ವಿಷಯಕ್ಕೆ ಹೋಗು

ಪುಟ:VISHAALAAKSHI - Niranjana.pdf/೧೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

..:- -$ 1[..!..' | | ಗಿಳಿ ವಿಶಾಲಾಕ್ಷಿ ರಂಗರಾಜನ ವಿಷಯವಾಗಿ ಮಾತು ಬಂತು, ಆಸಂಬಧದಲ್ಲಿ, ವಿಶಾಲಾಕ್ಷಿ ಯಂತೆ ಗಿರಿಜಾಬಾಯಿಯನ್ನೂ ಬೇಸರಕ್ಕೆ ಗುರಿಪಡಿಸಿದ ಅಂಶ ಬಂದಿತ್ತು. “ದಿನ ಬೆಳಗಾದರೆ ಪತ್ರಿಕೇಲಿ ಫೋಟೋಗಳು ಬರವೆ-ಅವರು ಅಲ್ಲಿಗೆ ಹೊರಟಿದಾರೆ, ಇಲ್ಲಿಗೆ ಪ್ರವಾಸ ಬೆಳಸ್ತಿದಾರೆ ಅಂತ ನಿಮ್ಮಣ್ಣನ್ನು ಹಾಕ ಬಾರದಾಗಿತ್ತೆ ? 'ಸಾಧ್ಯ'ಲಿ, ಶಾಸ್ತ್ರಿ ಅಂತ ಒಬ್ಬರು ನನಗೆ ಪರಿಚಯ, ಮೊನ್ನೆ ಸಿಕ್ಖಾಗ ಅವರನ್ನು ಕೇಳ್, 'ದೊಡ್ಡ ಪತ್ರಿಕೆಗಳಲ್ಲಿ ಭಾವಚಿತ್ರ ಅಚ್ಚಾಗೋದಕ್ಕೂ ಪ್ರಭಾವಬೇಕು. ರಂಗರಾಜನ ಫೋಟೋ ಇದ್ದರೆ ಕಳಿಸ್ಕೊಡಿ, 'ಸಾಧೂ'ಲಿ ಹಾಕೀನಿ,' ಅಂದರು. ನಿಮ್ಮ ಹತ್ತಿರ ಒಳ್ಳೇ ಫೋಟೋ ಇದೆಯೇನು ?” - “ಪಾಸ್‌ಪೋರ್ಟ್ ಸೈಜಿಂದು ಒಂದಿದೆ. ಸಾಕಾಗುತ್ತೆ, ಅಲ್ವಾ? ಎಂದಳು ವಿಶಾಲಾಕ್ಷಿ, ಅಣ್ಣನ ವಿಷಯದಲ್ಲಿ ಗಿರಿಜಾಬಾಯಿ ತೋರಿದ ಆ ಸ ... ಗಾ ಗಿ ಸಂತೋಷಪಟ್ಟು, “ಸಾಕು, ಪತ್ರಿಕೇಲಿ ಅಷ್ಟೇತಾನೇ ಬರೋದು ? ಯಾರ ಕೈಲಾದರೂ ನಾಳೇನೇ 'ಸಾಧ್ಯ' ಆಫೀಸಿಗೆ ಕೊಟ್ಟು ಕಳಿಸಿ, ನಾನು ಅವರಿಗೆ ಫೋನ್ ಮಾಡ್ತೀನಿ, ಕೊನೆಯಪಕ್ಷ ಈ ನಗರದ ಪತ್ರಿಕೆಯಲ್ಲಾದರೂ ಸುದ್ದಿ ಪ್ರಕಟ ವಾಗಲಿ...? ಆ ವಿಷಯ ಮುಗಿದ ಬಳಿಕ ಗಿರಿಜಾಬಾಯಿ ಗ o ಗಾ ಧ ರ ನ ಕಡೆಗೆ ತಿರುಗಿದರು: “ಹೊಸದಾಗಿ ಏನು ಬರೆದಿದೀರಿ, ಇವರೆ ?” ವಿಶಾಲಾಕ್ಷಿಯ ಕಡೆ ನೋಡಿ ನಸುನಕ್ಕು ಗಂಗಾಧರನೆಂದ: “ಒಂದು ಬರೀತಾ ಇದೀನಿ, ಕವಿತೆಯಲ್ಲ-ಕಾವ್ಯ.” ತುಂಟತನದ ಮಾತು, ವಿಶಾಲಾಕ್ಷಿಗೆ ತಿಳಿಯದುದಲ್ಲ. “ಹೆಸರು ಏನಿಟ್ಟಿದೀರಾ ?” ಗಂಗಾಧರ, (ಅದು ಬಹಳ ಮುಂದಿನ ಮಾತು' ಎಂದು ಹೇಳಲು ಹೊರಟ ವನು, ಅರ್ಧದಲ್ಲೇ ಅದನ್ನು ನುಂಗಿ, ಅಂದ : (ಇನ್ನೂ ಇಟ್ಟಿಲ್ಲ.” ಮಲೆನಾಡು-ಬಯಲು ಸೀಮೆಗಳ ಹೋಲಿ ಕೆ, ಸಂಭಾಷಣೆಗೆ ವಸ್ತು ನಾಯಿತು: ಅಲ್ಲಿನ ಊಟದ ವೈಖರಿ, ಉಪ್ಪಿನಕಾಯಿ, ಮಳೆ ನೋಡಬೇಕಾ "-.ಓ..Mik ...' '.............