ಪುಟ:Siitaa-Raama.pdf/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

________________

78

ವೃತ್ತಾಂತವನ್ನು ವಿಭೀಷಣನ ತಿಳುಹಿದನು, ಆದರೆ ಅವನನ್ನು ಜಾಂಬ ವಾಂಗದರು ನಂಬುವರೆ! ಹನುಮಂತನನ್ನು ಪುನಃ ಅಶೋಕವನಕ್ಕೆ ಕಳುಹಲಾಯಿತು. ಅಲ್ಲಿ ಸೀತಾದೇವಿಯು ಎಂದಿನಂತೆ ರಾಮಧ್ಯಾನವನ್ನು ಮಾಡುತಲಿದ್ದಳು. ಇದನ್ನು ತಿಳಿದು ವಿಭೀಷಣನು ತಾವೆಲ್ಲರು ಶೋಕ ಮಗ್ನರಾಗಿರುವಾಗ ಇಂದ್ರಜಿತುವು ನಿರ್ವಿಘ್ನವಾಗಿ ನಿಕುಂಭಿಲಾ ಯಜ್ಞವನ್ನು ಮಾಡಲು ಈ ಮಾಯೆಯನ್ನು ಹೂಡಿದನು. ಈ ಯಜ್ಞಕ್ಕೆ ಪೂರ್ಣಾಹುತಿ ಯನ್ನು ಕೊಟ್ಟು ಅವನು ಯುದ್ಧಕ್ಕೆ ಬಂದರೆ ಅವನಿಗೆ ಜಯವಾಗುವುದು ನಿಶ್ಚಯವು. ಈಗಲೆ ಅವನ ಯಜ್ಞವನ್ನು ಭಂಗಗೊಳಿಸಿದಲ್ಲದೆ ಉಪಾಯ ವಿಲ್ಲ. ವೃಥಾಶೋಕವೇಕೆ?' ಎಂದು ರಾಮಲಕ್ಷ್ಮಣರಿಗೆ ಬಿನ್ನಹ ಮಾಡಿದನು.

ಕೂಡಲೇ ಅಸಂಖ್ಯ ವಾನರರೊಡನೆ ಲಕ್ಷ್ಮಣನು ಯಜ್ಞಸ್ಥಳಕ್ಕೆ ನಡೆ ದನು, ವಾನರರು ನಾನಾ ವಿಧವಾಗಿ ಕಲ್ಲು ಮರಗಳನ್ನೆಸೆದು ಯಜ್ಞ ಕುಂಡದಲ್ಲಿನ ಬೆಂಕಿಯನ್ನು ನಂದಿಸಿದರು. ಅವನಿಗಾಗಿ ಆಗಲೆ ಒಂದು ದಿವ್ಯವಾದ ವಿಜಯರಥವು ಮೇಲೇರಿ ಬರುತ್ತಿದ್ದಿತು. ಅದು ಅಲ್ಲಲ್ಲಿಗೇ ಮಾಯವಾಯಿತು. ಇಂದುಜಿತುವು ಸಿಟ್ಟಾಗಿ, ಯಜ್ಞವನ್ನು ಅಲ್ಲೇ ಬಿಟ್ಟು, ಹೊರಬಿದ್ದು, ಭಯಂಕರ ಕಾದಾಟಕ್ಕೆ ಪ್ರಾರಂಭಿಸಿದನು, ಯಾರ ಕಣ್ಣಿಗೂ ಕಾಣದಂತೆ, ಹೊಗೆ ಮೋಡವನ್ನೆಬ್ಬಿಸಿ ಮರೆಯಲ್ಲಿ ನಿಂದು ಯುದ್ಧ ಮಾಡು ವಂತಹ ಚಾತುರ್ಯವು ಇಂದ್ರಜಿತುವಿನದಾಗಿದ್ದಿತು. ಬಹಳ ಕಾದಾಟ ವಾದ ಬಳಿಕ ಲಕ್ಷ್ಮಣನು ಅವನ ಮೇಲೆ ಬ್ರಹ್ಮಾಸ್ತ್ರವನ್ನೆಸೆದನು. ಅದು ಇಂದ್ರಜಿತುವನ್ನು ಕೊಂದಿಕ್ಕಿತು, ವಾನರರು ಜಯಧ್ವನಿ ಮಾಡಿ, ಇಂದು ಜಿತುವಿನ ರುಂಡವನ್ನು ಕಿತ್ತುಕೊಂಡರು. ಲಕ್ಷ್ಮಣನ ಮೈಯೆಲ್ಲ ಗಾಯ ವೊ ಡೆ ದಿದ್ದಿ ತು. ಸುಷೇಣನು ಅವನಿಗೆ ಯೋಗ್ಯ ಉಪಚಾರ ಮಾಡಿದನು.

ಇಂದ್ರಜಿತುವು ಮುಡಿದೊಡನೆ, ಅವನ ಪತ್ನಿಯಾದ ಸುಲೋಚನೆಯ ಸತಿಯಂತ ಅಲಂಕೃತೆಯಾಗಿ, ರಾವಣನಿಂದ ಹೇಗೂ ಅಪ್ಪಣೆಯನ್ನು ಬೇಡಿ, ರಾಮನಿಂದ ರುಂಡವನ್ನು ಪಡೆದು ಸಹಗಮನ ಮಾಡಿದಳು. ಈ ದೃಶ್ಯ «ದಿಂದ ರಾವಣನು ಮನಸ್ಸಿನಲ್ಲಿ ತುಂಬ ಕರಗಿದನು.