ಪುಟ:Subhadre.djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

14 ಮಾಧವರಾಯನಿಗೆ ಈಗ ೨೦ ವರುಷ ವಯಸ್ಸು, ಅವನ ತಂದೆಯ ಹೆಸರು ಶಂಕರರಾಯ, ಆತನು ಪುನಹೆಯಲ್ಲಿ ಭಾರಿ ಜರ್ಮಿಾದಾರನಾಗಿ ಹೆಸರುವಾಸಿಯಾಗಿದ್ದನು. ಮಾಧವನು ಹುಡುಗ ನಾಗಿದ್ದಾಗಲೆ ಅವನ ತಾಯಿ ಸತುಹೋಗಿದ್ದಳು. ಅವನಿಗೆ ಗಂಗಾ ಬಾಯಿ ಹೊರತು ತಾಯಿಯ ಕಡೆಯ ಬಂಧುಗಳೇ ಇರಲಿಲ್ಲ. ಅವ ಳನ್ನು ನೋಡಿಕೊಂಡು ಬರುವುದಕ್ಕೋಸ್ಟರ ತಂದೆಯ ಅಪ್ಪಣೆ ಪಡೆದು ರಾಮ ಪುರಕ್ಕೆ ಬಂದಿದ್ದನು. ಮಾಧವನ್ನು ಶ್ರೀಮಂತನ ಮಗನಾಗಿದ್ದರೂ ಸ್ವಲ್ಪವ CJD ದಂಭವಾಗಲಿ, ಅಹಂಕಾರವಾಗಲಿ ಅವನಲ್ಲಿರಲಿಲ್ಲ. ಎಲ್ಲರಲ್ಲಿಯೂ ಕೇವಲ ವಿನಯದೊಡನೆ ಮಾತನಾಡುವನು. ಮನೆಯ ಆಳುಗಳೊಡ ನೆಯನೂ ಅವನು ಕಠಿಣವಾಗಿ ಮಾತನಾಡಿದವನೇ ಅಲ್ಲ, ಯಾರಾ ದರೂ ತಮ್ಮ ಕಷ್ಟಗಳನ್ನು ಹೇಳಿಕೊಂಡರೆ ಅವುಗಳನ್ನು ಕೇಳಿದಮಾ కెళ్కేల ಅವನ ಕಣ್ಣಿನಲ್ಲಿ ನಿರು ಬಂದು ಬಿಡುವುದು. ಸರ್ವಪ್ರಯತ್ನ ದಿ೦ದಲೂ ಇತರರ ಕಷ್ಟವನ್ನು ನಿವಾರಣೆಮಾಡುವನು. ತಂದೆಯನ್ನು ಪರಮ ಗುರುವೆಂದು ಭಾವಿಸಿದ್ದನು. ಶಂಕರರಾಯನಿಗೆ ಇವನಲ್ಲಿದ್ದ వాళ్సేల్య వు అప్పిచ్చేందు ಹೇಳಬೇಕಾದುದೆ ಇಲ್ಲ, ಆತನು ಯಾವ ಕೆಲಸ ಮಾಡಬೇಕಾದರೂ ಮಗನ ಆಲೋಚನೆಯನ್ನು क्टुं ९ १: ं చేూడెుత్తి రోలిల్ల. ಇಂತಹ ಮಾಧವನಿಗೆ ಸುಭದ್ರೆಯ ವೃತ್ತಾಂತವನ್ನು ಕೇಳಿದ ಕೂಡಲೆ ಮನಸ್ಸಿನಲ್ಲಿ ಬಹು ಸಂಕಟವುಂಟಾಗಿ ಹೇಗಾದರೂ ಆಕೆಯ ಕಷ್ಟವನ್ನು ನಿವಾರಣೆಮಾಡಬೇಕೆಂಬ ಕುತೂಹಲವು ಹುಟ್ಟಿತು. নতত্তত ಮಾರ್ಗಗಳನ್ನು ಯೋಚಿಸುತ್ತಾ ಉಯಾಲೆಯ ಸರಪಳಿಗಳ ನೋರಗಿಕೊಂಡು ಕುಳಿತಿದ್ದ ಹಾಗೆಯೆ ತೂಕಡಿಕೆ ಬರಲು ಮಲಗಿ ಕೊಂಡನು.ನಿದ್ರೆ ಬಂದಿತು. ಕನಸಿನಲ್ಲಿಯೂ ಸುಭದ್ರೆಯ ಮನೋಹರ