ಪುಟ:Siitaa-Raama.pdf/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

77

ರಾವಣನು ಇದನ್ನು ನೋಡಿ ಕಂಗಾಲಾದನು, ಇನ್ನು ಬಾಗಿ ಅಕ್ಕಿಯ ಉಪಾಯವಿಲ್ಲ. ದ್ವಾರಗಳನ್ನು ತೆರೆಯಿಸಿ 'ಯುದ್ಧ ವಾಗಲೆ' ೦ದನು, ಕುಂಭಕರ್ಣನ ಇಬ್ಬರು ಪುತ್ರರು ಕುಂಭನಿಕುಂಭರೆಂಬವರು ಯುದ್ಧಕ್ಕೆ ನಿಂದರು, ಹನುಮಂತನೆ ಅವರನ್ನು ಕೊಂದನು, ಅವರ ತರುವಾಯ ಮಕರಾಕ್ಷನು ಮುಂದಕ್ಕೆ ಬಂದನು, ರಾಮಬಾಣಕ್ಕೆ ಅವನು ಬಲಿ ಯಾದನು, ನಂತರ ವಿಭೀಷಣಪುತ್ರನಾದ ತರಣಿಸೇನನು ಯುದ್ಧಕ್ಕೆ ಇಳಿದನು. ಅವನು ಭಯಂಕರ ಯುದ್ಧವನ್ನು ಮಾಡಿದನು. ರಾಮ ಲಕ್ಷ್ಮಣರು ಅವನ ಪ್ರತಾಪಕ್ಕೆ ದಿಗಿಲುಹೊಂದಿದರು. ವಾನರರು ಪಲಾಯನ ಮಾಡಿದರು. ಕಾಮನೂ ಸೋಲುವನೋ ಎಂಬಂತಾಯಿತು, ಬ್ರಹ್ಮಾಸ್ತ್ರ ದಿಂದಲ್ಲದೆ ಇವನನ್ನು ಗೆಲ್ಲುವುದು ಅಸಾಧ್ಯವೆಂದು ವಿಭೀಷಣನೆಂದನು, ತಂದೆಯೇ ಮಗನ ಮರಣೋಪಾಯವನ್ನು ಹೇಳಿದನು! ಅವನ ಯುದ್ಧಕ್ಕೆ ರಾಮನು ಮೆಚ್ಚಿದನು; ವಿಭೀಷಣನು ತಾನು ಧನ್ಯನೆನಿಸಿಕೊಂಡನು. ಬ್ರಹ್ಮಾಸ್ತ್ರವೇ ಅವನನ್ನು ಇಕ್ಕಡಿಯಾಗಿ ತುಂಡಿಸಿತು. ವಿಭೀಷಣನಿಗೆ ಆಗ ಪುತ್ರಶೋಕವುಂಟಾಯಿತು. ಅವನು ವಿಭೀಷಣನ ಮಗನೆಂದಾದರೂ ಅದು ವರೆಗೆ ರಾಮಲಕ್ಷ್ಮಣರಿಗೆ ತಿಳಿದಿರಲಿಲ್ಲ. ವಿಭೀಷಣನನ್ನು ಶಾಂತ ಗೊಳಿಸುವುದು ಬಲು ಕಠಿನವಾಯಿತು, ಅವನ ನಂತರ ವೀರಬಾಹುವು ಯುದ್ಧಕ್ಕೆ ಬರಲು, ಅವನನ್ನು ವೈಷ್ಣವಾಸ್ತ್ರದಿಂದ ಕೊಲ್ಲಬೇಕಾಯಿತು.

ಇನ್ನೊಮ್ಮೆ ಇಂದ್ರಜಿತುವೇ ಯುದ್ಧ ಸನ್ನದ್ದನಾದನು. ಆವನೇ ರಾವ ಣನ ಜೇಷ್ಠ ಪುತ್ರನು. ಅತಿ ಪ್ರೀತಿಯ ಮಗನು, ಪಡುವಣ ದ್ವಾರಕ್ಕೆ ಅವನು ಸೈನ್ಯಗಳೊಡನೆ ಬಂದನು. ಅಲ್ಲಿನ ವಾನರ ಸೇನೆಗಳು ನೆಲೆಯಿಲ್ಲದೆ ಓಡಿದುವು, ಇಂದ್ರಜಿತುವು ಸೀತೆಯ ಒಂದು ಪ್ರತಿಮೆಯನ್ನು ಉಂಟು ಮಾಡಿ, ಅದನ್ನು ಎತ್ತರವಾಗಿ ರಾಮನಿಗೆ ತೋರುವಂತೆ ನಿಲ್ಲಿಸಿದನು. ಎಲ್ಲರೂ ಅತ್ತರು. ಇಂದ್ರಜಿತುವು ಎಲ್ಲರೂ ನೋಡುತಿದ್ದಂತೆ ಈ ಮಾಯಾ ಸೀತೆಯನ್ನು ಕಡಿದುಹಾಕಿದನು, ರಾಮಲಕ್ಷ್ಮಣರು ಸೀತೆ ಸತ್ತಳೆಂದು ದುಃಖಗೊಂಡು ಎದೆಯೊಡೆದು ಮಡಿದರೆ, ಅಥವಾ ಹಿಂತೆರಳಿದರೆ, ಸುಲಭ ವಾಗಿ ರಾಕ್ಷಸರಿಗೆ ಜಯವಾಗುವುದಲ್ಲವೆ? ವಾನರರೂ ಹಾಹಾಕಾರವನ್ನೆತ್ತಿ ದರು! ರಾಮಲಕ್ಷ್ಮಣರು ಯುದ್ಧ ಮಾಡಿದರು! ಈ ಮಾಯಾ ಸೀತೆಯ