ವಿಷಯಕ್ಕೆ ಹೋಗು

ಪುಟ:VISHAALAAKSHI - Niranjana.pdf/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏ <s. 3- - -ಡಾ.ಎಳೆ ಹಿತ್ಯ { - ? "El 1 === FTz Fಣ

  • ,* Fxrb

ಕಾಳಭೆಗೆ ಆರ್ಡ‌್ರ ಕಾರಾ?".. :- . L. 55:53,+ ಇ/ - ಪ್ರೇಮಕ್ಕೆ ಕಣ್ಣಿಲ್ಲ “ಹೇಗಿದ್ದವರು ಹೇಗಾದೆನೂಂತ ಹುಡುಗಿಯರಾಗಿದ್ದಾಗ ಅದೇ ಒಂದು ತರಹೆ, ವಯಸ್ಸು ಚಿಕ್ಕದು, ಮನಸೂ ಸ್ವಲ್ಪ ಚಿಕ್ಕದೇ !...” ಸಣ್ಣತನದ ಈ ಆರೋಪ ತನ್ನ ಬಗೆಗಲ್ಲ ಎಂದು ವಿಶಾಲಿ ಬಲ್ಲಳು. ಗೆಳತಿಯ ಸ್ವಯಂ ವಿಮರ್ಶೆ ಸ್ವಾರಸ್ಯಕರವಾಗಿ ಅವಳಿಗೆ ಕಂಡಿತು. ಇದ್ದಕ್ಕಿದ್ದಂತೆ ತರಗತಿಗೆ ತಡವಾಯಿತೇನೋ ಎಂದು ಗಾಬರಿಗೊಂಡು, ವಿಶಾಲಾಕ್ಷಿ ತನ್ನ ಕೈಗಡಿಯಾರವನ್ನು ನೋಡಿದಳು. “ಬಸ್ಸು ಎಷ್ಟಕ್ಕಿದೆಯೋ ಈಗ ?” “ಹೊತ್ತಾಯ್ತ? ಹೊರಡ್ತೀಯಾ ?” “ಹೂಂ, ಹೂಂ.” “ಒಂದೂವರೆಗೆ 'ಒನ್-ಏ'ನೋ 'ಸಿಕ್ಸ್-ಏ'ನೋ ಪ್ಯಾನಟೋರಿಯಂ ಬಿಡುತ್ತೆ.” | “ಸರಿ ಹಾಗಾದರೆ, ಬರಿಸಿ, ಇನ್ನು ಐದು ನಿಮಿಷ ಇದೆ.” “ಪುನಃ ಯಾವತ್ತು ಭೇಟಿ ?” “ಬಿಡುವಾದಾಗ, ನೀನೂ ಒಮ್ಮೆ ಬಾರೇ ನಮ್ಮ ಮನೆ ಕಡೆಗೆ.” “ಎಲ್ಲಮ್ಮ-ಡಾಕ್ಟರಿಗಂತೂ ಪುರುಸೊತ್ತೇ ಇರೋದಿಲ್ಲ.” “ಅದು ಗೊತ್ತಿಲ್ವಾ ನಂಗೆ ? ಟಾಂಗಾ ಮಾಡ್ಕೊಂಡು ಮುರಲೀ ಜತೆ ನೀನೇ ಬಂದ್ವಿಡಂತೆ, ನಮ್ಮಲ್ಲಿಂದ ನಿಮ್ಮ ತಾಯಿ ಮನೆಗೂ ಹೋಗೃಹುದು.” - “ಆಗಲಿ....” ಎಂದಳು ನರ್ಮದಾ. ಬಳಿಕ, “ತಾಳು ಒಂದ್ವಿ ಮಿಷ” ಎನ್ನುತ್ತ ಒಳಹೋಗಿ, ಕುಂಕುಮ ತಂದಳು. [ಅತ್ತೆ ಜ್ಞಾಪಿಸಿಕೊಡಬೇಕಾದ ಅಗತ್ಯವೇ ಇರಲಿಲ್ಲ.] ಇದ್ದು ದರ ಕೆಳಗೆ ಮತ್ತೊಂದು ಬೊಟ್ಟು-ಹುಬ್ಬುಗಳ ಮಧ್ಯೆ, “ಹೇಳ್ಳಿಡು ನಿಮ್ಮತ್ರೆಗೆ.” “ಹೂಂ.” “ನಿಮ್ಮ ಯಜಮಾನರಿಗೂ ನಮಸ್ಕಾರ ತಿಳಿಸಮ್ಮ.” “ಹೂಂ, ಹೂಂ.” ವಿಶಾಲಾಕ್ಷಿ, ಹೊರಬಂದು ಕಾಲಿಗೆ ಚಪ್ಪಲಿ ಸಿಕ್ಕಿಸಿಕೊಳ್ಳುತ್ತಿದ್ದಂತೆ, ಅವಳನ್ನು ಹಿಂಬಾಲಿಸಿದ ನರ್ಮದಾ ಕರೆದಳು ; Kl++Aft+ • ' ! 53 ಏಕೆ? ರ್ಟ..- - SF.: : : : ' , .. ... ........: *: ಸಿ .ಬಸವನ ಭಕ ಟಿ-K