ಪುಟ:VISHAALAAKSHI - Niranjana.pdf/೧೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨ಳಿ ವಿಶಾಲಾಕ್ಷಿ

+3+2 : '

نتنغسانغلینننيقفقط لندن تنه بنمندینسمین خان نه خفه نه شتففنستنين عامیانه تفنن ಅ ಕಲ್ಪನೆಯ ನಡುವೆ ಇದ್ದಕ್ಕಿದ್ದಂತೆ ಕಪ್ಪು ಕಂದರಗಳು ಕಾಣಿಸು ತಿದ್ದುವು ; ಹಾದಿ ಕಡಿದುಹೋಗುತ್ತಿತ್ತು, ಇದೆಲ್ಲಾ ಕನಸು ಎಚ್ಚರವಾದಾಗ , ತಾನು ಕಾಣಲಿರುವ ಸ್ಥಿತಿಯೇ ಬೇರೆ-ಎಂದು ಭಯವಾಗುತ್ತಿತ್ತು, ಅ೦ತ ಹ ಘಳಿಗೆಯಲ್ಲಿ ಮತ್ತೆ ದರ್ಶನವೀಯುತ್ತಿತ್ತು, ಗಂಗಾಧರನ ಅಭಯದ ಪ್ರಶಾಂತ ಮುಖಮುದ್ರೆ. ಅವನ ಪತ್ರ ಕೈಸೇರಿದ ಬಳಿಕ, ಗಿರಿಜಾಬಾಯಿಯ ಬಳಿಗೆ ಓಡಬೇಕು, ಅವರಿಗೆ ಅದನ್ನು ತೋರಿಸಬೇಕು ಎಂಬ ಯೋಚನೆ ಹೊಳದಿತ್ತು. ಹೋಗಿ ತೋರಿಸಲೇಬೇಕೆನ್ನುವ ಬಯಕೆಯಾಗಿ ಮಾರ್ಪಟ್ಟಿತ್ತು ಆ ಯೋಚನೆ, ತನ್ನ ಈಗಿನ ಸುಖದಲ್ಲಿ ಅವರು ಭಾಗಿಯಾಗಬೇಕು, ಅವರ ಒಪ್ಪಿಗೆಯನ್ನು ತಾನು ಪಡೆಯಬೇಕು ಎಂದು ಉತ್ಕಟವಾದ ಅಪೇಕ್ಷೆಯುಂಟಾಗಿತ್ತು, , ಆದರೆ ಇದಕ್ಕೆ, ಅವರೇನೆನ್ನುವರೋ ಎಂಬ ಸಂಕೋಚ ಅಸಮ್ಮತಿ ಸೂಚಿಸ. ಬಹುದೆಂಬ ದಿಗಿಲು ಅಡ್ಡಿಯಾದುವು. : ಅದಕ್ಕೂ ಮಿಗಿಲಾದ ತಡೆಯಾಗಿತ್ತು, ಗಂಗಾಧರನ ಆ ಪತ್ರ ತನ್ನೊಬ್ಬಳ ಮಹಾರಹಸ್ಯವಾಗಿಯೇ ಉಳಿಯಬೇಕೆಂಬ ಆಸೆ, [ಯಾರ ಕಣ್ಣಿಗೂ ಬೀಳದಂತೆ ಅದನ್ನು ಬಿಚ್ಚಿಡುವುದಂತೂ ಎಷು ಕಷ್ಟವಾಗಿತ್ತು !] | ಈ ಹಿಂದೆ ನರ್ಮದೆ ತನ್ನ ವೈಯಕ್ತಿಕ ಸಂಕಟವನ್ನು ಗೆಳತಿಯ ಎದುರು ತೋಡಿಕೊಂಡುದಿತ್ತು. [ರಘುನಾಥನ ಪ್ರಕರಣ.] ಆದರೆ, ಆ ಕಥೆ ಬೇರೆ ; ತನ್ನದು ಬೇರೆ. ನರ್ಮದೆಯೊಡನೆ ಹೇಳಿಕೊಳ್ಳುವಷ್ಟು ಹಗುರವಾಗಿರಲಿಲ್ಲ ಈ ವಿಷಯ.... ....ಯೋಚನೆಯ ಒಂದು ಸರಮಾಲೆ ಮುಗಿಯತೆಂದು ವಿಶಾಲಾಕ್ಷಿ ಮಗ್ಗುಲು ಹೊರಳಿದಳು, ಕಿಟಕಿಯ ಚೌಕಟ್ಟಿನೊಳಗೆ ಅಸ್ಪಷ್ಟವಾಗಿ ಕಂಡಿತು ಚೆಂಬೆಳಕಿನಿಂದ ತೋಯ್ದ ಆಗಸದ ಚಿತ್ರ. ಬೆಳಗಾಗಿಯೇ ಬಿಟ್ಟಿತ್ತು.. ಮಂಪರಿನ ಪರೆಯಂತಿದ್ದ ರಗ್ಗನ್ನು ಕಳಚಿ, ವಿಶಾಲಾಕ್ಷಿ ಗಡಬಡಿಸಿ ಎದ್ದಳು, ತನ್ನ ಹಾಸಿಗೆಯನ್ನು ಸುತ್ತಿ ಗೋಡೆಗೊರಗಿಸಿದಳು, ಸಡಿಲವಾಗಿದ್ದ ಹೆರಳನ್ನು ಸರಿಪಡಿಸಿ, ಮೇಜಿನ ಮೇಲಿದ್ದ ಕನ್ನಡಕದಿಂದ ಮುಖವನ್ನು ಅಲಂಕರಿ

ಸkipstಸ: 4 ಕಳ: K:.: .. East ' -.-' PC. -.-ಕಟಟ