ಪುಟ:Siitaa-Raama.pdf/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

________________


81

ಯಾವ ವೇಷದಿಂದಲಾದರೂ ಒಳನುಗ್ಗಲಾಗುವುದಿಲ್ಲೆಂದು ಮಹಿರಾವಣನು ಈ ರೀತಿ ನನ್ನ ವೇಷದಿಂದ ಒಳಹೋಗುವಂತೆ ಮಾಡಿದ ಕಪಟತನಕ್ಕೆ ನೀವು ಮರುಳಾಗಿ ಎಲ್ಲವನ್ನೂ ಕೆಡಿಸಿದಿರಿ' ಎನ್ನಲು, ಹನುಮಂತನು ನಾಚಿಕೊಂಡನು,

ಮಹಿರಾವಣನು ಹನುಮಂತನಿಗೆ ಮೋಸವನ್ನು ಮಾಡಿದನಲ್ಲವೆ? ಅವನು ವಿಭೀಷಣನೊಡನೆ ಪಾಳೆಯವನ್ನು ಹೊಕ್ಕು ನೋಡಿದರೆ, ಎಲ್ಲರೂ ನಿದ್ದೆ ಹೋಗಿರುವರು, ರಾಮಲಕ್ಷ್ಮಣರೇ ಅಲ್ಲಿಲ್ಲ. ಇವರಿಬ್ಬರೂ ಗೋಳಾ ಡಿದರು. ಈ ಗೋಳಾಟಕ್ಕೆ ಎಲ್ಲರೂ ಎಚ್ಚೆತ್ತರು. ಸಂಗತಿಯನ್ನು ತಿಳಿದು ಅವರೂ ಅತ್ತುಕೊಂಡರು, ಎಲ್ಲರೂ ಅತ್ತು ಮಾಡುವುದೇನು? ಹಾಹಾ ಕಾರವು ಆಕಾಶಕ್ಕೇರಿತು, ಜಾಂಬವಂತನು ಹನುಮಂತನೇ ಭಾಮ ಲಕ್ಷ್ಮಣರನ್ನು ಹುಡುಕಿ ತರಬೇಕೆಂದನು. ಹನುಮಂತನು ಅತ್ತಿತ್ತ ಹುಡುಕುವಾಗಲೆ ಪಾತಾಳದ ಕಡೆಗೆ ಅದೊಂದು ಸುರಂಗವು ತೊರೆ ಬಂದಿತು. ಅವನು ಅದರ ಉದ್ದೇಶವನ್ನು ತಿಳಿದುಕೊಂಡನು. ಹನು ಮcತನು ಕೂಡಲೆ ಸುರಂಗಮಾರ್ಗವಾಗಿ ಪಾತಾಳಕ್ಕಿಳಿದನು, ಅಲ್ಲಿ ಸೂರ್ಯೋದಯವಾಗಿದೆ. ಅದೆಂತಹ ಮನೋಹರ ನಗರವು! ಭಗವತೀ ಗಂಗಾನದಿಯು ಹರಿಯುತ್ತಲಿದೆ. ಅದರ ತೀರದಲ್ಲೆಲ್ಲ ಉಪವನಗಳು, ಅಲ್ಲಿನ ನಾಗಕನೈಯರೂ ಯಕ್ಷಿಣಿಯರೂ ತುಂಬ ಚೆಲುವೆಯರೇ,

ಹನುಮಂತನು ರಾಮಲಕ್ಷ್ಮಣರಿಗಾಗಿ ಎತ್ತೆತ್ತಲೋ ಹುಡುಕಿದನು. ಇಲ್ಲ, ಅವರ ಸುಳಿವೇ ಇಲ್ಲ. ಹಿಂದುಗಡೆಯಲ್ಲಿಯೆ, ಮಹಾಮಾಯೆಯ ಪೂಜೆ! ನರಬಲಿಯಾಗುವುದಂತೆ! ಇಬ್ಬರು ಸುಂದರ ಪುರುಷರನ್ನು ದೇವಿಗೆ ಬಲಿಯಾಗಿ ಕಡಿಯುವರಂತೆ! ಹನುಮಂತನು ಎಲ್ಲವ ಕೊಂಡನು. ಮೆಲ್ಲನೆ ವೇಷಮರೆಸಿಕೊಂಡು ರಾಮಲಕ್ಷ್ಮಣರದ್ದಲ್ಲಿಗೇ ಹೋಗಿ, ಅವರಿಗೆ ಎಲ್ಲ ವೃತ್ತಾಂತವನ್ನೂ ವಿವರಿಸಿದನು. ಅವನು ಮಾಡುವರು? ಧನುರ್ಬಾಣಗಳಿಲ್ಲ; ಹೇಗೆ ಸಾಹಸಮಾಡುವರು? ಹನು ಮಂತನು ಒಂದು ಉಪಾಯವನ್ನು ಭಾವಿಸಿ, ರಾಮಲಕ್ಷ್ಮಣರಿಗೆ ಅದನ್ನು ಸಚಿಸಿದನು. ಅದಕ್ಕಾಗಿ ದೇವಾಲಯದೊಳಗೆ ಮೊದಲಾಗಿ ನಡೆದು ವಿಗ್ರಹದ ಮರೆಯಲ್ಲಿ ಅಡಗಿಕೊಂಡನು.