ಪುಟ:VISHAALAAKSHI - Niranjana.pdf/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

rl+1. ! ! +

114564Lulu-La

59 qHP & C$Fif; 1.45.

" % .'rys.

ವಿಶಾಲಾಕ್ಷಿ ಗೊಂದು ಪ್ರತಿ, ಅಣ್ಣನಿಗೊಂದು, ಗೆಳತಿಯರಿಗೆಲ್ಲ ಒಂದೊಂದು, ಹೌದು, ಒಂದು ಪ್ರೊಫೆಸರಿಗೆ, " (ಅಲ್ಲಾ, ಇಷ್ಟನ್ನು ಏನು ಮಾಡಲೀಂತ'.... ನಾಗಮ್ಮ ಒಳಗಿನಿಂದ ಕರೆದರು; “ವಿಶಾಲೀ, ಬರೀಯೇನೆ ಊಟಕ್ಕೆ?” “ಬಡ್ತೀನಮ್ಮ” ಅಷ್ಟು ಬೇಗನೆ ಉಂಡು ಓಡಬೇಕಾದ ಅಗತ್ಯವಿರಲಿಲ್ಲ. ಆದರೂ ಹತ್ತು ಘಂಟೆಗೇ ಊಟ ಮುಗಿಸುವುದು ಹಲವು ವರ್ಷಗಳಿಂದ ಅಭ್ಯಾಸವಾಗಿತ್ತು. ಇವತ್ತಂತೂ ತರಗತಿ ಇದ್ದುದು ಒಂದೇ ಪೀರಿಯಡ್, ಮಧ್ಯಾಹ್ನದ ಅನಂತರ, ಪಠ್ಯ ಪುಸ್ತಕಗಳ ಗೋಜಿಗಂತೂ ಈಗ ಹೋಗಬೇಕಾದುದಿಲ್ಲ ತಾನು, ಪರೀಕ್ಷೆಗೆ ಅಜುವವಳಲ್ಲ ವಿಶಾಲಿ ಈಗ ನರ್ಮದಾ ಹೇಳಿರಲಿಲ್ಲವೆ: 'ಹೇಗಿದ್ದವಳು ಹೇಗಾಗಿಬಿಟ್ಟೆಯಮ್ಮ! ನಂಬೋಕೇ ಆಗೊಲ್ಲ' ಅಂತ ? ಮೂರು ವರ್ಷಗಳ ಅಧ್ಯಾಪಕವೃತ್ತಿ, ಅಪಾರ ಆತ್ಮವಿಶ್ವಾಸವನ್ನು ಅವಳಲ್ಲಿ ತುಂಬಿತ್ತು, ಸಹಪಾಠಿನಿ .ಯಾಗಿದ್ದ ಸರಸಿ ಒಮ್ಮೆ ಅಂದಿದ್ದಳು : “ವಿಶಾಲಿ, ಬಹಳ ಜಂಭ ಬಂದ್ವಿಟ್ಟಿದೆ ಕಣೋ ನಿಂಗೆ', ಅದು ಮಾತ್ರ ಸುಳ್ಳು ಸುಳ್ಳು.... ಇಷ್ಟಿದ್ದರೂ ಒಮ್ಮೊಮ್ಮೆ, ಇದ್ದಕ್ಕಿದ್ದಂತೆ, ಎಲ್ಲಿಲ್ಲದ ಕಳವಳ ವಿಶಾ ಲಾಕ್ಷಿಯ ಮನಸ್ಸನ್ನು ಆವರಿಸುತ್ತಿತ್ತು, ತನಗೆ ಏನೂ ತಿಳಿಯದು-ಎಂಬ ಶಂಕೆ, ತಾನಿನ್ನೂ ಪುಟ್ಟ ಹುಡುಗಿಯೇ-ಎಂಬ ಭಾವನೆ. ಅಣ್ಣ `ರಂಗರಾಜ ನಿಗೆ ತಾನು ಸಾಟಿಯೇ ಅಲ್ಲ, ದಾಮೋದರ ಕಣಿವೆ ಯೋಜನೆಯಿಂದಭಿಲಾಯಿಗೆ ಸ್ಥಾನಾಂತರವಾಗಿ ಉದ್ಯೋಗ- ಸ್ವೀಕರಿಸುವುದಕ್ಕೆ ಮುಂಚೆಯೊಮ್ಮೆ. ಊರಿಗೆ ಬಂದಿದ್ದನಲ್ಲ.-ಎಷ್ಟು ದೊಡ್ಡವನಾಗಿ ಕಂಡ ಆಗ! ಸ್ವರ ಬದಲಿತ್ತು. ಠೀವಿಯಿತ್ತು ನುಡಿಯಲ್ಲಿ ನಡೆಯಲ್ಲಿ.ವಯಸ್ಸಿನಲ್ಲಿ ಅಂತರವೇನೋ ಸ್ವಲ್ಪ. ಮೊದಲು ಸಂಪಾದಿಸತೊಡಗಿದುದೂ ತಾನೇ, ಆದರೂ ರಂಗರಾಜ ಮನೆಗೆ ದೊಡ್ಡವನು ಈಗ. “ಆಳವಾಗಿ ಯೋಚಿಸಿದಾಗ ವಿಶಾಲಾಕ್ಷಿಗೆ ಹೊಳೆಯುತ್ತಿತ್ತು-ಅಣ್ಣನಲ್ಲ ತನ್ನಲ್ಲೂ ವಿಶೇಷ ಬದಲಾವಣೆಯಾದುದು ಒಂದು ಘಟನೆಯ ಬಳಿಕ, ತಮ್ಮ ತಂದೆ ತೀರಿಕೊಂಡ ದುರ್ದಿನದ ಬಳಿಕ, ರಂಗರಾಜ ಬರುವವರೆಗೂ ಕಾಯಲಾಗದೆ ಅಂತ್ಯಕ್ರಿಯೆಯನ್ನು ಮುಗಿಸಿ - eyes, 44, 44°Chakshi,,, sexuarry " ***** Pre, 1 ! ಘ4¥ . shya: . * ಸಪ್ರ

  • *

we (9) - it , -

  • ಕ. - * +

AM-tಳt, sexunಷ್ಟಿ . .....ಜ* ... 1373