°e° ° .. | * 4 LI. 5 : --. ತಜದಯ 11"- ವಿಶಾಲಾಕ್ಷಿ - * ಊಟ ಮುಗಿಸಿ ಕೊಠಡಿಗೆ ಮರಳಿದ ವಿಶಾಲಾಕ್ಷಿ, ಮೇಜಿನ ಮೇಲಿದ್ದ 'ಪ್ರಬುದ್ಧ ಕರ್ಣಾಟಕ'ದ ಸಂಚಿಕೆಯನ್ನೂ ಲೇಖನದ ಪ್ರತಿಗಳನ್ನೂ ಮುದ್ದಿಸುವ ನೋಟದಿಂದ ಪುನಃ ಪುನಃ ನೋಡಿದಳು. ಬಿಳಿಯದೊಂದನ್ನು ಕೈಗೆತ್ತಿಕೊಂಡು ಹಾಳೆ ಮಗುಚಿದಳು, “ತಿದ್ದಿರಬಹುದು, ತಿದ್ದಿರಲೇಬೇಕು' ಎಂಬ ಶಂಕೆ [ಅಲ್ಲೊಂದು ಇಲ್ಲೊಂದು ಪದದ ಓರೆಕೋರೆಯನ್ನು ಒಪ್ಪಗೊಳಿಸಿದ್ದರು ಸಂಪಾದ ಕರು, ವಿಶಾಲಿಯ ಗಮನಕ್ಕೆ ಅದು ಬೀಳಲಿಲ್ಲ.] ತಾನು ಬರೆದಿದ್ದ ಹಾಗೆಯೇ ಅಚ್ಚಾಗಿತ್ತು. ಅದನ್ನಾಗಲೇ ಹಲವಾರು ಜನ ಓದಿರಬಹುದು, ಏನು ಹೇಳು ವರೆ? ಏನು ಹೇಳುವರೋ ? ಕುವೆಂಪು ಕೃತಿಯೂ ಇತ್ತು ಮೊದಲ ಪುಟ ದಲ್ಲೇ, ತಾನು ಬರೆದುದು ಅವರ ಕಣ್ಣಿಗೂ ಬೀಳಬಹುದು.... - ಹೊರಡುವ ಸಿದ್ಧತೆಗೆಂದು, ಸಡಿಲವಾಗಿದ್ದ ಹೆರಳನ್ನು ವಿಶಾಲಾಕ್ಷಿ ಬಿಚ್ಚಿ ದಳು ಕನ್ನಡಕವನ್ನು ತೆಗೆದು ಮೇಜಿನ ಮೇಲಿರಿಸಿ, ಗೋಡೆಯಲ್ಲಿ ತೂಗ ಹಾಕಿದ್ದ ಕನ್ನಡಿಗೆ ಸವಿಾಪವಾಗಿ ನಿಂತಳು ತುಟಿಗಳ ಮೇಲೆ ಲಾಸ್ಯವಾಡು ತಿದ್ದ ಮಂದಹಾಸ ಲೇಖಿಕೆ ವಿಶಾಲಾಕ್ಷಿ ತಾನು ಸೌವನದ ಒತ್ತಡಕ್ಕೆ ಹಿಂದೇಟು ಹೊಡೆಯುತ್ತಿದ್ದ ಮುಖದ ಮೇಲಿನ ಸಿಡುಬಿನ ಕಲೆಗಳು, ಲಜ್ಜಿತ ವಾಗಿ ತಮ್ಮ ಒಡತಿಯನ್ನು ಕಂಡುವು. ಬಾಲ್ಯದಿಂದಲೆ ಒಡನಾಡಿಗಳಾಗಿ ಬಂದಿದ್ದುವು, ಆ ಕಲೆಗಳು ಮತ್ತು ಕನ್ನಡಕ, ಮೈಗೂಡಿ ಹೋಗಿ ಈಗ ಆನಿ ಭಾಜ್ಯವೆನಿಸಿದ್ದ ಅಂಶಗಳು ....ಜಡೆಯೊ ? ತುರುಬೊ? ಹೃದಯ ನಲಿಯು ಶಿದ್ಧ-ಸುಖದ ಹಕ್ಕಿ- ಉಲಿಯುತ್ತಿದ್ದ ಈ ದಿ ನ ಮುಡಿಕಟ್ಟಬೇಕೆನಿಸಿತು. ಚೋಟುದ್ದ ಕೂದಲಲ್ಲ ತನ್ನದು, ಸಾಕಷ್ಟು ನೀಳವಾದದ್ದು, ಚೌರಿಯ ನೆರವಿಲ್ಲ. ದೆಯೇ ಹಿರಿದಾಗಿ ಕಾಣುವ ಗಂಟು ....ಎಣ್ಣೆಗಪ್ಪು ಮೈ, ಇದ್ದಿಲನ್ನೂ ನಾಚಿ `ಸುವ ಮೈಬಣ್ಣದ ಮಹಿಳೆಯರಿರುವಾಗ, ಇದೇ ಬಿಳುಪು.ಯಾವಾಗಲೂ ಹೋಲಿಸಿನೋಡಬೇಕಾದುದು ತಮಗಿ೦ತ ಉತ್ತಮರೊಡನಲ್ಲ, ತಮ್ಮಷ್ಟು ಭಾಗ್ಯವಂತರೂ ಅಲ್ಲದವರೊಡನೆ ....ಪೌಡರಿನ ತೆಳು ಲೇಪನ ಕಂಡೂ ಕಾಣಿಸ ದಷ್ಟು ... ಸೀರೆಗಳಿದ್ದುವು ಈಗ, ಆರಿಸಿ ಉಟ್ಟುಕೊಳ್ಳುವಷ್ಟು, ಈಗಲೂ ಸರಳ ವಾಗಿರುವುದೇ ಇಷ್ಟ ವಿಶಾಲಾಕಿಗೆ...'ಬೇಸರ' ಎಂದೊಡನೆ ಮೂಗುಮುರಿಯ ಬೇಕೆಂದೇನೂ ಅವಳಿಗೆ ಅನಿಸುತ್ತಿರಲಿಲ್ಲ. ಒಂದು ರೀತಿಯಲ್ಲಿ ಅದು ಇಷ್ಟ ಕೂಡಾ. ಆದರೂ ಬಿಳಿ ಅರಿವೆಯ 'ಬಾಡಿ'ಯೇ ಸಾಕೆನಿಸುತ್ತಿತ್ತು, ಅಭ್ಯಾಸವನ್ನು ಬದಲಿ. ಸುವುದು ಸುಲಭವಾಗಿರಲಿಲ್ಲ...
- * :.
೬, | 51 3: | r " " • : ' ಟ: ತ.: [ - 143 GLE
- 3 k-
E " • | 42:1 ತ' -I