ಪುಟ:Siitaa-Raama.pdf/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

________________

69

ಏನೇನನ್ನೂ ಹೇಳಿದರು, ಹೇಳಲಿ, ಇವರು ಈಗ ಆಡುವುದಕ್ಕೂ ಅಂದು ಆದೊಂದೇ ಕಪಿಯ ಮುಂದೆ ಇವರು ಮಾಡಿದುದಕ್ಕೂ ವಿಶೇಷವಾದ ತಾರತಮ್ಯವಿದೆಯೆಂದು ನಾವೆಲ್ಲರೂ ಬಲ್ಲೆ ವಲ್ಲವೆ? – ಆದುದರಿಂದ,

ಪರಿಜನಮುಮಾಪ್ತ ಜನಮುಂ |

ಪುರಮುಂ ಬಾಂಧವರು ಮಗಲದೊಂದೆಡೆಯೊಳ್ಸೈ |

ತಿರಲಕ್ಕುಂ, ಜಾನಕಿಯಂ

ಪರಿಹರಿಸಿದೊಡಲ್ಲದಂದಿರಲ್ವಂದಪುದೇ ?

ಎಂದು ವಿನಯದಿಂದ ಬೇಡಿಕೊಂಡನು,

ಶತ್ರುವನ್ನು ಪ್ರಶಂಸಿಸುವುದೆ? ಬಹು ಯತ್ನದಿಂದ ತಂದ ವನಿತಾ ರತ್ವವನ್ನು ಹುಲು ಮನುಷ್ಯರಿಗೆ ಬೆದರಿ ಮರಳಿಸುವುದೆ? ನನ್ನೊಡನೆ ಕಾದಿ ಸೋತವರನ್ನೆ ಇದು ವರೆಗೆ ಕಂಡಿರುವೆನಲ್ಲದೆ ಗೆದ್ದವರನ್ನು ಕಂಡು ದಿಲ್ಲ,' ಎಂದು ರಾವಣನು ತನ್ನಲ್ಲಿ ತಾನೆ ಆಲೋಚಿಸಿದನು. ಮೊದಲೇ ದುರ್ಬುದ್ದಿ : ಅದೀಗ ಸಭಿಕರ ಜಂಬದಿಂದ ಪುಟವಿಟ್ಟಂತಾಯಿತು. ಕ್ರೋ ಧೋನ್ಮತ್ತನಾದ ರಾವಣನು ವಿಭೀಷಣನನ್ನು ಜರೆದು ಬಯ್ದನಲ್ಲದೆ, ಎಡ ಗಾಲಿನಿಂದ ಒದ್ದನು, ಕೊಲ್ಲುತಿದ್ದನು, ತಮ್ಮನೆಂದು ಉಳಿಸಿದನು. ಅವನನ್ನು ನಗರದ ಹೊರಕ್ಕೆ ದೂಡಿ ಒಯ್ಯುವಂತೆ ಅಪ್ಪಣೆಕೊಟ್ಟನು. ಆಗ ಧರ್ಮಾತ್ಮ ನಾದ ವಿಭೀಷಣನು,-“ಅಣ್ಣಾ ದುರ್ಬೋಧನೆ! ಅಪಕೀರ್ತಿಗೆ ಹೆದರದೆ ಸೀತೆಯನ್ನು ತಂದು, ರಾಜ್ಯ ನಾಶಕರವಾದ ಯುದ್ದಕ್ಕೂ ಹಿಂಜರಿಯದೆ ಬಲಿದರೊಡನೆ ಯುದಕ್ಕೆ ನಿಲುವೆಯಂತೆ! ನಿಲು, ರಾಮಬಾಣವು ಎಂದೂ ನಿರರ್ಥಕವಾದುದಲ್ಲ. ನಿನ್ನ ಮತ್ತು ಇವರ ದುರ್ದಶೆಯನ್ನು ನೋಡುವುದ ಕಾಗಿ ನಾನಿಲ್ಲಿ ನಿಲ್ಲುವವನಲ್ಲ,' ಎಂದು ತನ್ನನ್ನು ತಾನೆ ಹೊರಡಿಸಿಕೊಂಡು ರಾಮಚಂದ್ರನ ಶಿಬಿರದ ಕಡೆಗೆ ತೆರಳಿದನು. ಅಲ್ಲಿಗೆ ತಲಪುತ್ತಲೆ,

ರಾಮಚಂದ್ರನ ಪಾಳೆಯದಲ್ಲಿ, ಪುಬಲ ವಿರೋಧಿಯಾದ ೪೦ಕಾ ಧೀಶನ ಸೋದರನ ಆಗಮನದಿಂದ ಆಶ್ಚರ್ಯವುಂಟಾಯಿತು. ನಾನು ಚಂದ್ರನು ಶರಣಾಗತರಾದವರಲ್ಲಿ ಸಂದೇಹ ಕಾಣುವವನಲ್ಲ. ಅದರಲ್ಲೂ ವಿಭೀಷಣನು ಭಗವದ್ಭಕ್ತನು; ಅವನ ನುಡಿಯೇ ರಾಮನಲ್ಲಿ ಭಕ್ತಿಪೂರ್ಣ ನಾದುದು, ಆದರಣ ವಾನರ ಸೇನಾಪತಿಗಳು ಅವನನ್ನು ಸುಲಭವಾಗಿ