ಪುಟ:VISHAALAAKSHI - Niranjana.pdf/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

• • • •° " - - - - - - ----- - - - - { 44 n।” - -••° ° ? - 1 ° ° ° - - - - == r ೧೪ Po-Ir. K: k: -'! .ಚi A • • • •Y • PE 4 °'° °' - * -° I - - ES 11: T IST ಟಟ, .. =-3.2 - --- °FIP + 1 =rys-ror - - : '.. ಸಿ " 1 1 1 1 - 1 - ವಿಶಾಲಾಕ್ಷಿ -ರಜಾ ಮುಗಿಯುತ್ತ ಬಂದಂತೆ ವಿಶಾಲಿಗೆ ಜಯವಾಯಿತು, ಆದ ಇತ್ಯರ್ಥ, 'ರಾಜಿನಾಮೆ ಈಗಲೇ ಬೇಡ' ಎಂದು. ಹೊರಟುನಿಂತಾಗ ರಂಗರಾಜ, ಮುಗುಳುನಗಲು ಯತ್ನಿಸುತ್ತ, ಅಂದಿದ್ದ; - “ನಮ್ಮ ಅಪ್ಪ ಅಮ್ಮನಿಗೆ ಎಲ್ಲೋ ಲೆಕ್ಕ ತಪ್ಪಿರಬೇಕು ವಿಶಾಲಿ, ಈ ಮನೇಲಿ ದೊಡೋಳು ನೀನೇ !?. - ಫಳಕ್ಕನೆ ನೀರು ಚಿಮ್ಮಿತ್ತು ವಿಶಾಲಾಕ್ಷಿಯ ಕಣ್ಣುಗಳಲ್ಲಿ... ಮತ್ತೆ ತಾಯಿಯ ಸ್ವರ ಕೇಳಿಸಿತು: “ತಟ್ಟೆ ಇಡಲೇನೇ ?” “ಬಂದೆ ಅಮಾ ಮೇಜಿನ ಮೇಲೆ 'ಪ್ರಬುದ್ಧ ಕರ್ಣಾಟಕ'ದ ಸಂಚಿಕೆಯನ್ನೂ ಲೇಖನದ ಪ್ರತಿಗಳನ್ನೂ ಎದುರಿಗೆ ಇರಿಸಿಕೊಂಡು, ಹಳೆಯ ನೆನಪುಗಳೆಡೆಗೆ ಮನಸ್ಸನ್ನು ಅಲೆಯಲು ಬಿಟ್ಟು, ಕುಳಿತೇ ಇದ್ದಳು ಆಕೆ, ತಾಯಿ ಪುನಃ ಕರೆದೊಡನೆಯೇ ಗಡಬಡಿಸಿ ಎದ್ದು, ಅಡುಗೆಯ ಮನೆಗೆ ನಡೆದಳು. ಅಡುಗೆಯ ಮನೆಯಲ್ಲೇ ಊಟ, ದೇವರ ಬಿಡಾರವೂ ಅಲ್ಲೇ ಮೂಲೆಯಲ್ಲಿ ಇಪ್ಪತ್ತೈದು ವರ್ಷಗಳಿಗೂ ಹಿಂದೆ, ರಂಗರಾಜ ಒಂದು ವರ್ಷದ ಕೂಸಾಗಿದ್ದಾಗ [ವಿಶಾಲಿ ಹೊಟ್ಟೆಯಲ್ಲಿದ್ದಾಗ, ಆ ಮನೆಯನ್ನು ನಾಗಮ್ಮನ. ಯಜಮಾನರು ಹಿಡಿದಿದ್ದರು, `ಹನ್ನೊಂದು ರೂಪಾಯಿ ಆಗಿನ ಬಾಡಿಗೆ ಮುಂದೆ ಹದಿಮೂರಾಗಿತ್ತು, ಹತ್ತೊಂಭತ್ತಕ್ಕೇರಿತು. ಇಪ್ಪತ್ತಮೂರಕ್ಕೆ ಬಂದು ನಿಂತಿತ್ತು. ಈಗ ಅಂತಹ ಮನೆ ಮೂವತ್ತೈದಕ್ಕೂ ಸಿಗುತ್ತಿರಲಿಲ್ಲ. " [ಬೆಂಗಳೂರಿನಲ್ಲಾದರೆ ಎಪ್ಪತ್ತು ಎಂಭತ್ತು ಹೇಳಿದರೂ ಹೇಳಿದರೇ... ಹೀಗಾಗಿ, ವಿಶಾಲಾಕ್ಷಿಯ ತಂದೆ ತೀರಿಕೊಂಡ ಬಳಿಕ ಮನೆ ಬದಲಾಯಿಸಬೇಕೆಂಬ ಮಾತು ಬಂದಿತ್ತಾದರೂ ಅಲ್ಲಿಗೇ ನಿಂತುಹೋಗಿತ್ತು, ತೂಗಿಸಿಕೊಂಡು ಹೋಗ ಬೇಕಾದ ಸಂಸಾರ, ಬಾಡಿಗೆಗಾಗಿ ಹೆಚ್ಚು ಹಣ ಸುರಿಯುವುದು, ದುಂದು ವೆಚ್ಚವಾಗಿಯೇ ನಾಗಮ್ಮನಿಗೆ ಕಂಡಿತು.” ಶೋಕಪೀಡಿತೆಯಾದ ಆರಂಭದ ದಿನಗಳಲ್ಲಿ, ಆ ಮನೆಯಲ್ಲಿ, ಹೆಜ್ಜೆ ಹೆಜ್ಜೆಗೂ 'ಅವರ' ನೆನಪೇ ಆಯಿತು ನಿಜ. ಆದರೂ ಪ್ರಯತ್ನಪೂರ್ವಕವಾಗಿ, ಇತರ ವಿಷಯಗಳ ಕಡೆಗೇ ಮನಸ್ಸು ಹರಿಸಿ, ನಾಗಮ್ಮ ಚೇತರಿಸಿಕೊಂಡಿದ್ದರು. 2 |- | • : 1 * P| - •n: E 1, .. - , --> | €!l ' « 4 E.