ನನಪು ಸಿಹಿ ೧ಡಿಗೆ .1 .. الطلمنيعععععععلمعهدفينتفيكا
- .*..?'-! ! ! ! -. ! ! - * ** !*r € ' dift+ =+ '1 -,k *ಕೆ: +1
Trku ವಿಶಾಲಾಕ್ಷಿ ಅಂದಳು: “ಗೊತ್ತಾಯ್ತು, ಬಹಳ ಒಳ್ಳೆ ಜಾಗ.” “ಈಗ ಪರಿಚಯವಾಗಿರೋ ಈದ್ಗಾದ ಜನರಿಗೂ ದೂರವಾಗೋದಿಲ್ಲ ; ಎಲ್ಲರಿಗೂ ಅನುಕೂಲ-ಅಂತ ಡಾಕ್ಟರು ಹೇಳಿದ್ರು.” “ಇಲ್ಲಿಂದ ಹೋಗೋದಕ್ಕೆ ಬರೋದಕ್ಕೆ ಬಸ್ ಸೌಕಯ್ಯವೂ ಇದೆ.” - [ನರ್ಮದೆಯ ನಾಲಗೆಯ ತುದಿಯವರೆಗೂ ಬಂತು, ತನ್ನ ಗಂಡ ಆದಷ್ಟು ಬೇಗನೆ ಕಾರುಕೊಳ್ಳಲು ತೀರ್ಮಾನಿಸಿರುವನೆಂಬ ವಿಷಯ ಪ್ರಯಾಸಪಟ್ಟು ಆ ಮಾತನ್ನು ತಡೆ ಹಿಡಿದಳು, ತಾನು ಆಡುವುದು ಅವರಿಬ್ಬರಿಗೂ ಡಾಂಭಿಕ ತನವಾಗಿ ತೋರಬಹುದೆಂದು ಅವಳು ಅಂಜಿದಳು.] “ಹೌದು” ಎಂಬ ಉತ್ತರ ಸ್ವಲ್ಪ ತಡವಾಗಿ ಬಂತು ಅವಳಿಂದ. ....ಬಳಿಕ ಲೋಕಾಭಿರಾಮ ಮಾತುಕತೆಯಾಯಿತು, ಚಲಚಿತ್ರಗಳ ಪ್ರಸ್ತಾಪವೂ ಬಂತು-ಒಂದೇ ಕ್ಷಣದ ಮಟ್ಟಿಗೆ ನರ್ಮದಾ ಅಂದಳು: * - ಫೀಲ್ಡ್ ಫೇರ್ ತರಿಸೋದು ಬಿಟ್ಟಿಟ್ಟಿದೀನಮ್ಮ, ಬೇಜಾರು, ಸಿನಿಮಾ ನೋಡೋಕೂ ಮನಸ್ಸಾಗೋದಿಲ್ಲ. ಬಹಳ ಚೆನ್ನಾಗಿದೇಂತ ಗೊತ್ತಾದರೆ, ಯಾವತ್ತಾದರೊಮ್ಮೆ ಭಾನುವಾರ ಸಾಯಂಕಾಲ ಹೋಗ್ತವೆ.” ಅದಕ್ಕೆ ಗಿರಿಜಾಯಿಯೆಂದರು: “ಮುರಲಿಯೇ ಸಾಕಷ್ಟು ಮನೋರಂಜನೆ ಒದಗಿಸ್ಕಾನೆ, ಅಲ್ವಾ?”. ಅದು ನಿಜವೆಂದು ಒಪ್ಪಿಕೊಳ್ಳುವ ನಗೆನಕ್ಕಳು ನರ್ಮದಾ ....ಸಂಜೆಯಾಗಿತ್ತು, ಬಿಸಿಲು ತಗ್ಗಿ, ತಣ್ಣನೆ ಗಾಳಿ ಸುಳಿಯಲು ಆರಂಭ ವಾಗಿತ್ತು ಆಗಲೇ. “ಇನ್ನು ಹೋಗೋಣ” ಎಂದು, ಗಿರಿಜಾಬಾಯಿಯ ಕಡೆ ನೋಡಿ ವಿಶಾ ಲಾಕ್ಷಿ ಅಂದಳು.... ....'ಹೂವೀಳ್ಯ'ದ ಅರಿಶಿನ ಕುಂಕುಮಕ್ಕೆ ಬಂದವರನ್ನು ಬೀಳ್ಕೊಡ ಲೆಂದು, ಮುರಲಿಯನ್ನೆತ್ತಿಕೊಂಡು ಬಸ್‌ಸ್ಟಾಪಿನವರೆಗೂ ನರ್ಮದೆ ಬಂದಳು. • 1 # ' .. ' ... 'z'... * * * * .... ... 1 - I - flor : .. - - 0° +-+-+ +++ - 1 7°
- *
74.tr -+ , 3 - *r | + L | ಮಾರ್ಕೆಟಿನ ಬಸ್ ನಿಲ್ದಾಣದಲ್ಲಿ ಗಿರಿಜಾಬಾಯಿ ಕೇಳಿದರು ; “ಗಂಗಾಧರ ಹೇಗೆ ಓದ್ದಿದಾರೆ ?”