ಪುಟ:VISHAALAAKSHI - Niranjana.pdf/೧೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮ•lyts: 'ನೆನಪು ಸಿಹಿ ೧೫೫ | I | !! +Ap•, 7 “ಹೋಗೇ, ನಿನಗೊಂದು ತಮಾಷೆ !” ಎಂದಳು ನರ್ಮದಾ. ಸಲಿಗೆಯಿಂದ ಏಕವಚನದಲ್ಲಿ ವಿಶಾಲಾಕ್ಷಿಯನ್ನು ಹೆಚ್ಚು ಹೆಚ್ಚಾಗಿ ಗಿರಿಜಾ ಬಾಯಿಯ ಎದುರು ಸಂಬೋಧಿಸಬೇಕು; ತಮ್ಮ ಗೆಳೆತನ ಬಹಳ ಹಳೆಯದುಗಾಢವಾದುದು ಎಂದು ತೋರಿಸಿಕೊಡಬೇಕು ;-ಎಂಬ ತವಕ ನ ಮ F ಧೆ ಗೆ. ಗಿರಿಜಾಬಾಯಿಯ ಪರಿಚಯವಾದಂದಿನಿಂದ ವಿಶಾಲಿ ತನ್ನಿಂದ ದೂರವಾದಳುಎಂದು ಹಿಂದೆ ಅವಳಿಗೆ ಕಸಿವಿಸಿ ಎನಿಸಿತ್ತು. ಅಂತಹ ಭಾವನೆ ಈಗಿರಲಿಲ್ಲ. ವಾದರೂ, ಆತ್ಮೀಯತೆಯ ಹಕ್ಕನ್ನು ಸಾಧಿಸುವುದರಲ್ಲಿ, ತಮ್ಮೊಳಗಿನ ಆಪ್ತತ್ವ ವನ್ನು ಗಿರಿಜಾಬಾಯಿಗೆ ತೋರಿಕೊಡುವುದರಲ್ಲಿ ತಪ್ಪೇನು? 'ಸಾಬೂನು ಹಚ್ಚಿ ಮುಖ ತೊಳೆದುಕೊಂಡು, ಶ್ರೀಕಾಂತ ಬಂದ. “ಪುರಸೊತ್ತಿದ್ದರೆ ಎರಡು ನಿಮಿಷ ಕೂಬಹುದು, ನಮ್ಮ ಅಭ್ಯಂತರ ವೇನೂ ಇಲ್ಲ,” ಎಂದಳು, “ಬನ್ನಿ-ಕೂಡ್ಕೊಳ್ಳಿ' ಎಂದು ಮೌನವಾಗಿ ವಿನಂತಿಸುವ ನೋಟ ಬೀರುತ್ತಾ, ಶ್ರೀಕಾಂತ ಮುಗುಳುನಕ್ಕು ಆಕೆಯ ಮಗ್ಗುಲಲ್ಲೆ ಆಸೀನನಾದ, ಬಾಚಣಿ " ಗೆಯ ಹಾದಿ ನೋಡು ತ್ತಿದ್ದ ಅವನ ಮುಂಗುರುಳು, ಹಣೆಯ ಮೇಲೆ ಹರಿದಾಡುತ್ತಿತ್ತು. - “ಇವರು ಗೊತ್ತಲ್ಲ?” ಎಂದಳು ನರ್ಮದಾ, ಗಿರಿಜಾಬಾಯಿಯ ಕಡೆ •4° • 'muzzd=L-14***shtt mish-fಸ್ತಿ ಕೈಮಾಡಿ. T | - - ಗೊತ್ತು ಎನ್ನುವಂತೆ ಶ್ರೀಕಾಂತ ತಲೆಯಾಡಿಸಿದ. ಆತನೆಂದ: “ಎಲ್ಲರೂ ಆರೋಗ್ಯವಾಗಿದೀರಾ ? ನನ್ನ ಹತ್ತಿರಕ್ಕಂತೂ ಔಷಧಿಗೇಂತ ನೀವು ಯಾರೂ ಬಂದ ನೆನಪಿಲ್ಲ!” ಆ ಮಾತಿಗೆ ನಗೆಯ ಪ್ರತಿಕ್ರಿಯೆ ಮೊದಲು ಬಂದುದು, ನರ್ಮದೆಯಿಂದಲೇ “ಗಿರಿಜಾಬಾಯಿ-ವಿಶಾಲಾಕ್ಷಿಯರೂ ಡಾಕ್ಟರರ ಹಾಸ್ಯ ಪ್ರವೃತ್ತಿ ಕಂಡು ನಕ್ಕರು. “ಪ್ರಾಕ್ಟಿಸು ಬಹಳ ಜೋರಾಗಿದೇಂತ ಕಾಣುತ್ತೆ” ಎಂದಳು ವಿಶಾಲಿ, “ನಗರದಲ್ಲಿ ಹೊಲಸು ಕೊಂಪೆಗಳಿರೋವರೆಗೂ ಪ್ರಾಕ್ಟಿಸಿಗೆ ಬರಗಾಲ - ವಿಲ್ಲ” ಎಂದ ಶ್ರೀಕಾಂತ ಗಿರಿಜಾಬಾಯಿ ನುಡಿದರು: “ಯಾಕೆ ಹಾಗಂತೀರಿ? ಬಹಳ ಪವಿತ್ರವಾದದ್ದಲ್ವೆ ವೈದ್ಯವೃತ್ತಿ?” : | : TK+-+ Po° ° . - - - - - - -x-ke - - : *