ಪುಟ:Siitaa-Raama.pdf/೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿದೆ


________________

|| #ff: ||

 

ಸೀತಾ-ರಾಮ

೧. ಆದಿಕಾಂಡ


ಇದು ಬಹಳ ಹಿಂದಿನ ಕಾಲದ ಕಥೆ, ಆ ಕಾಲಕ್ಕೆ ' ಶ್ರೇತಾಯುಗ' ಎನ್ನುತ್ತಾರೆ, ಆಗ ಈ ದೇಶದಲ್ಲಿ ಅಯೋಧ್ಯೆ ಎ೦ಬುವ ರಾಜ್ಯವು ಇದ್ದಿತು, ಅದನ್ನು ದಶರಥರಾಯನು ಆಳುತ್ತಿದ್ದನು. ಅವನ ರಾಜಧಾನಿ, ಅಯೋಧ್ಯೆ; ಸಮೀಪದಲ್ಲಿ ಹರಿಯುತ್ತಿದ್ದ ಹೊಳೆ, ಸರಯೂನದಿ. - ದಶ ರಥನು ಪ್ರಜೆಗಳನ್ನು ಮಕ್ಕಳಂತೆಯ ಪ್ರೀತಿಯಿಂದ ಪಾಲಿಸುತ್ತಿದ್ದನು. ಅವನ ಆಳಿಕೆಯಲ್ಲಿ ಜನರೊಳಗೆ ವಾದವಿವಾದಗಳು ಇದ್ದಿಲ್ಲ; ರೋಗ ರುಜೆಗಳು ಸುಳಿಯುತ್ತಿದ್ದಿಲ್ಲ; ಕಳ್ಳಕಾಕರ ಭಯವಿದ್ದಿಲ್ಲ. ಜನರಿಗೆ ಯಾವಾಗಲೂ ಸುಖವೇ ಸೌಖ್ಯವೇ, ದಶರಥನ ವಯಸ್ಸು ಮೂವತ್ತು ವರ್ಷವಾದ ಬಳಿಕ ಅವನು ಕೌಸಲೈಯನ್ನು ಮದುವೆಯಾದನು. ಅವಳು ಕೋಸಲದೇಶದ ಅರಸನ ಮಗಳು. ಅವಳು ಚೆಲುವೆ, ಗುಣವತಿ, ಅವಳೇ ಅವನಿಗೆ ಪಟ್ಟದ ರಾಣಿಯಾಗಿದ್ದಳು. ಅವಳ ಹೊರತಾಗಿ, ಇನ್ನಿಬ್ಬರು ರಾಣಿಯರು ಇದ್ದರು. ಒಬ್ಬಳು ಗಿರಿಜಾಪುರದ ಅರಸನ ಮಗಳಾದ ಕೈಕಯಾ (ಕೈಕೆ); ಇವಳು ದಶರಥನನ್ನು ಸ್ವಯಂವರಕಾಲದಲ್ಲಿ ವರಿಸಿಕೊಂಡಳು. ಮತ್ತೊ ಬೃಳು ಸಿಂಹಲರಾಜನ ಕನ್ಯ,- ಸೌಮಿತ್ರಿ, - ಈ ಮನರೂ ರಾಣಿಗಳಲ್ಲಿ ಬಹುಕಾಲದ ವರೆಗೆ ಸಂತತಿ ಹುಟ್ಟಲಿಲ್ಲ. ಇದೊಂದು ಕಾರಣದಿಂದ ರಾಜನಿಗೆ ದುಃಖವಿದ್ದಿತು. ಈ