ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ವಾಸ್ತವಿಕೆ ಕಥೆಗಳು
107
``ಅಹುದೇ ? ಅದೋ. ಈಗ ಸಹ ನೋಡಿರಿ. ಆ ಸುಟ್ಟ ಮುಸಡಿಯ ಎಮ್ಮೆ ಕರುವು ಮೊಂಡ ಕಸಬರಿಗೆ ತಿನ್ನುತ್ತಿದೆ. ಅದನ್ನು ಈಗಲಾದರೂ ಕಸಿದಿಡಿರೋ.
ಇಷ್ಟು ಹೇಳುವದಕ್ಕೆ ಅವನ ಅವಸಾನ ತೀರಿತು. ನೆಲಕ್ಕುರುಳಿದನು. ಬಾಯಲ್ಲಿ ನೀರು ಹನಿಸುವಷ್ಟರಲ್ಲಿ ಪ್ರಾಣಹೋಯಿತು.
ನೂರಿನ್ನೂರು ಖರ್ಚುಮಾಡಿ ಮಾತ್ರೆ ತಂದು ತೇದುಹಾಕಿದ ಮಕ್ಕಳು ಉಳಿಸಿಕೊಂಡಿದ್ದೇನು ? ಮೊಂಡ ಕಸಬರಿಗೆ ಮಾತ್ರ.