+4 ೧೪೨ ವಿಶಾಲಾಕ್ಷಿ ರಷ್ಯನ್ ಇಂಗ್ಲಿಷ್ ಶಬ್ದಕೋಶ ಕೊಂಡು, ಜೇಬಿನಲ್ಲೇ ಇಟ್ಟುಕೊಳ್ಳಬೇಕು. ನನ್ನ ಸಹೋದ್ಯೋಗಿಗಳು ಕೆಲವರು ರಷ್ಯನ್ ಕಲಿಯಲು ನಿರ್ಧರಿಸಿದ್ದಾರೆ. ನಾಲ್ವತ್ತು ವರ್ಷಗಳಿಗೆ ಹಿಂದೆ ಈ ದೇಶದಲ್ಲಿ ಏನೂ ಇರಲಿಲ್ಲವಂತೆ. ಆ ದೃಷ್ಟಿಯಿಂದ ಈಗಿನ ಪ್ರಗತಿ ಅದ್ಭುತವೇ ಸರಿ, ಒಂದೂವರೆ ಶತ. ಮಾನಕ್ಕೆ ಹಿಂದೆ ಅಮೆರಿಕ ದೇಶವಾದರೂ ಎಲ್ಲಿತ್ತು ? ಈಗ ಆ 'ಹೊಸ ಜಗತ್ತು' ಅಗ್ರಸ್ಥಾನಕ್ಕೆ ಹಳಬನಾಗಿದೆ, ಇದೂ ಒಂದು ಹೊಸ ಜಗತ್ತು.' ನಮ್ಮ ಭಾರತವೂ ಒಂದು 'ಹೊಸ ಜಗತ್ತು. ನಾವು ಸ್ವತಂತ್ರರಾಗಿ ಇನ್ನೂ ಹತ್ತು ವರ್ಷಗಳು ಸಂದಿಲ್ಲ, ನಮ್ಮದೇ ಆದ ರೀತಿಯಲ್ಲಿ ನಾವೂ ನವರಾಷ್ಟ್ರ ನಿರ್ಮಾಣ ಆರಂಭಿಸಿದ್ದೇವೆ. .ಇಲ್ಲಿಯ ಜನ ಅದರಲ್ಲೂ ವಿಶೇಷವಾಗಿ ಮಹಿಳೆಯರು-ಆರೋಗ್ಯ ವಂತರು, ದೃಢಕಾಯರು, ಭಾರತದ ಬಗ್ಗೆ ಈ ಜನರಿಗೆ ತಿಳಿವಳಿಕೆ - ಕಡಮೆ.. ತಿಳಿಯಬೇಕೆಂಬ ಆಸಕ್ತಿ ಧಾರಾಳವಾಗಿದೆ. ಆದರೂ, ಈ ರಾಜ್ಯ ಪದ್ಧತಿ ಮಾತ್ರ ನನಗೆ ಅರ್ಥವಾಗಿಲ್ಲ. ಇತಿ ಹಾಸ ಪ್ರಸಿದ್ಧವಾದ ಕ್ರುಶೇವ್ [ಇಲ್ಲಿ ಕುಶ್ವಾಫ್ ಎನ್ನುತ್ತಾರೆ] ಭಾಷಣದ ವಿವರವನ್ನು ಭಾರತದಲ್ಲೇ ಓದಿದ್ದೆ. ಮೊನ್ನೆಯವರೆಗೂ ಆರಾಧಿಸಿದ ಪೂಜಿಸಿದ ವ್ಯಕ್ತಿಯನ್ನು ಈದಿನ ಗೋರಿಯಿಂದ ಅಗೆದು ತೆಗೆದು ಉಗುಳಿ. ನಿಂದಿಸುವುದರ ಅರ್ಥವೇನು ? ಸ್ಟಾಲಿನ್ [ಇಲ್ಲಿ ಸ್ವಲೀನ್ ಎನ್ನುತ್ತಾರೆ] ಕೆಟ್ಟವನೆಂಬುದು ಸ್ಪಷ್ಟ, ಆದರೆ, ಅವನು ಬದುಕಿದ್ದಾಗ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದ ಇವರೆಲ್ಲ ಎಂತಹ ಧೀರರು ? ರಾಜಕೀಯ ಕಾರಣ ಕ್ಯಾಗಿ ಬೆರಿಯಾ ಎಂಬವನನ್ನು ಗಲ್ಲಿಗೇರಿಸಿದರಲ್ಲ-ಆ ಘಟನೆಯಂತೂ ದೊಡ್ಡ ಪ್ರಶ್ನಾರ್ಥಕ ಚಿಹ್ನೆಯಾಗಿಯೇ ನನ್ನ ಮನಸ್ಸಿನಲ್ಲಿ ಇವತ್ತಿಗೂ ಉಳಿದಿದೆ. ಹೋಗಲಿಬಿಡು, ನಾನು ಎಂಜಿನಿಯರು, ರಾಜ ಕಾರಣದ ಗೊಡವೆ ನನಗೆ ಯಾತಕ್ಕೆ ? ಇಲ್ಲಿ ಕ್ರಿಸ್‌ಮಸ್ ಹಬ್ಬ, ಹೊಸ ವರ್ಷದ ಹಬ್ಬ, ಎಲ್ಲಾ ಒಂದೇ.. ಹಲವಾರು ದಿನ ಒಂದೇ ಸಮನೆ ಸಂಭ್ರಮ. - 1 | ಆರ್. 44 ...] €11gra 1-3: ಏnrep - - ܡܪܚܫܵܝܫܫܢ .¬;ܝܢܵܟ ܫܒܫܒܩ .ܚ.
ಪುಟ:VISHAALAAKSHI - Niranjana.pdf/೧೪೪
ಗೋಚರ