ವಿಷಯಕ್ಕೆ ಹೋಗು

ಪುಟ:VISHAALAAKSHI - Niranjana.pdf/೧೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-لنديللطعن علي ನೆನಪು ಸಿಹಿ ೧೭ +--+L. « ಓಟ444444444ಟಓk143-42:- h-AJ &++++೩,೪೩, ...!: 4.೬-೬ , 14, ಅವಸರ ಅವಸರವಾಗಿ ಜೇಬುಗಳಿಗೆ ತುರುಕಿದ, ದೊಡ್ಡದೊಂದು ಶೀಷೆ ತುಂಬಾ ಮಿಕ್ಸ್ಚರ್ ತುಂಬಿದ, ಹ್ಯಾಂಡ್ ಬ್ಯಾಗನ್ನೂ ಎತ್ತಿಕೊಂಡ. ...ವಿಶಾಲಾಕ್ಷಿ, ಮಂಪರು ಕಳೆದಾಗ ಎರಡು ಮೂರು ಸಾರೆ ಕೇಳಿದಳು: 'ಡಾಕ್ಟರು ಬಂದರೆ ? ಅವರು ಬಂದರೆ ?” ಎಂದು ನಾಗಮ್ಮನಿಗಂತೂ ನಿರಾಸೆ ಯಾಗಿತ್ತು. ದೇವರ ಮುಂದೆ ಹಣತೆ ಇರಿಸಿ, ಗೋಡೆಗೊರಗಿ ಕುಳಿತವರು ಕುಳಿತೇ ಇದ್ದರು. ಒಂಭತ್ತರ ಹೊತ್ತಿಗೇ ನೆರೆಮನೆಯವನು ಬಂದು ಹೇಳಿದ: 'ಯಾವ ಡಾಕ್ಟರೂ ಷಾಪು ಬಿಟ್ಟು ಬರೋಸ್ಥಿತೀಲಿ ಇಲ್ಲ, ಕಿ....ಬೇಕಿ ದ್ದರೆ, ನಾಳೆ ಬೆಳಗ್ಗೆ ಔಷಧಿ ತಂದುಕೊಡ್ತೀನಿ.' ಅದನ್ನು ಕೇಳಿದಮೇಲಂತೂ, ಡಾಕ್ಟರನ್ನು ಗಂಗಾಧರ ಕರೆದುತರಬಹು ದೆಂಬ ನಂಬಿಕೆ ನಾಗಮ್ಮನಿಗೆ ಏನೇನೂ ಉಳಿಯಲಿಲ್ಲ. - ಅಂತಹ ಸ್ಥಿತಿಯಲ್ಲಿ ಟಾಂಗಾ ಬಂದು ನಿಂತಾಗ, ಅವರು ಧಿಗ್ಗನೆದ್ದರು. ಬಾಗಿಲು ತೆರೆದರು." ['ನರ್ಮದೆಯ ಗಂಡ ಈತ.] ತಮ್ಮ ಕೊರಗನ್ನೆಲ್ಲ ಶ್ರೀಕಾಂತನೆದುರು ತೋಡಿಕೊಳ್ಳಲು ನಾಗಮ್ಮ ಆ ಹೊತ್ತಿನಲ್ಲೂ ಸಿದ್ದರಾಗಿದ್ದರು. ಆದರೆ, ಮನೆಯಲ್ಲಿ ಹಿರಿಯ ತಾನೇ ಎನ್ನುವಂತೆ, ಗಂಗಾಧರ ಡಾಕ್ಟರನ್ನು ನೇರವಾಗಿ ಕೊಠಡಿಗೆ ಕರೆದೊಯ್ದ. ಮಲಗಿದ್ದ ಮೂವರ ನಾಡಿ ಬಡಿತಗಳನ್ನು ಶ್ರೀಕಾಂತ ನೋಡಿದ, ನಾಗಮ್ಮ ನಿಗೆ ಸಮಾಧಾನವಾಗಲೆಂದು, ಜ್ವರದ ಉಷ್ಣವನ್ನೂ ಅಳೆದ ನಾಲಗೆ-ಗಂಟಲು ಗಳನ್ನು ಪರೀಕ್ಷಿಸಿದ. “ಬರೇಜ್ವರ, ಏನೂ ಭಯವಿಲ್ಲ,” ಎಂದ. ಕಿಟಕಿಯ ಮೇಲಣ ಅರ್ಧಭಾಗವನ್ನು ತೆರೆದು, ನಿರ್ದೆಶವಿತ್ರ : “ಇದು ಹೀಗೇ ಇರಲಿ, ಸ್ವಲ್ಪ ಗಾಳಿ ಓಡಾಡಲಿ.” ನಡುಮನೆಯಲ್ಲಿ ಡಾಕ್ಟರು ತಾನು ತಂದಿದ್ದ ಮಿಕ್ಸ್ಚರಿನ ಶೀಷೆಯನ್ನಷ್ಟೆ ಹೊರತೆಗೆದುದನ್ನು ಕಂಡು, ಗಂಗಾಧರ ಕೇಳಿದ; “ಇಂಜೆಕ್ಷನು ಬೇಡೈ ಡಾಕ್ಟರೆ ?” ನಿಧಾನವಾಗಿ ಶ್ರೀಕಾಂತನೆಂದ: 5 . +4 4, - .೬ • 14, -+, ಭay ಓ==ಸ್. ಒಳ °