ವಿಷಯಕ್ಕೆ ಹೋಗು

ಪುಟ:VISHAALAAKSHI - Niranjana.pdf/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಪ್ರೇಮಕ್ಕೆ ಕಣ್ಣಿಲ್ಲ
೨೫

ಎದುರು ಬದಿಯಲ್ಲಿ ಬಲು ಹಳೆಯದಾದೊಂದು ಸಂಸಾರ-ಭಾವಚಿತ್ರವಿತ್ತು. ನಾಗಮ್ಮ ಮತ್ತು ಅವರ ಯಜಮಾನರು, ಚಡ್ಡಿ ಧರಿಸಿದ್ದ ರಾಜು, ಲಂಗ ತೊಟ್ಟಿದ್ದ ವಿಶಾಲಿ, ತಾಯಿಯ ತೊಡೆಯ ಮೇಲಿದ್ದ ಕೂಸು ಚಂದ್ರ. ಆಗ ಇನ್ನೂ ಜಯನ ಆಗಮನವಾಗಿರಲಿಲ್ಲ.

ವಿಶಾಲಿ ಅಂದಿದ್ದಳು :

ಈ ಚಿತ್ರ ಚೆನ್ನಾಗಿದೆಯಮ್ಮ ನಮ್ಮ ತಂದೆದನ್ನು ಅಷ್ಟೇ ಬೇರೆ ತೆಗೆದು, ದೊಡ್ಡದಾಗಿ ಮಾಡಿಸೋಕು ಕಮಲ್ ಸ್ಟುಡಿ ಯೋನವರು ಚೆನ್ನಾಗಿ ಮಾಡ್ಕೊಡ್ತಾರೆ.

ಎಷ್ಟು ಖರ್ಚಾಗಬಹುದು ?-ಎಂದು ನಾಗಮ್ಮ ಕೇಳಿರಲಿಲ್ಲ. ಒಳ್ಳೆಯ ಕೆಲಸಕ್ಕೆ ಖರ್ಚು ಎಷ್ಟಾದರೇನಂತೆ ? ಯೋಚಿಸಲೇಬಾರದು ಆ ವಿಷಯ. ತನ್ನ ದೇವರ ಚಿತ್ರ, ದೊಡ್ಡದಾಗಿ, ಮನೆಗೇ ಶೋಭೆಯಾಗಿ.......

“ಅಮ್ಮಾ, ಏನ್ಮಾಡ್ತಿದೀಯಾ? ಬಡಿಸು ನಂಗೆ.”ನುಡಿದ.

ಅವಸರವಾಗಿ ಒಳಕ್ಕೆ ಬಂದು, ತಾಯಿಯ ಬಳಿಸಾರಿ, ಜಯರಾಮು ಹಾಗೆ ನುಡಿದ

ಸರಿಯಾಗಿ ಕೈಕಾಲು ತೊಳೆಯುವ ವ್ಯವಧಾನವೂ ಇಲ್ಲ ಅವನಿಗೆ

ತಮ್ಮ ಸುತ್ತಲೂ ನೇಯತೊಡಗಿದ್ದ ಯೋಚನೆಗಳ ನೆನಪುಗಳ-ಬಲೆಗಳ ನ್ನೆಲ್ಲ ಬದಿಗೆ ಸವರಿ, ಲಗುಬಗೆಯಿಂದ ನಾಗಮ್ಮ ಅಡುಗೆ ಮನೆಯತ್ತ ನಡೆದರು.

ಮಗನ ಒದ್ದೆ ಪಾದಗಳನ್ನು ನೋಡಿ ಅವರೆಂದರು :

“ಸರಿಯಾಗಿ ಒರಸ್ಕೋಬಾರದೇನೋ ?”

“ಇರಲಿ, ಬಿಡಮ್ಮ.”

ತಾಯಿಯಬಳಿ ಹೆಚ್ಚು ಸಲಿಗೆ ಕಿರಿಯವನಿಗೆ ಅವರಿಗೂ ಆತ ಮುದ್ದಿನಮಗ

....ಉಣ್ಣುತ್ತ ಜಯರಾಮು ಕೇಳಿದ :

“ಅಕ್ಕ ಕಾಲೇಜಿಗೆ ಹೋದಳಾ ?”

" ಹೂಂ."

“ನಿನ್ನ ಊಟ ಆಯ್ತಾ ?”

“ಇನ್ನೂ ಇಲ್ಲವಪ್ಪ.”

ಚಂದ್ರ ಉಂಡುಹೋದನೆ?-ಎಂದು ಜಯರಾಮು ಇನ್ನು ಕೇಳಬೇಕು. ಅಷ್ಟರಲ್ಲಿ, ಆತ ಬಂದನೆಂಬುದಕ್ಕೆ ಸಾಕ್ಷಿಯಾಗಿ, ಹೊರಗೆ ಸೈಕಲ್ಲಿನ ಸದ್ದಾಯಿತು.