ಪುಟ:Siitaa-Raama.pdf/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

85

ನನ್ನ ಪುಜಾಜನರು ಏನೆನ್ನುವರು? ನಿನ್ನನ್ನು ಧರ್ಮಪರೀಕ್ಷೆಗೊಳಪಡಿ ಸದೆ ನಿರ್ವಾಹವಿಲ್ಲ' ಎಂದನು,

ಸೀತೆಯು ಎಲುವುಗೂಡಿನಂತಿದ್ದಳು. ಮೊಗವು ಬಾಡಿ ಚಿಕ್ಕುದಾಗಿ ದ್ದಿತು. ಆದರೂ, ಅವಳ ಮುಖದ ಮೇಲೆ ಎಂತಹ ತೇಜಸ್ಸು ಹೊಳೆಯು ತಿದ್ದಿತು! ಅವಳು ಯಾವ ಪರೀಕ್ಷೆಗೂ ಬೆದರುವಳೇಕೆ ? ಸ್ವಾಮಿಯ ಪಾದಗಳನ್ನು ನಂಬಿದ ಯಾವಳೂ ಯಾವ ಪರೀಕ್ಷೆಗೂ ಬೆದರುವುದುಂಟೆ ? ಪರತೆಯಾದವಳಿಗೆ ಇದರಷ್ಟು ಬಲವನ್ನು ಇನ್ನಾವುದು ತಾನೆ ಕೆಡ ಲಾಪದು ?

ಲಕ್ಷ್ಮಣನು ಬೆಂಕಿಯನ್ನು ಒಂದು ಕುಂಡದಲ್ಲಿ ಪ್ರಜ್ವಲಗೊಳಿಸಿದನು. ಸಭಿಕರೆಲ್ಲರೂ ಭೀತರಾದರು, ಜೀವಿತೆಯಾಗಿರುವ ಸೀತೆಯು ಬೆಂಕಿ ಯೊಳಕ್ಕೆ ನುಗ್ಗಿ ಮೇಲಕ್ಕೆದ್ದು ಬರುವಳಂತೆ ! ಸೀತೆಯು ರಾಮನ ಚರಣ ಗಳನ್ನು ಏಳು ಬಾರಿ ವಂದಿಸಿದಳು, ಬೆಂಕಿಯೊಳಗೆ ಹಾಕಿದಳು. ಎಲ್ಲರ ಹಾ ಹಾ ಎಂದರು. ಅಲ್ಲಿದ್ದ ಹೆಂಗಸರು ಗೋಳಾಡಿದರು, ಸೀತೆಯು ರಾಮನನ್ನು ವಂದಿಸಿ ಅದೇ ಅಗ್ನಿಯಲ್ಲಿ ಕಾಮಧ್ಯಾನ ಮಾಡುತಲಿದ್ದಳು! ಉಟ್ಟ ಬಟ್ಟೆಗೂ ಬೆಂಕಿಯ ಉಷ್ಣತೆಯು ತಗಲಿಲ್ಲ. ಪುಜಾಜನರು 1 ಸೀತಾ ಮಾತೆಗೆ ಜಯವಾಗಲಿ!' ಎಂದು ಜಯಘೋಷವನ್ನು ಮಾಡಿ ದರು. ರಾಮಲಕ್ಷ್ಮಣರು ಆನಂದಿತರಾದರು, ಸುರಲೋಕದಿಂದ ದಶ ರಥರಾಯನೇ ಆಗ ವಿಮಾನವನ್ನೇರಿ ಅಲ್ಲಿಗೆ ಬಂದು ಎಲ್ಲರಿಗೂ ಕಾಣಿಸಿ ಕೊಂಡನು, 1 ಸೀತೆಯು ಪರಮಪವಿತ್ರೆ: ಇನ್ನು ಇವಳನ್ನು ಪರಿಗ್ರಹಿಸು' ಎಂದು ಅವನೂ ಹರಸಿ ಆಶೀರ್ವದಿಸಿದನು ರಾಮನು ತಾನೆ ಎದ್ದು , ತಂದೆಗೆ ತಲೆಬಾಗಿ, ಸೀತಾ ದೇವಿಯನ್ನು ಅಗ್ನಿಕುಂಡದಿಂದ ಎತ್ತಿ, ತನ್ನ ಮಗ್ಗುಲಲ್ಲಿ ಕುಳ್ಳಿರಿಸಿಕೊಂಡನು. ಅವಳೂ ಪತಿಯು ಪ್ರೇಮವನ್ನು ಸಂಪಾ ದಿಸಿಕೊಂಡು, ಸ್ವರ್ಗಸುಖದ ಅನುಭವ ಹೊಂದಿದಳು, ಇಂತಹ ಪತ್ನಿ ಯಿರುವುದರಿಂದ ತಾನು ಭಾಗ್ಯವಂತನಾದೆನೆಂದು ಭಾವನೆಂದನು.

ಇನ್ನು ಅಯೋಧ್ಯೆಗೆ ಮರಳುವುದಕ್ಕೆ ಸುಮ್ಮನೆ ವಿಳಂಬವೇತಕ್ಕೆ ? ಸೈನ್ಯವು ಸಿದ್ಧವಾಯಿತು. ಎಲ್ಲರೂ ರಥಗಳನ್ನೇರಿದರು. ಗಾಳಿ ಹರಿದಂತೆ