ಪುಟ:VISHAALAAKSHI - Niranjana.pdf/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

r °

  1. ರ್<, Afz!Yesurfs-4,೬YPR, "

೧೧

»="_jrti, x-Alitlpsylv4 N Pitylhilal-rkut -'r -1"Luthifulkilli

ಪ್ರೇಮಕ್ಕೆ ಕಣ್ಣಿಲ್ಲ ಎಸ್, ವಿಶಾಲಾಕ್ಷಿ, ಆಧುನಿಕ ಆಂಗ್ಲ ಕಾವ್ಯದಲ್ಲಿ ಸೌಂದನ್ನೊಪಾಸನೆ' ಎಂಬ ತಲೆಕಟ್ಟಿನ ಎದುರು, , ಪಟಪಟನೆ ರೆಕ್ಕೆ ಬಡಿದು ಹಾರಾಡತೊಡಗಿತು ಹೃದಯದ ಹಕ್ಕಿ, ಪುಟ ಸಂಖ್ಯೆಯ ಆಧಾರದಿಂದ ಲೇಖನವನ್ನೂ ತೆರೆದುನೋಡಿದಳು. ನಡುಗುತ್ತಿದ್ದ ಬೆರಳುಗಳು ಹಾಳೆಗಳನ್ನು ತಿರುವಿದುವು, ಕೊನೆಯಲ್ಲಿ ಬಲ ಮೂಲೆಯಲ್ಲಿ ತನ್ನ ಹೆಸರು-ಸಣ್ಣ ಅಕ್ಷರದಲ್ಲಿ. ಆ ಪುಟವನ್ನು ಮೂಗಿನ ಬಳಿವರೆಗೂ ಒಯ್ದು, ಪುನಃ ಪುನಃ ನೋಡಿದಳು, ಆನಂದೋದ್ವೇಗದಿಂದ ಅಸ್ಥಿರವಾದುವು ಕಾಲುಗಳು, ಹರ್ಷಪುಲಕಿತಳಾಗಿ ವಿಶಾಲಾಕ್ಷಿ ಕುರ್ಚಿಯ ಮೇಲೆ ಕುಸಿಕುಳಿತಳು, ಕೊಠಡಿಯ ಬಾಗಿಲ ಬಳಿಗೆ ಬಂದು, ತಾಯಿ ನಾಗಮ್ಮ ಕೇಳಿದರು : “ಪೋಸ್ಟ್ ಬಂತೆ ವಿಶಾಲಿ ?” “ಇಲ್ಲಮ್ಮ, ಜವಾನ ಬಂದಿದ್ದ-ಕಾಲೇಜಿಂದ.” [ಯೂನಿವರ್ಸಿಟಿಯಿಂದ ಎಂದರೆ ಅರ್ಥವಾಗದು ತಾಯಿಗೆ, ಹೀಗಾಗಿ, 'ಕಾಲೇಜಿನಿಂದ' ಎಂದಳು ಮಗಳು.]. “ಯಾಕೆ ? ಏನು ?” “ಪ್ರಬುದ್ಧ ಕರ್ಣಾಟಕ ತಂದ್ರೋಟ್ಟ.” ಅದೇನೆಂದು ತಿಳಿಯದ ನಾಗಮ್ಮ ಪಿಳಿಪಿಳಿ ನೋಡಿದರು, ಕೈಯಲ್ಲಿ ದ್ದು ದನ್ನು ತೋರಿಸುತ್ತ ವಿಶಾಲಾಕ್ಷಿ ಅಂದಳು : “ಇದು--ಇದರಲ್ಲಿ ನಾನು ಬರೆದಿರೋದು ಅಚ್ಚಾಗಿದೆ.” - “ಅಷ್ಟೇನಾ ?” ಎಂದು ರಾಗವೆಳೆದರು ನಾಗಮ್ಮ, ಹಾಗೆ ಅಚ್ಚಾಗುವುದ ರಲ್ಲಿ ವಿಶೇಷವೇನೂ ಇಲ್ಲ ಎನ್ನುವಂತೆ, “ರಾಜೂ ಕಾಗದ ಬಂತೇನೋ೦ತಿದ್ದೆ”, ಎನ್ನುತ್ತ ಅವರು ಅಡುಗೆ ಮನೆಯ ಕಡೆಗೆ ನಡೆದರು. ತನ್ನ ಸಂತೋಷದಲ್ಲಿ ಭಾಗಿಯಾಗದೇ ಹೋದ ತಾಯಿಯನ್ನು ಕುರಿತು ಯೋಚಿಸುವುದಕ್ಕೂ ಅವಕಾಶ ದೊರೆಯದಂತೆ, ಮೇಜಿನ ಮೇಲಿಂದ ಬಿಳಿಬಿಳಿ ಯಾದುದೇನೋ ವಿಶಾಲಾಕ್ಷಿಯ ಗಮನವನ್ನು ಸೆಳೆಯಿತು. ಅರೇ ! ನೋಡಿಯೇ ಇರಲಿಲ್ಲ ತಾನು! ಬಿಳಿಯ ಹಾಳೆ ಹೊದಿಸಿದ್ದ ಪುಟ್ಟ ಪುಸ್ತಕಗಳು, ಏನಿವು ? ತನ್ನ ಲೇಖನ, ಪುಸ್ತಕ ರೂಪದಲ್ಲಿ ಅದರ ಪ್ರತಿಗಳು, ಒಂದು, ಎರಡು, ಮೂರು-ಇಪ್ಪತ್ತೈದು ಒಟ್ಟು. ಓ, ಎಷ್ಟು ಚೆನ್ನು! .ಗಿರಿಜಾಬಾಯಿ SLIX2 14 ವllikayfinukullhi_MAMA-Niels!» 41, ಘ4 Fx ಆ.:. Asturkiski/HJFVis-linksk/- .. ! nee --- * *-**r 2-.. : ... .. 3 w, 4.ApplemyAwಕದಯ