ವಿಷಯಕ್ಕೆ ಹೋಗು

ಪುಟ:VISHAALAAKSHI - Niranjana.pdf/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨ ವಿಶಾಲಾಕ್ಷಿ YY? ಜಷಿ Ika: Kikiskiyi, i-KA ಪೂರ್ವಜನ್ಮದಲ್ಲಿ ಯಾವ ಬಗೆಯ ಪಾಪಿಯಾಗಿದ್ದೆನೊ ? ಮುತ್ತೈದೆಯ ಸಾವು, ಪಡೆದುಬಂದಿರಬೇಕಾದ ಭಾಗ್ಯ, ತನಗೆಲ್ಲಿಂದ ಬರಬೇಕು ಅದು ? ಆ ಸಮಯಕ್ಕೆ ಮುನ್ನವೇ ಮುಪ್ಪು ಅಡರಿತ್ತು ತನ್ನನ್ನು, ರಾತ್ರೆ ಎಷ್ಟು ಹೊತ್ತಾದರೂ ಈಗ ನಿದ್ದೆ ಬರುತ್ತಿರಲಿಲ್ಲ, ಯೋಚನೆಗಳು-ಆದಿ ಅಂತ್ಯ ಒಂದೂ ಇಲ್ಲದ ಯೋಚನೆಗಳು ಎಲ್ಲಿಂದಲೋ ಆರಂಭಿಸಿ ಎಲ್ಲೆಲ್ಲಿಗೋ ಮನಸ್ಸು. ತಾನು ಮಾತ್ರ ಅಜ್ಜಿಯಾಗಿರಲಿಲ್ಲ, ಅತ್ತೆಯೂ ಆಗಿರಲಿಲ್ಲ. - ಮುಂದೇನಿನ್ನು ?, ಮುಂದೇನು ? ಗಂಡು ಹುಡುಕುವವರು ಯಾರು ? ಗಂಡು ಮಾತ್ರವಲ್ಲ, ವಿಶಾಲಿಗೆ ಮದುವೆಯಾದೊಡನೆ ಸೊಸೆಯೂ ಒಬ್ಬಳು ಈ ಮನೆಗೆ ಬರಬೇಕು....

  • ತನ್ನ ಅಣ್ಣ ಈಗ ಇದ್ದಿದ್ದರೆ ನೆರವಾಗುತ್ತಿದ್ದ, ಆ ವಿಷಯದಲ್ಲೂ ತಾನು ದುರ್ಭಾಗ್ಯವಂತೆ, ಮೈದುನನಿಂದಂತೂ ಯಾವ ಸಹಾಯವನ್ನೂ ನಿರೀಕ್ಷಿಸ ಬೇಕಾದುದಿಲ್ಲ, ಒಡಹುಟ್ಟಿದ ತಂಗಿಯನ್ನಾದರೂ ತಾನೊಮ್ಮೆ ಕಾಣಬೇಕು, ಆಕೆಯ ಗಂಡ ಒಳ್ಳೆಯವನು ಬಡವನಾದರೇನಂತೆ ? ಎಲ್ಲಾದರೂ ಒಳ್ಳೆಯ ಕಡೆ........ಈಸಲದ ದಸರೆಗೆ ಅವರನ್ನು ಕರೆಯಬೇಕು. ಅಥವಾ, ತಾನೇ ವಿಶಾಲಿಯ ಜತೆ ತುಮಕೂರಿಗೆ ಹೋದರೆ ? ಬೇಡ, ವಿಶಾಲಿಯ ಜತೆಯಲ್ಲಲ್ಲ. ಒಟ್ಟಿಗೆ ಜಯರಾಮುವನ್ನು ಕರೆದೊಯ್ದ ರಾಯಿತು, ಯಾವುದಕ್ಕೂ ಮೊದಲು ಕಾಗದ ಬರೆಯಬೇಕು ತಂಗಿಗೆ |

'ಕಾಗದ ಬರೆಯಬೇಕು.” ವಾರಕ್ಕೊಂದು ತಪ್ಪದೆ ಬರುತ್ತಿತ್ತು ರಂಗ ರಾಜನಿಂದ ಅಲ್ಲ, ಅಷ್ಟು ದೂರ ಆತ ಮರಳಿ ಹೋಗಲು ತಾನು ಯಾಕೆ ಒಪ್ಪಿದೆ ಅಂತ ? ಪ್ರತಿ ತಿಂಗಳೂ ಅವನು ಕಳುಹಿಕೊಡುತ್ತಿದ್ದ ನೂರೈವತ್ತು ರೂಪಾಯಿ ಕಡಮೆ ಹಣವಲ್ಲ. ಆದರೂ, ಇಲ್ಲಿಯೇ ಕೆಲಸಕ್ಕೆ ಯತ್ನಿಸಿದ್ದರೆ ? ಹಿರಿಯ ಹುಡುಗ ಬಳಿಯಲ್ಲಿದ್ದ ನೆಂದರೆ ತನಗೆ ಅದೇ ಒಂದು ಸಮಾಧಾನ. ಇನ್ನಾದರೂ-ಇನ್ನಾದರೂ-ಬಾ' ಅಂತ ಅವನಿಗೆ ಬರೆಸಬೇಕು, ಬರೆಯು ನವಳು ವಿಶಾಲಿ, ಈಕೆ ಒಪ್ಪಬೇಕಲ್ಲ ಅದಕ್ಕೆ ? ಈ ಮನೆಯಲ್ಲಿ ಒಂಟಿಯಾಗಿ ಕಾಲ ಕಳೆಯುವುದಂತೂ ಎಷ್ಟು ಬೇಸರ! ಹುಲ್ಲು ಕಮರಿದ ಬಟ್ಟ ಬಯಲಿನಲ್ಲಿ ಏಕಾಕಿಯಾಗಿ ತನ್ನನ್ನು ಬಿಟ್ಟ ಹಾಗೆ.... ...ಅಲ್ಲಿಯೇ ಅವರು ಕೂತಿರುತ್ತಿದ್ದುದು. •an ಜLLittlkವನಿಗಳು:4 ದಿ k3 :

-+: wx=€
  1. c - -.-