ಪುಟ:Siitaa-Raama.pdf/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

88

ಅವಳಿಗೆ ಸಮಾಧಾನ ಹೇಳಿದನು. ಹಿಂದಣ ವೃತ್ತಾಂತವನ್ನು ಮರೆಯ ಬೇಕೆಂದು ಎಷ್ಟೋ ಸಲ ಬೇಡಿಕೊಂಡನು. ರಾಮವಾಕ್ಯಗಳನ್ನು ಕೇಳಿ ಕೈಕೇಯಿಯು ಅವನನ್ನು ಆಶೀರ್ವದಿಸಿದಳು, ರಾಜಸಭೆಯು ಸೇರಿತು. ವಾದ್ಯಗಳು ಮೊಳಗಿದುವು. ಸೀತಾರಾಮರಿಗೆ ಉಚ್ಚ ಸಿಂಹಾಸನವು, ಆಗ ಭರತನು ಎದ್ದು ನಿಂತುಕೊಂಡನು, “ ನಾನು ರಾಮದಾಸನು, ಆತನ ಆಜ್ಞಾನುಸಾರವಾಗಿ ನನ್ನ ಕೈಯಲ್ಲಿ ರಾಜ್ಯಭಾರವು ಇದ್ದಿತು. ಆತನು ಹದಿನಾಲ್ಕು ಸಂವತ್ಸರಗಳ ವನವಾಸ ದಲ್ಲಿದ್ದಾಗ, ನಾನು ಆತನ ಚರಣಗಳ ಹೆಸರಿನಲ್ಲಿ ರಾಜ್ಯವನ್ನಾಳಿದನು. ಇಂದು ಆತನೇ ರಾಜ್ಯಭಾರವನ್ನು ವಹಿಸಿಕೊಂಡಿರುವನು, ಇನ್ನು ನಾನು ನಿಶ್ಚಿಂತನಾಗಿರುವೆನು' ಎಂದು ಭರತನು ಸಭೆಗೆ ಹೇಳಿಕೊಂಡನು.

ಶುಭಲಗ್ನದಲ್ಲಿ ಸೀತಾ- ರಾಮರಿಗೆ ಪಟ್ಟಾಭಿಷೇಕವಾಯಿತು, ಏಳು ಸಾಗರಗಳ ಏಳುನೂರು ನದಿಗಳ ತೀರ್ಥವನ್ನು ತರಿಸಿ, ಅವರನ್ನು ಅಭಿ ಷೇಕಿಸಿದರು. ರಾಜ್ಯದಲ್ಲೆಲ್ಲರೂ ಸುಖಿಗಳು, ರಾಜ್ಯದಲ್ಲಿ ಜಯಧ್ವನಿಗಳು ಮೊಳಗಿದುವು.

ರಾಮನು ರಾಜ್ಯಭಾರವನ್ನು ಮಾಡಲು ತೊಡಗಿದನು, ಬಹು ಕಾಲದ ಆ ರಾಜ್ಯಭಾರವು ಎಷ್ಟು ಚೆನ್ನಾಗಿದ್ದಿತೆಂದರೆ,- ಅತ್ಯುತ್ತಮ ರಾಜ್ಯಕ್ಕೆ ಇಂದಿನ ವರೆಗೆ ' oಾಮರಾಜ್ಯ' ಎಂದು ಹೋಲಿಸಿ ಕರೆವುದುಂಟು. ಅದೆಲ್ಲವನ್ನು ಬಣ್ಣಿಸಿ ಇಷ್ಟರಲ್ಲಿ ಮುಗಿಸಲಾಗುವುದಿಲ್ಲ. ಇಂತಹ ಅಪೂರ್ವ ಚರಿತ ನಾಯಕನು ಭಾರತವರ್ಷದಲ್ಲಿ ರಾಮನೊಬ್ಬನೇ, ಅವನ ಸಾಹಸ, ಅವನ ಗುಣಾತಿಶಯ, ಅವನ ಆಳಿಕೆ- ಇವುಗಳಿಂದ ಅವನು ಭಗವಂತ ನಂತೆ ಹಿಂದೂಚರಿತ್ರೆಯಲ್ಲಿ ತೋರುತ್ತಿರುವನು, ಸೇತುವಿನಿಂದ ಹಿಮಾ ಚಲದ ವರೆಗೆ ಭಗವಂತನಿಗೆ ಜಯವಾಗಲೆನ್ನುವ ಅರ್ಥದಲ್ಲಿ, ಈಗಲೂ ಹೇಳುವರು-ಜ ಯ ಸೀತಾ ರಾಮ !

ಸ೦ ಪೂ ಣ ೯೦