- === •-+-+-+ ೧೭e ವಿಶಾಲಾಕ್ಷಿ - LLY೪ - '! TAL ' • - Porg ' ” – ಇ-- end ee vey ಆಗ ಅನಿರೀಕ್ಷಿತವಾಗಿ ಗಂಗಾಧರ ಬಂದರು, ಕವಿವರ್ಯರೇ ಧಾವಿಸಿಹೋಗಿ, ನಡುರಾತ್ರಿಯ ಹೊತ್ತಿಗೆ [ಅತಿಶಯೋಕ್ತಿ ತಪ್ಪಲ್ಲ.] ಡಾಕ್ಟರನ್ನು-ನಮ್ಮ ನರ್ಮದೆಯ ಗಂಡನನ್ನು – ಎಳಕೊಂಡು ತಂದರು. ಆಮೇಲೆ ಪ್ರತಿದಿವಸವೂ ಔಷಧಿಗಾಗಿ ಗಂಗಾಧರರದೇ ಓಡಾಟ, ಅಂತೂ ಎದ್ದೆವು ಎನ್ನು, ಗಂಗಾಧರರ ಉಪಕಾರದ ಋಣ ತೀರಿಸೋದು ಈ ಜನ್ಮ ದಲ್ಲಿ ಸಾಧ್ಯವಿಲ್ಲ ಎನ್ನುತ್ತಾರೆ ಅಮ್ಮ, - ಇದು ನಮ್ಮ ಮನೆಯ ಮೇಲೆ ಫ್ರ ನಡೆಸಿದ ಧಾಳಿಯ ಕಥೆ. ಹೆಚ್ಚು ಕಡಮೆ ಎಲ್ಲಾ ಮನೆಗಳಲ್ಲೂ ಹೀಗೆಯೇ, 'ಅಮ್ಮನ ಹಾಗೆ ವಯ ಸ್ಪಾದವರು, ಗಂಗಾಧರರಂತೆ ದೃಢಕಾಯರು-ಎಲ್ಲೋ ಕೆಲವರು ತಪ್ಪಿಸಿ ಕೊಂಡಿರಬಹುದು, ಅಷ್ಟೆ. ಸಾವುಗಳು ಕಡಮೆ, ಒಟ್ಟು ಎರಡೋ ಮೂರೋ, -- ಈ ಸಂಭ್ರಮದಲ್ಲೂ ಪರೀಕ್ಷೆಯ ಸಿದ್ದತೆ ನಡೆಸಿದ್ದೇನೆ. ಕಾಲ : ಎಷ್ಟೊಂದು ಬೇಗನೆ ಕಳೆದುಹೋಗಿದೆ! ನೀನು ಹಿಂತಿರುಗಿ ಬರುವ ದಿನವೂ ಹತ್ತಿರ ಬರುತ್ತಿದೆಯೆಂದು ಒಂದು ಬಗೆಯ ಆತುರ, ಎಲ್ಲರೂ ನಿನ್ನ ಹಾದಿ ನೋಡುತ್ತಿದೇವೆ, ಹೊರಡುವುದು ಯಾವ ತಿಂಗಳು, ಯಾವ ದಿನ-ಎಂಬುದನ್ನೆಲ್ಲ ವಿವರವಾಗಿ ಬರೆ. ಅಮ್ಮ ಆಶೀರ್ವಾದ ತಿಳಿಸಿದ್ದಾರೆ. ನಾವು ಮೂವರೂ ಒಲವು .. ಕಳಿಸುತ್ತಿದ್ದೇವೆ.. - ಇತಿ, ಪ್ರೀತಿಯ, - ವಿಶಾಲಿ, ಪತ್ರವನ್ನು ಬರೆದು ಮುಗಿಸಿದಾಗ ವಿಶಾಲಾಕ್ಷಿಗೆ ಬಹಳ ಬಳಲಿಕೆ ಎನಿಸಿತು. - ಎಷ್ಟೊಂದು ತೀವ್ರತರ ಜ್ವರ! ಶಕ್ತಿಯನ್ನೆಲ್ಲ ಹೀರಿ, ನನ್ನನ್ನು ಹಿಪ್ಪೆ ಮಾಡಿದೆಯಲ್ಲ...? “ ಬರೆಯುವಾಗ ಗಂಗಾಧರನ ನೆನಪು ಬೇರೆ ಒಂದೇ ಸಮನೆ ಕಾಡಿತ್ತು. ಹತ್ತಿರವೇ ಇರುತ್ತಿತ್ತು ಆ ನಗುಮುಖ, ಅಣ್ಣನಿಗಲ್ಲವೆ? ನನ್ನ ವಿಷಯ ಬರೆ; - ನನ್ನ ವಿಷಯ ಬರೆ,' ಎನ್ನುತ್ತಿತ್ತು, -+ – |
- 1,
+----------- ----+23
!- 1 # 1 1 1 1 | 11 • : ..' •° 3 ೨ :: 1. * 1, - ಜಿ.