ಪುಟ:Siitaa-Raama.pdf/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೭೫

ಸಿಕ್ಕಿದರೆ ಮತ್ತೆ ಕಾಪಾಡುವವರಾರು ? ಅವನ ವಿಕಾರವಾದ ದೇಹವನ್ನು ನೋಡಿಯೆ ವಾನರರು ಬೆಚ್ಚಿದರು, ಬೆದರಿದರು, ಅವನ ಆಯುಧಗಳಾ ವುವು ? ಮರಗಳ ದೊಡ್ಡ ಗೆಲ್ಲುಗಳು, ಕೊಂಬೆಗಳನ್ನು ಸೆಳೆವನು, ಸೆಳೆದು ಬಡೆವನು. ಅವನು ಸುಗ್ರೀವನನ್ನು ಹಿಡಿದು ಆಕೆಗೆ ಕೊಂಡೆಗಲು ಹೊರಟನು. ಸುಗ್ರಿವನೇನು ಮಾಡುವನು ? ಕುಂಭಕರ್ಣನ ದೃಷ್ಟಿ ಸವಿಾಪ ಅವನು ಸುಗ್ರೀವನನ್ನು ನೋಡಲು ಅವನ ಮುಖದ ಬಳಿಗೆ ತನ್ನ ಮುಖವನ್ನು ತರಲು, ಸುಗ್ರೀವನು ಅವನ ಮೂಗು ಕಿವಿಗಳನ್ನು ಕಚ್ಚಿ ಹರಿದನು, ಬೇನೆ ತಡೆಯದೆ ಕುಂಭಕರ್ಣನು ಅವನನ್ನು ಬಿಟ್ಟನು. ರಾಮನು ಆಗ ಅವನ ಕೈ ಕಾಲುಗಳನ್ನು ಬಾಣಗಳಿಂದ ಕತ್ತರಿಸಿದನು. ಕುಂಭಕರ್ಣನು ಇದರಿಂದ ಸಾಯುವನೆ ? ರಾಮನು ಆಗ ಅವನ ಕೊರಳಿಗೆ ಬಾಣವನ್ನು ಹೂಡಿದನು, ಕೊರಳು ತುಂಡಾಗಿ ಕೆಳಕ್ಕುರುಳಿತು. ನಾನ ರರು ಆ ರುಂಡವನ್ನು ಕೈಯಿಂದ ಕೈಗೆ ಹಾರಿಸುತ್ತ ಕೊನೆಗೆ ಸಮುದ್ರಕ್ಕೆ ಒಗೆದರು. ಲಂಕೆಯಲ್ಲಿ ಹಾಹಾಕಾರ!

ಅವನ ತರುವಾಯದಲ್ಲಿ ದೇವಾಂತಕ, ನರಾಂತಕ, ತ್ರಿಶಿರ, ಮಹೋ ದರ, ಮಹಾಪಾರ್ಶ್ವರೆಂಬ ವೀರರು ಒಬ್ಬೊಬ್ಬರಾಗಿ ಯುದ್ಧಕ್ಕೆ ಬಂದು ವಾನರರಿಂದ ಹತರಾದರು. ಇವರನಂತರ ಯುದ್ದಕಾಗಿ ಅತಿಕಾಯನೆ ಬಂದನು. ರಾವಣನ ಮಕ್ಕಳಲ್ಲಿ ಬುದ್ದಿವಂತನೂ ವೀರನೂ ಇವನೇ ಅವನು ಯುದ್ಧಕ್ಕೆ ಹೊರಡುತ್ತಲೆ ಲಂಕೆಯಲ್ಲಿ ಜಯಧ್ವನಿಯಾಯಿತು. ಅವನ ಅಸ್ತ್ರಕೌಶಲವನ್ನು ನೋಡಿ ವಾನರರು ಭಯಪಟ್ಟರು. ಅವನಿಗೆ ಲಕ್ಷ್ಮಣನೆ ಇದಿರಾದನು. ಅವನು ಬ್ರಹ್ಮಾಸ್ತ್ರವನ್ನು ಬಿಡಲು, ಆಗ ಅತಿ ಕಾಯನು ಮಡಿದನು,

ಇಂದ್ರಜಿತುವು ಈಗ ಇವೆರಡನೆಯ ಬಾರಿ ಯುದ್ಧಕ್ಕೆ ಮುಂದಾದನು. ಇದು ವರೆಗೆ ಅವನು ಒಂದು ಯಜ್ಞವನ್ನು ಮಾಡಿ ವಿಜಯಪಡೆಯಲು ವರ ಪಡೆದಿದ್ದನು. ಇನ್ನು ಅವನನ್ನು ಇದಿರಿಸುವವರಾರು ? ಅವನ ಯುದ್ಧ ದಿಂದ ವಾನರರೆಲ್ಲರೂ ಕಳೆಗುಂದಿದರು. ಅವನು ಎಲ್ಲರೂ ಮೂರ್ಛ ಹೋಗುವಂತೆ ಮಾಡಿದನು. ರಾಮಲಕ್ಷ್ಮಣರೂ ಮೂರ್ಛಿತರಾದರು.