ವಿಷಯಕ್ಕೆ ಹೋಗು

ಪುಟ:VISHAALAAKSHI - Niranjana.pdf/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೮ ವಿಶಾಲಾಕ್ಷಿ ಆ# ?!?!!? ಅವರು ತಿಳಿಯಲು ಹಾತೊರೆಯುತ್ತಿದ್ದ ಮುಖ್ಯ ವಿಷಯ ಬೇರೆಯೇ ಇತ್ತು, ಕೆಲಸಕ್ಕೆ ರಾಜಿನಾಮೆ ಕೊಟ್ಟು, ಇಲ್ಲಿ ತಾಯಿಯ ಬಳಿಯಲ್ಲೇ ಇರಲು ಮಗ ಬಂದಿರಬೇಕೆಂಬುದು ಅವರ ನಂಬುಗೆ, ಕೇಳಿ ಖಚಿತಪಡಿಸಿಕೊಳ್ಳಬೇಕೆಂಬ ಬಯಕೆ, ಹಾಗೇನೂ ಇಲ್ಲದೆ, ಆತ ಹಿಂತಿರುಗಿ ಹೋಗಲೂಬಹುದೆಂಬ ಶಂಕೆ. ಆ ಶಂಕೆ ಏನಾದರೂ ನಿಜವಾದರೆ-- ಹೋಗಲಿ, ಬಂದದಿನವೇ ಈ ಮಾತು ಬೇಡ-ಎಂದು ಅವರು ಒಂದು ದಿನ → ತಡೆದರು, ಒಂದೇ ದಿನ ತನ್ನ ಮಾತಿಗೆ ಬೆಲೆ ಕೊಡುವವರಲ್ಲ ಈ ಮಕ್ಕಳು ಎಂದು ತಿಳಿದಾಗ, ಗಂಗಾ ಯಮುನಾ ಪ್ರವಾಹಗಳನ್ನೆ ನಾಗಮ್ಮ ಹರಿಸಿದರು. - “ಇದೇ ಏನು ನೀನು ಅಮ್ಮನನ್ನು ಒಪ್ಪಿಸಿರೋದು ?” ಎಂದು ರಂಗರಾಜ ತಂಗಿಯ ಮೇಲೆ ಸಿಟ್ಟಾದ, ವಿಶಾಲಾಕ್ಷಿ ನಿಧಾನವಾಗಿ ಅಂದಳು : “ಹೇಗೂ ಎರಡು ಮೂರು ವಾರ ಇರಿಯಲ್ಲ. ಗಿರಿಜಾಬಾಯಿಂದಲೂ - ಹೇಳಿಸೋಣ, ಒಪ್ಪಿಯೇ ಒಪ್ತಾರೆ.” ವಿದೇಶ ಶಿಕ್ಷಣಕ್ಕೆ ಹೊರಡಲಿದ್ದ ರಂಗರಾಜ, ತಾನು ಓದಿ ಪದವೀಧರ ನಾಗಿದ್ದ, ವಿದ್ಯಾನಿಲಯಕ್ಕೆ ಹೋಗಿ, ತನ್ನ ಪ್ರಿನ್ಸಿಪಾಲರನ್ನೂ ಪ್ರಾಧ್ಯಾಪಕರನ್ನೂ ಕಂಡುಬಂದ. [“ಎಲ್ಲಾ ನಿಮ್ಮ ಆಶೀರ್ವಾದ, ಸಾರ್.' 'ಮೈಸೂರು ಎಂಜಿನಿಯರುಗಳು ಅಂದರೆ ಲೋಕವಿಖ್ಯಾತರು! ಆ ಮಾತಿಗೆ ಉತ್ತರ, ಸವಿನಯ ಮಂದಹಾಸ. (ಬೇರೊಬ್ಬರಿಂದ ನಾವು ಕಲಿಯುವಂಥಾದ್ದು ಏನೂ ಇಲ್ಲ ಅಂತ ಹೇಳಲಾರೆ. ಮಹಾ ಸಾಧನೆಗಳು ಎಲ್ಲೇ ಆದರೂ ನಾವು ಸ್ಫೂರ್ತಿ ಪಡೀಬೇಕು, ಆದರೂ, ನಮ್ಮದೇ ಆದ ಜೀನಿಯಸ್ ಅನ್ನೋದು ಇದ್ದೇ ಇದೆ.' “ಹೌದು, ಸಾರ್.] ಪದವೀಧರರಾಗಿ ಇನ್ನೂ ಒಳ್ಳೆಯ ಉದ್ಯೋಗದ ಹಾದಿ ನೋಡುತ್ತಲೇ ಇದ್ದ ಸಹಪಾಠಿಗಳೂ ಒಬ್ಬಿಬ್ಬರು ರಂಗರಾಜನಿಗೆ ಭೇಟಿಯಾದರು. [-ನೀನು ಲಕೀ ಫೆಲೋ ಕಣಯ್ಯ.' -.-kriಇ--syslvel & :- hhwini - ಬಬ!

          • k: T #
-ಸಿ.

| ಓr 45ಳ• " ---