ಪುಟ:Siitaa-Raama.pdf/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

________________

79

ರಾವಣನ ಪಕ್ಷವಾಗಿ ಇನ್ನು ಯುದ್ಧ ಮಾಡಲು, ಲಂಕಾಪುರದಲ್ಲಿ ಮಹಾವೀರರು ಯಾರೂ ಉಳಿಯಲಿಲ್ಲ. ಇಂದ್ರಜಿತುವು ಮಡಿದನೆಂದು ಮಾತ್ರವೇ ಅಲ್ಲದೆ, ಅವನ ಮರಣಕ್ಕೆ ವಿಭೀಷಣನು ಕಾರಣನಾದನೆಂದೂ ತಿಳಿದು ಅವನನ್ನು ಕೊಲ್ಲದೆ ನಿರ್ವಾಹವಿಲ್ಲೆಂದು, ರಾವಣನು ಖಡ್ಡವನ್ನು ಹಿಡಿದುಕೊಂಡು ಯುದ್ಧಕ್ಕೆ ಬಂದೇ ಬಂದನು. ಅವನ ಇದಿರು ಯಾವ ವಾನರರೂ ನಿಲ್ಲಲಾರದಾದರು, ಆಗಲೆ ಅವನು ಮಹತ್ತಾದ ಒಂದು ಶಕ್ತಿ ಯನ್ನು ವಿಭೀಷಣನ ಮೇಲೆ ಪ್ರಯೋಗಿಸುವನೆನ್ನಲು, ಅದನ್ನು ತಡೆಯು ವುದಕ್ಕೆ ಲಕ್ಷ್ಮಣನು ರಾವಣನನ್ನು ಬಾಣಗಳಿಂದ ಮುಚ್ಚಿದನು. ಇದರ ಪರಿಣಾಮವಾಗಿ, ಅವನು ಆ ಶಕ್ತಿಯನ್ನು ಲಕ್ಷ್ಮಣನ ಮೇಲೆ ಎಸೆದನು, ಅದು ಲಕ್ಷ್ಮಣನನ್ನು ಬಡೆದು ಕೆಡೆಬೀಳಿಸಿತು. ವಾನರರು ಗೋಳಿಟ್ಟರು. ಆಗ ರಾಮನೇ ಮುಂದಕ್ಕೆ ಬಂದು ರಾವಣನನ್ನು ಆಕ್ರಮಿಸಿದನು. ಆಗ ರಾವಣನು ಬೆನ್ನು ತೋರಿಸಿ ರಣರಂಗದಿಂದ ಲಂಕೆಗೆ ಓಡಿದನು. ಇತ್ತ ಸುಷೇಣನು ಲಕ್ಷ್ಮಣನನ್ನು ಪುಜ್ಞೆಗೆ ತಂದನು,

ಅಷ್ಟರಲ್ಲಿ ರಾವಣನು ಅದೇ ಸಮಯವೆಂದು ಸೀತೆಯನ್ನು ಕೊಲ್ಲು ವುದಕ್ಕಾಗಿ, ಆಥವಾ ವಶಗೊಳಿಸುವುದಕ್ಕಾಗಿ ಅಶೋಕವನಕ್ಕೆ ತೆರಳಿದನು, ಮಂಡೋದರಿಯು ಅವನೆತ್ತಿದ ಖಡ್ಡಕ್ಕೆ ತಾನೇ ತಲೆಕೆಟ್ಟುದರಿಂದ, ಅವನು ಅಲ್ಲಿಂದ ಹಿಂದಕ್ಕೆ ಬಂದನು. ಬರುವಾಗಲೇ ' ಜಯರಾಮ !' ಎಂಬ ಮಹಾಧ್ಯನಿ! ಲಕ್ಷ್ಮಣನು ಜೀವಿಸಿರುವನೆಂದಾಯಿತು. ವಾನರರ ಕಿಲಕಿಲ ಧ್ವನಿ ಕೇಳದಿರಲಾಗುವುದೆ? ರಾವಣನು ಇನ್ನೊಮ್ಮೆ ತಾನೆ ಯುದ್ಧಕ್ಕೆ ಬರುವನೆಂದಾಯಿತು, ಆದರೆ ಅದರಷ್ಟರಲ್ಲಿ, ಅವನಿಗೆ ಮಗನಾಗಿ ಪಾತಾಳದಲ್ಲಿದ್ದ ಮಹಿರಾವಣನ ನೆನಪಾಗಿ, ಅವನನ್ನು ಯುದ್ಧಕ್ಕೆ ಬರಲು ಆಜ್ಞಾಪಿಸಿದನು.

ಈ ವೃಂತ್ತಾತವು ವಾನರಸೇನೆಗಳಿಗೂ ತಿಳಿಯಬರಲು ಮಾಯಾ ವಿದ್ಯಾಪಾರಂಗತನಾದ ಮಹಿರಾವಣನಿಂದ ಕಾಪಾಡಿಕೊಳ್ಳುವುದಕ್ಕಾಗಿ ಎಲ್ಲರೂ ಸಾವಧಾನವಾಗಿರಬೇಕೆಂದು ನಿಶ್ಚಯವಾಯಿತು, ಕಪಿನಾಯಕ ಶೆಲ್ಲರೂ ಶಿಬಿರವನ್ನು ಕಾಪಾಡುವುದಕ್ಕೆ ನಾನಾ ವ್ರಹಗಳನ್ನು ರಚಿಸಿ ಪವಡಿಸಿದರು. ವಿಭೀಷಣನು ಮಹಿರಾವಣವನ್ನು ಚೆನ್ನಾಗಿ ಬಲ್ಲನು,