ಪುಟ:Siitaa-Raama.pdf/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

________________


87

ಚರ್ಮ ಇಷ್ಟೆ ಇದ್ದು ಬಡವಾಗಿರುವನು. ಸರಿಯಾಗಿ ನಡೆಯಲಾರನು. ಅವನ ತಲೆ ಜಡೆ ಕಟ್ಟಿದೆ. ಹನುಮಂತನು ಭಕಿತನನ್ನು ಎತ್ತಿಕೊಂಡು ಕಾಮನ ರಥದ ಮೇಲೆ ಇಳಿಸಿದನು. ಅವನೊಡನೆ ಶತ್ರುಘ್ನನಿದ್ದನು. ಭರತನು ರಾಮನನ್ನು ನಂದಿಸಿ, ಲಕ್ಷ್ಮಣನನ್ನು ಆಲಿಂಗಿಸಿದನು. ಅವರು ಹರ್ಷಗೊಂಡು ಕಣ್ಣೀರು ಮಿಡಿದರು,

ರಾಮಚಂದ್ರನು ಬ್ರಾಹ್ಮಣರನ್ನು ನಂದಿಸಿ, ತಾಯಂದಿರಿಗೆ ತಲೆ ಬಾಗಿದನು, ಎಲ್ಲರೂ ಆಶೀರ್ವದಿಸಿದರು. ಸೀತೆಯ ಅದರಂತೆ ಎಲ್ಲರನ್ನು ಪ್ರಣಮಿಸಿದಳು. ಅವಳನ್ನು ಕಂಡವರು ಅತ್ತರು, ರಾಮನು ' ದೇವಿ ಯರೆ, ನಿಮ್ಮ ಪ್ರಾಣದ ಲಕ್ಷ್ಮಣನು ಇಲ್ಲಿರುವನು' ಎಂದು ಸುಮಿತ್ರೆಯ ಕಳೆ ರಗಿ, ಲಕ್ಷ್ಮಣನನ್ನು ಒಪ್ಪಿಸಿದನು. ಲಕ್ಷ್ಮಣನು ತನಗಾಗಿ ಸಹಿಸಿದ ಸಂಕಷ್ಟ ಪರಂಪರೆಗಳನ್ನು ಹೇಳಿ, ಅ೦ತಹ ಸೋದರನು ಇನೆಲ್ಲಿಯೂ ಇಲ್ಲವೆಂದನು. ಅಣ್ಣನ ವಿಪತ್ತು ಲಕ್ಷ್ಮಣನಿಗೆ ಸಂಸತ್ತು ಎಂದು ಅವಳೆಂದಳು,

ಇನ್ನು ರಾಮನ ಪಾದುಕೆಗಳನ್ನು ತಲೆಯಲ್ಲಿ ಧರಿಸಿದ್ದ ಭರತನು, ಅವುಗಳನ್ನು ರಾಮನ ಚರಣಗಳ ಬಳಿಯಲ್ಲಿ ಇರಿಸಿದನು. ಈ ಅಣೆ, ನಾನು ಇವೇ ಹದಿನಾಲ್ಕು ವರ್ಷ ಈ ಪಾದುಕೆಗಳ ಸೇವೆಯನ್ನು ಮಾಡಿರುವೆನು. ಇಂದಿಗೆ ನನ್ನ ಆ ವ್ರತವು ಸಾಂಗವಾಗಿ ಮುಗಿದಿದೆ. ಈ ಪಾದುಕೆಗಳನ್ನು ಕಂಡೇ ಪ್ರಜೆಗಳೆಲ್ಲರೂ ವಿಧೇಯರಾಗಿದ್ದು ಸುಖಗೊಂಡಿದ್ದರು. ಇನ್ನು ಇವುಗಳನ್ನು ಮೆಟ್ಟಿ ಕೊಂಡು ನಮಗೆಲ್ಲ ಆನಂದವನ್ನು ಉಂಟುಮಾಡಬೇಕು, ಇನ್ನು ಮಹಾರಾಜರಾದ ತಮ್ಮ ಪಾದಾರವಿಂದಗಳೇ ಇಲ್ಲಿರುವಾಗ, ನಮಗೆ ಆ ಪಾದುಕೆಗಳೇಕೆ?' ಎಂದು ಭರತನು ನುಡಿದನು,

ರಾಮನು ಈ ಪಾದುಕೆಗಳನ್ನು ಕಾಲಿಗೆ ಸಿಕ್ಕಿಸಿಕೊಂಡನು. ಆಗಲೇ– ಜಯ ಸೀತಾರಾಮ!' ಎಂದು ಧ್ವನಿಯೆದ್ದಿತು, ಅಲ್ಲಿಂದ ಆ ಮೆರವಣಿಗೆಯು ಅಯೋಧ್ಯೆಗೆ ಮು೦ದರಿಸಿತು. ರಾಮನು ಅಯೋಧ್ಯೆಗೆ ಬಂದವನೇ ಮೊದಲಾಗಿ ಕೈಕೇಯಿಯನ್ನೇ ಕಂಡು ತಲೆಬಾಗಿದನು. ಅವಳ ದುಃಖವು ಅಷ್ಟಿಷ್ಟಲ್ಲ, ನಾಚುಗೆಗೆ ಕಡಿಮೆಯಿಲ್ಲ; ಅವಳು ಮಾತyಲಿಲ್ಲ; ತನ್ನ ತಪ್ಪನ್ನು ನೆನೆದು ಅವಳು ಪಶ್ಚಾತ್ತಾಪಗೊಂಡಿರುವಳು, ರಾಮನೇ