ಪುಟ:Siitaa-Raama.pdf/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

________________

70

ನಂಬುವರೇ? ರಾವಣನ ಸೋದರನು! ಸೋದರನು ಎಂದೂ ಸೋದರನಿಗೆ ಇದಿರುನಿಂತು ಹಗೆಯ ಪಕ್ಷವನ್ನು ಸೇರುವನೆ? ಯಥಾಸ್ಥಿತಿಯನ್ನು ವಿಶ್ಲೇ ಷಣನು ವಿವರಿಸಿ, ಲಂಕಾಪುರದಲ್ಲಿನ ಯಾವತ್ತು ಅಂತರಂಗದ ವಿಚಾರ ಗಳನ್ನು ಮರೆಮಾಜದೆ ಹೇಳಿದನು.

ಬಾಳಬೇಕೆಂದೆಂಬವಗೆ ಚಾಂ- |

ಡಾಲಗ್ರಹ ವೀಥಿಯ ಭಿಕ್ಷದ |

ಕೂಳತಿರತಂದುಂಡು ಬದುಕುವು ದಧಿಕ ಸೌಖ್ಯ ಕಣಾ |

ಕೇಳಿದ್ದೆ ರಾಜೇಂದ್ರು, ಮೂರ್ಖರ

ಕೇಳಮೇಳದೊಳಿದ್ದು ಬದುಕುವ

ಖಳವತ್ತಿಯ ಬದುಕು ಕಷ್ಟಕೆ ಕಷ್ಟತರವೆಂದ

,

ಅಣ್ಣನಿಗೆ ಅವನ ಪಾಪದ ಫಲವು ಒದಗುವಾಗ, ನಾವು ಅಲ್ಲಿದ್ದು ಅವನೊಡನೆ ದುರ್ಗತಿಗಿಳಿಯುವುದಕ್ಕಿಂತ, ಲೌಕಿಕ ವೈದಿಕಗಳೆರಡನ್ನೂ ಮೀರಿದ ಅಣ್ಣ ನನ್ನು ತ್ಯಜಿಸಿ ತಮ್ಮ ಚರಣದಾಸನಾಗುವುದೆ ನನ್ನ ಧರ್ಮವೆಂದು ಇತ್ತ ಸಾರಿದೆನು” ಎಂದನು. ಆದರೂ ಎಲ್ಲರೂ ಸಂಶಯ ಚಿತ್ತರಾದರು, ಆಗ ರಾಮನು 4 ಶರಣಾಗತನಾದ ಶತ್ರುವನ್ನಾದರೂ ಕಾಪಾಡುವುದು ಕ್ಷತ್ರಿಯರ ಧರ್ಮವು, ಅದೇ ಸಾಧುವಾದ ನೀತಿಯು, ಶತ್ರುವಿನ ಸೋದರನೆಂದು ಅವನು ನನಗೆ ಶತ್ರುವಾಗನು, ಅವನ ನಡೆನುಡಿಗಳು ಅಂತಹವಲ್ಲ, ಒಂದು ವೇಳೆ ಅವನು ಕಪಟಾಚರಣೆಯನ್ನು ಮಾಡಿರು ವನಾದರೂ, ಎಂದಿಗೆ ಆಶ್ರಯಬೇಡುವನೋ ಅವನಿಗೆ ನಾನು ಅಭಯವನ್ನೆ ಕೊಡುವೆನು. ಯಾರ ಮಾತನ್ನು ಕೇಳಿಯೂ ಅವನನ್ನು ಪರಿತ್ಯಾಗ ಮಾಡಲಾರೆನು” ಎಂದನು. ಈ ಮಾತುಗಳನ್ನು ಕೇಳಿ ಸುಗ್ರೀವಾದಿಗಳು ಸುಮ್ಮನಾದರು.

ವಿಭೀಷಣನೊಡನೆ ಲಂಕಾಪುವೇಶವಾಯಿತು. ರಾವಣನು ಆಗಲೆ ಭಸ್ಮಲೋಚನನೆಂಬ ರಾಕ್ಷಸನನ್ನು ವಾನರ ಸೇನೆಗಳನ್ನು ಸುಟ್ಟು ಕೊಲ್ಲಲು ಅಪ್ಪಣೆಕೊಟ್ಟನು. ಅವನು ಎಂದೋ ಸತ್ತು ಬಿದ್ದನು, ಸೇನೆಗಳು ಲಂಕೆ ಯನ್ನು ನಾಲ್ಕೂ ಕಡೆ ಮುತ್ತಿದುವು. 'ಜಯ ಸೀತಾರಾಮ !' ಎಂದು ಧ್ವನಿಯೆದ್ದಿತು,