್ಮನಾದ ವಿಭೀಷಣನು ಅಣ್ಣನಿಗೆ ಕೈ ಮುಗಿದು, * ಲಂಕಾಧೀಶ್ವರಾ ! ಲಾಲಿಸಬೇಕು. ತನ್ನ ಇಂದ್ರಿಯಗಳನ್ನು ಜಯಿಸಲಾರ ದವನು ಪ್ರಜೆಗಳನ್ನು ಆಳಲಾರನು, ಇನ್ನಾರನ್ನೂ ಜಯಿಸಲಾರನು, ತನ್ನ ಕುಲಕಂತೆಯಲ್ಲಿಯೇ ಸಂತಸಪಟ್ಟರೆ, ಅದರಿಂದ ತನ್ನ ಕುಲವು ವರ್ಧನ ಗೋಳುವುದು ; ಪರವಧುವಿಗೆ ಎಳಸಿದರೆ ಅದೇ ಕುಲನಾಶಹೇತುವೆಂದು ಪುಖ್ಯಾತವಾದ ಮಾತಿರುವುದು. ಇದನ್ನು ಪರಿಭಾವಿಸಿದರೆ, ಸೀತಾದೇವಿ ಯನ್ನು ಮನ್ನಣೆಯಿಂದ ರಾಮಚಂದ್ರನಿಗೆ ಒಪ್ಪಿಸಿಕೊಟ್ಟು, ಬಂಧುಬಳಗ ಗಳೊಡನೆ ನಾವು ಸುಖವಾಗಿರುವುದು ಉತ್ತಮವೆಂದು ನನಗೆ ತೋರು. ವುದು. ರಾಮನು ಸಾಮಾನ್ಯ ಮನುಷ್ಯನಲ್ಲ, ಅವನು ತಾಟಕಿಯನ್ನೂ ಸುಬಾಹು ಮಾರೀಚರನ್ನೂ ಕೊಂದನು, ವಾಲಿಯನ್ನೂ ಕೊಂದನು, ಶಿವಧನುಸ್ಸನ್ನು ಮುರಿದು, ಪರಶುರಾಮನ ಧನುಸ್ಸನ್ನೂ ಭಂಗಗೊಳಿಸಿರು ವನು. ಇಂತಹನಿಗೆ ವಿರುದ್ಧವಾಗಿ ಯುದ್ಧವನ್ನು ಮಾಡಲೆಳಸುವುದರಿಂದ ಫಲವೇನೂ ಉಂಟಾಗದು. ಇವರು ಮುಖಸ್ತುತಿ ಪರಾಯಣರಾಗಿ