ಪುಟ:Siitaa-Raama.pdf/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೭೬

ಕವಿರಾಜನಾದ ಸುಷೇಣನು ಅವರಿಗೆ ಚಿಕಿತ್ಸೆ ಮಾಡಲು ಬಂದನು. ಬೇಕಾದ ಮೂಲಿಕೆಯನ್ನು ಕೈಲಾಸದಿಂದ ತರಬೇಕು. ಯಾರು ತರುವರು ? ಹನು ಮಂತನು ತರಹೋದನು. ರಾತ್ರಿ ಬೆಳಗಾಗುವುದರೊಳಗೆ ಆ ಮಲಿಕೆಯನ್ನು ತಾರದಿದ್ದಲ್ಲಿ, ಅದು ಒಣಗಿ, ಅದರ ಪ್ರಯೋಜನವು ಇಲ್ಲದಂತಾಗುವುದು,

ಮೃತಸಂಜೀವಿನಿಯನ್ನು ಹನುಮಂತನು ತರಲು ಹೋದನು. ಹಿಮಾಲಯಕ್ಕೆ ಬಂದು ಹುಡುಕಿದನು, ಅದಾವುದೊ ? ರಾತ್ರಿ ಕಳೆ ವುದಲ್ಲವೆ ? ಔಷಧಗಳು ಬೆಳೆದಷ್ಟು ಬೆಟ್ಟವನ್ನೆ ಹೊತ್ತುಕೊಂಡು ಹನು ಮಂತನು ಬಂದನು, ಸುಷೇಣನೆ ಹುಡುಕಲಿ! ಸುಷೇಣನು ಅದನ್ನು ಬೇರೆ ತೆಗೆದು, ಎಲ್ಲರ ಮೂಗುಗಳ ಬಳಿ ಹಿಡಿದನು. ಅದರ ಗಾಳಿ ಬಡೆದುದೇ ಎಲ್ಲರೂ ಎದ್ದು ಕೊಂಡರು. ರಾಮಲಕ್ಷ್ಮಣರೂ ಎದ್ದರು. ಯುದ್ಧದ ಆಯಾಸವೇ ಅವರಿಗೆ ತಿಳಿದಿರಲಿಲ್ಲ,

ಈ ವೃತ್ತಾಂತವನ್ನು ರಾವಣನು ಕೇಳಿ ಆಶ್ಚರ್ಯಪಟ್ಟನು ಎಷ್ಟೋ ಬಾರಿ, ವಾನರರೂ ರಾಮಲಕ್ಷ್ಮಣರೂ ಮಡಿದರು! ಆದರೆ ಪುನಃ ಎದ್ದರು, ಇನ್ನು ಹೀಗೇ ಆಗುವುದಾದರೆ, ಲಂಕೆಯನ್ನು ಕಾಪಾಡಲಾಗುವುದೆಂತು ? ಇನ್ನು ಯುದ್ಧವೇಕೆ ? ಲಂಕೆಯ ಎಲ್ಲ ದ್ವಾರಗಳನ್ನು ಮುಚ್ಚಿರೆಂದು ಚಾಕರರಿಗೆ ಅಪ್ಪಣೆ ಕೊಟ್ಟನು. ಹಾಗೆಯೆ ಮಾಡಲಾಯಿತು. ಹೊರ ಗಿದ್ದವರು ಒಳಕ್ಕೆ ಬರಲಾರರು; ಒಳಗಿದ್ದವರು ಅಲ್ಲೇ ಉಳಿಯಬೇಕಾ ಯಿತು. ಆ ದ್ವಾರಗಳನ್ನು ಒಡೆವುದೂ ಸಾಮಾನ್ಯವೆ? ರಾಮಲಕ್ಷ್ಮಣರು ಇನ್ನೇನು ಮಾಡುವುದೆಂದು ಭಾವಿಸಿದರು. ವಾನರಸಭೆಯು ಸೇರಿತು, ವಾನರರು ಲಂಕೆಯೊಳಗೆ ನುಗ್ಗಿ ಮನೆಮನೆಗೆ ಬೆಂಕಿ ಹತ್ತಿಸುವುದೆಂದು ನಿರ್ಧಾರವಾಯಿತು. ವಾನರರು ನಗರದ ಗೋಡೆಗಳನ್ನು ಹತ್ತಿದರು, ಸಿಕ್ಕಿದ ರಾಕ್ಷಸರ ದವಡೆಗೆ ಏಟುಕೊಟ್ಟರು, ರಾಕ್ಷಸರು ಎಲ್ಲಿಗೆ ಓಡು ವರು? ಹೊರಗೆ ಬರಲು ಉಪಾಯವಿಲ್ಲ. ಸಂಜೆಯಾಯಿತು. ವಾನರರು ಮನೆಮನೆಗೆ ಬೆಂಕಿಯಿಟ್ಟರು, ಇನ್ನು ಪ್ರಾಣರಕ್ಷಣೆಗೆ ಉಪಾಯವೇನಿದೆ? ಬೆಂಕಿ ಹಚ್ಚಿತು ಚಿನ್ನದ ಲಂಕೆ ಸುಟ್ಟು ಬೂದಿಯ ಕಾಶಿಯಾಯಿತು! ಸೈನ್ಯವೆಷ್ಟು, ಮಂದಿಯಷ್ಟು! ಸುಟ್ಟೇ ಹೋಯಿತು! ಮನೆವಾರು ಜಾನು ವಾರು ಭಸ್ಮವಾಯಿತು.