ಪುಟ:Siitaa-Raama.pdf/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

________________

84

ಲಕ್ಷಣನು ಅವನ ನೆತ್ತಿಯ ಮೇಲೆ ತೀರ್ಥಗಳನ್ನು ಸುರಿದನು, ಇನ್ನು ಲಂಕೆಗೆ ಧಾರ್ಮಿಕನಾದೊಬ್ಬ ಅರಸು ದೊರೆತನೆಂದು ಪುಜೆಗಳು ಸುಖ ಪಟ್ಟರು,

ಕಾಮನು ರಾಜಸಭೆಯಲ್ಲಿ ಓಲಗಂಗೊಟ್ಟು ಕುಳಿತಿರುವನು, ರಾಕ್ಷ ಸರು ಒಬ್ಬೊಬ್ಬರಾಗಿ ಬಂದು ಅವನ ಕಾಲಿಗೆರಗುತ್ತಿರುವರು. ಆಗ ಸೀತಾದೇವಿಯನ್ನು ಕರೆದು ತರಲು ವಿಭೀಷಣನನ್ನು ರಾಮನು ಕಳುಹಿದನು, ಚಿನ್ನದ ರಥವನ್ನು ತೆಗೆದುಕೊಂಡು ಅವನು ಅಶೋಕವನಕ್ಕೆ ತೆರಳಿದನು. ಅವಳು ಆ ರಥವನ್ನು ನೋಡಿ ಆನಂದಪಡೆದಳು, ವಿಭೀಷಣನ ಪತ್ನಿ ಯಾದ ಸರಮೆಯು ಬಹು ಯತ್ನದಿಂದ ಸೀತಾದೇವಿಯನ್ನು ಸಿಂಗರಿಸಿ ರಥವನ್ನೇರಿಸಿ ರಾಮನ ಬಳಿಗೆ ಕರೆದು ತಂದಳು. ಅವಳನ್ನು ನೋಡಿಯೆ ರಾಮನು ಅತ್ಯಾನಂದವನ್ನು ಹೊಂದಿದನು; ಸೀತೆಯ ಆಗ ಅತ್ಯಾನಂದ ವನ್ನು ಹೊಂದಿದಳು, ಲಕ್ಷ್ಮಣನು ಸೀತಾದೇವಿಯನ್ನು ನಂದಿಸಿ ಸಭೆಗೆ ನಡೆಯಿಸಿ ತಂದನು, ಸೀತೆಯು ಬಾಡಿ ಮುಂದಿದ್ದಳು,

ಹೊಂಪಳಿದ ತನುಲತೆಯ, ಹರುಷದ

ಸೋಂಪ ಸಡಿಲಿದ ಮುಖದ ನೋಟದ

ಗುಂಪು ತಗೆದಕಿಗಳ ಕೋಡಿಯೊಳೆಯುವ ಕಂಬನಿಯ

ಕಂಪಿಸುವ ಕರಣಂಗಳಂಜಿಕೆ

ಝಂಪಿಸುವ ಮಾನಸದಲಟ್ಟೆಯ

ಕಂಪಿನಂಬುಜವದನೆ ಮೈಯಿಕ್ಕಿದಳು ನಿಜಪತಿಗೆ.

ಅವಳು ರಾಮನ ಕಾಲಿಗೆರಗಿ, ತೃಪ್ತಿ ಹೊಂದಿದಳು. ಆದರೂ ಲಜ್ಜೆಯಿಂದ ರಾಮನ ಒಂದು ಮಗ್ಗುಲಲ್ಲಿ ನಿಂದಳು. ರಾಮನು ಧೀರನೂ ಗಂಭೀರನೂ ಆಗಿ ಕುಳಿತನಲ್ಲದೆ ಒಂದನ್ನೂ ಆಡಿದುದಿಲ್ಲ,

ರಾಮನು ನಿಟ್ಟುಸಿರು ಸುಯ್ದನು. * ಸೀತೆಯೆ, ಬಹಳ ಕಷ್ಟದಿಂದ ನಿನ್ನನ್ನು ಉದ್ಧರಿಸಿದೆನು, ನಿನ್ನನ್ನು ಕಾಣುವನೋ ಇಲ್ಲವೋ ಎಂದು ಸಂದೇಹ ಗೊಂಡಿದ್ದನು. ಆದರೂ ಈಗ ನಾನು ಸುಖಿಯಲ್ಲ. ಇದಿರಲ್ಲಿ ದುಃಖ ಸಾಗರವಿದೆ, ಇಷ್ಟು ಕಾಲ ರಾಕ್ಷಸರ ನಗರದಲ್ಲಿದ್ದೆಯಲ್ಲವೆ ? ನಿನ್ನನ್ನು ಹೀಗೆಯೆ ನಾನು ಪರಿಗ್ರಹಿಸಲಾರೆನು, ಹಾಗೆ ಮಾಡಿದನಾದರೆ ಮುಂದೆ