ಪುಟ:Siitaa-Raama.pdf/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

________________

74

ವನೇ? ನೂರು ಜನರ ಆರ್ಭಟೆಗೂ ಇವನ ಗೊರಕೆಯೆ ಮಿಗಿಲು, ಇವನನ್ನು ಅಲ್ಲಾಡಿಸಿದರು, ಜಿಗಿದರು, ನೂಕಿದರು, ಹೊರಳಿಸಿದರು, ನೀರು ಕಲ್ಲು ಗಳನ್ನು ಅವನ ಮೈಮೇಲೆ ಚೆಲ್ಲಿದರು. ಅವನ ಮೂಗುಗರ್ಜನೆ ನಿಲ್ಲದು; ಮತ್ತೆಯೋ ಎದ್ದು, ಕಣ್ಣೆರದನು, ಎಚ್ಚಿಸ ಬಂದವರು ತಬ್ಬಿಬ್ಬಾಗಿ ಅಲ್ಲಿಂದ ಓಡಿದರು. ಅವನ ಹಸಿವಿಗೂ ನೀರಡಿಕೆಗೂ ಮೊದಲು ತೃಪ್ತಿ ಮಾಡಿಕೊಟ್ಟರು, ಸಮಯ ತಪ್ಪಿ ನಿದ್ದೆಯಿಂದೆದ್ದವನಲ್ಲವೇ ? ಕೋಪ ಗೊಂಡನು,

ರಾವಣನ ಸಭೆಗೆ ಬಂದನು, ಅದು ಸಭಾಸದಶೂನ್ಯ! ಕಾರಣ ವಿಚಾರಿಸಿದನು, ಶೂರ್ಪನಖೆಯು ದೂರಿಟ್ಟಂದಿನಿಂದ ಇಂದಿನ ವರೆಗಣ ವೃತ್ತಾಂತವನ್ನು ರಾವಣನು ತಮ್ಮನಿಗೆ ತಿಳಿಯಹೇಳಿದನು, ಕುಂಭಕರ್ಣನು ಜಡನಂತೆ ನಿದ್ರಾವಶನಾದ ರಕ್ಕಸನಾದರೂ, ನೀತಿಬಲ್ಲವನು. ಅಣ್ಣನನ್ನು, ಕುರಿತು, ಕಳವಳಿಸುತ್ತ,-4 ನಿನ್ನ ಈ ರೀತಿಯಿಂದ ಹಿತವಾಗುವಂತಿಲ್ಲ. ಕೂಳಿಗಾಗಿ ಹೊಗಳುವವರ ಮಾತನ್ನು ಕೇಳಿ ಇದುವರೆಗೆ ತಲೆದೂಗಿದೆ, ಈಗ ತಳಕಳಚಿ ಬೀಳುವಂತೆ ಮಾಡಿಕೊಂಡಿರುವೆ, ನೀತಿಬಲ್ಲ ಆಪ್ತರು ನುಡಿದುದು ನಿನ್ನ ದುರ್ಮಾರ್ಗಕ್ಕೆ ಸರಿಹೋಗಲಿಲ್ಲ. ಅವರು ತೊಲಗಿದರು. ವಿಚಾರವಿದ್ದರೆ ಧರ್ಮವಿದೆ; ಸದ್ಧರ್ಮವನ್ನೆ ಸಾಂ ಕೀರ್ತಿಯಿದೆ; ಕೀರ್ತಿಯನ್ನು ಹೊಂದಿಕೊಂಡು ಸಿರಿಯಿದೆ; ಆದನ್ನನುಸರಿಸಿಯೆ ಜಯವು. ವಿಚಾರವನ್ನು ಬಿಟ್ಟು ನಡೆದಂದೇ ಅಪಜಯವನ್ನೆ ಒಲಿಸಿಕೊಂಡಿರುವೆ. ಸೀತಾದೇವಿಯನ್ನು ಅವಳ ಪತಿದೇವನಿಗೆ ಒಪ್ಪಿಸಿಕೊಡುವುದು ಈಗಲಾದರೂ ಕೀರ್ತಿ ಕರವು ಈ ಎಂದನು, ರಾವಣನು ಸಿಟ್ಟಾದನು,

" ಎಲವೋ! ನೀನೀಸಮರಭಾರವ

ಗೆಲುವೆಯೆಂದೆಬ್ಬಿಸಲು, ಬಳಿಕೀ

ಕಲಹಕಮ್ಮದೆ ನೀತಿಯಾಡುವೆ ಕಲಿತವಿದ್ಯೆಯನು!

ಬಳಿದ ನಿದ್ರಾಧವನ ಇದಿರಲಿ

ನಿಲಿಸಿ ನುಡಿದುದೆ ತಪ್ಪು; ಮುನ್ನಿನ .

ಬಳಕೆಯಲಿ ಸತ್ತಂತೆ ಕೆಡೆ, ಹೊಗೆ'ಂದು ಗರ್ಜಿಸಿದ.

ಇನ್ನು ಉಪಾಯವಿಲ್ಲೆಂದು ಕುಂಭಕರ್ಣನು ಯುದ್ಧಕ್ಕೆ ವೀಳೆಯ ಪಡೆದು ಆವೇಶದಿಂದ ರಣರಂಗಕ್ಕೆ ಇಳಿದನು. ಕುಂಭಕರ್ಣ ನಲ್ಲವೆ, ಅವನ ಕೈಗೆ