ದ್ದರು, ದುಡಿದು ಬಳಲಿ ಹಣ್ಣಾಗಿಯೇ ಉದುರಿದ್ದ ಜೀವ. ಆದರೆ, ಆ ಅಂತ್ಯ ಅನಿವಾರ್ಯ ಎನ್ನುವುದು ಯಾವ ಸಮಾಧಾನ ? ವಿಶಾಲಾಕ್ಷಿಯ ಅಣ್ಣ ಬಹಳ ಗೋಳಾಡಿದ್ದ:
'ನಾನು ಪಾಪಿ! ಅಪ್ಪಯ್ಯನನ್ನು ನೋಡೋ ಭಾಗ್ಯ ನನಗಿಲ್ಲದೇಹೋಯ್ತು!'
ಅಂತಹ ಅನಾಥ ಸುಸಾರವೇನೂ ಅಲ್ಲ. ತಂದೆ ಇಳಿಸಿದ್ದ ವಿಮೆ-ಐದು ಸಾವಿರದ್ದು-ಬಂದಿತ್ತು, ತಮ್ಮಂದಿರಿಬ್ಬರ ವಿದ್ಯಾಭ್ಯಾಸವಾದರೆ ಆಯಿತಿನ್ನು.
ಆದರೂ ತಾಯಿ ರೋದಿಸಿದ್ದರು
'ನಾವು ನಿರ್ಗತಿಕರಾದೆವಲ್ಲಾ!'
[ಅವರ ದೃಷ್ಟಿಯಲ್ಲಿ ಘೋರತರವಾಗಿತ್ತು ಸಮಸ್ಯೆ, ಮಕ್ಕಳಿಗೆ ಎಲ್ಲಿಂದ ಬರಬೇಕು ಅದರ ಕಲ್ಪನೆ ?].
ತಂಗಿಯೆಂದು ತಾತ್ಸಾರಮಾಡದೆ, ಆಕೆ ತನ್ನ ಅಕ್ಕನೇ ಎನ್ನುವಂತೆ, ರಂಗರಾಜ ಕೇಳಿದ್ದ:
ಕೆಲಸಕ್ಕೆ ರಾಜಿನಾಮೆ ಕೊಟ್ಟು ಬಂದ್ರಿಡ್ತೀನಿ, ಆಗದಾ ವಿಶಾಲಿ ?'
ಬೆಂಗಳೂರಿನಿಂದ ಬಂದು ಒಂದೆರಡು ಘಂಟೆಹೊತ್ತು ಇದ್ದು ಹೋದ ಅವರ ಚಿಕ್ಕಪ್ಪ ಇತ್ತುದೂ ಅಂತಹದೇ ಸಲಹೆಯನ್ನು,
'ರಾಜಿನಾಮೆ ಕೊಟ್ಟು ಬಂದ್ವಿಡು, ಇಲ್ಲೇ ಏನಾದರೂ ಕೆಲಸ ಸಿಗ ಬಹುದು, ನಾನೂ ನೋಡ್ತೀನಿ.'
ಅವರೂ ನೋಡುವ' ವಿಷಯದಲ್ಲಿ ನಾಗಮ್ಮನಿಗೇನೂ ನಂಬಿಕೆ ಇರಲಿಲ್ಲ. ತನ್ನ ಮೈದುನನನ್ನು ಚೆನ್ನಾಗಿಯೇ ಅರಿತಿದ್ದಳು ಆಕೆ. ಆದರೂ ಹೆಣ್ಣುಜೀವ ಹೇಳಿತ್ತು:
ಅದೇ ಸರಿ, ರಾಜೂ.
'ಒಪ್ಪದೇ ಇದ್ದವಳು ವಿಶಾಲಿ ಒಬ್ಬಳೇ..
ಖಂಡಿತ ಕೂಡದು, ಇಲ್ಲಿ ನಾನಿಲ್ವೆ ? ಮನೆಯ ಜವಾಬ್ದಾರಿ ನನಗಿರಲಿ.'
“ಹುಚ್ಚು ಮಾತು, ಹುಚ್ಚು ಮಾತು!” ಎಂದಿದ್ದರು ನಾಗಮ್ಮ,
[ಒಳಗಿನ ದುಗುಡವನ್ನು ಮಕ್ಕಳೆದುರು ತೋಡಿಕೊಳ್ಳಲಾರದೆ ಅವರು ನೀರವವಾಗಿ ಅತ್ತಿದ್ದರು, ವಿಧಿಯನ್ನು ಹಳಿದಿದ್ದರು.]