ಪುಟ:VISHAALAAKSHI - Niranjana.pdf/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

" $ 1 1 11, 1 | +! 12 } ತ6+ ಹಸಿರು ಸಂಜೆ ಶುಭ R 3: ಗಸಿದೆ ತರಗತಿಯೊಳಕ್ಕೆ ಕಾಲಿರಿಸಿದಾಗ, ಸಹಾಧ್ಯಾಯಿಗಳೆಲ್ಲ ತನ್ನನ್ನೇ ನೋಡು ತಿದ್ದಂತೆ ವಿಶಾಲಾಕ್ಷಿಗೆ ಭಾಸವಾಯಿತು, ತನ್ನ ಲೇಖನವನ್ನು ಇವರೆಲ್ಲ ಆಗಲೇ ಓದಿರಬೇಕು, ಇನ್ನು ಕೀಟಲೆ ಶುರುಮಾಡಬಹುದು ಎಂದುಕೊಂಡಳು. ಆದರೆ ವಾಸ್ತವವಾಗಿ ಹಾಗೇನೂ ಇರಲಿಲ್ಲ.. ಎಂದಿನಂತೆಯೇ ಇತ್ತು ತರಗತಿ, ಕನ್ನಡ - ಲೇಖನಗಳನ್ನೆಲ್ಲ ಅಷ್ಟೊಂದು ಬೇಗನೆ ಓದುವ ಆಸಕ್ತಿ ಅವರಿಗೆ ಇದ್ದರೆ ತಾನೆ?" - ನರ್ಮದೆಯ ಮನೆಯಲ್ಲಿ ಅವಸರವಾಗಿ ಪುನಃ ಬಿಗಿದಿದ್ದ ಕಟ್ಟನ್ನು ಮಾತ್ರ, ವಿಶಾಲಾಕ್ಷಿ ಡೆಸ್ಕಿನ ಮೇಲಿರಿಸಲಿಲ್ಲ. “ಏನದು ?” ಎಂಬ ಪ್ರಶ್ನೆಗೆ ತುತ್ತಾಗಲು ಅವಳು ಸಿದ್ಧಳಿರಲಿಲ್ಲ. - ಪ್ರವಚನ ನಡೆಯಿತು, ನಿತ್ಯದಂತೆಯೆ ಸರಸ ಸರಣಿಯಲ್ಲಿ ಪ್ರಾಧ್ಯಾಪಕರ ವಾಗೃರಿ ಹರಿಯಿತು.

  • [ಅವರಿಗೊಂದು ಪ್ರತಿಯನ್ನು ತಲುಪಿಸುವುದು ಹೇಗೆ ? ತರಗತಿಯಿಂದ ಅವರು ಹೊರಬೀಳುವಾಗ ಕೊಡಲೆ? ಈ ಪ್ರವಚನದ ಬಳಿಕ ಅವರಿಗೆ ಬಿಡುವು. ಟೆನ್ನಿಸ್ ಆಟಕ್ಕೆ ಹೋಗುವುದಕ್ಕೆ ಮುನ್ನ ತುಸು ಹೊತ್ತು ವಿರಮಿಸುವುದು ಅವರ ಅಭ್ಯಾಸ, ಇತರ ಪ್ರಾಧ್ಯಾಪಕರೂ ಹಲವಾರು ಜನರಿರುವಾಗ ಅಲ್ಲಿಗೆ ಹೋಗುವುದು ಸರಿಯಲ್ಲ, ಅಂಚೆಯ ಮೂಲಕ ಕಳುಹಿಬಿಡುವುದೇ ಮೇಲು, ಆದರೆ, 'ಕೈಯಾರೆ ಯಾಕೆ ಕೊಡಲಿಲ್ಲ ?” ಎಂದು ಅವರು ಕೇಳುವುದು ಮಾತ್ರ ಖಂಡಿತ, ಏನಪ್ಪಾ ಮಾಡಿಲಿ ? ಏನಪ್ಪಾ ಮಾಡಲಿ ?....ಇವತ್ತಲ್ಲದಿದ್ದರೆ ನಾಳೆ, ನಾಳೆಕೊಟ್ಟರಾಯ್ತು. ಅವಸರವೇನೀಗ? ಕೈಸೇರಿದೊಡನೆಯೇ ಪ್ರತಿಯನ್ನೆತ್ತಿಕೊಂಡು ಬಂದ ತಾನೊ' ಬೃಳು ಹುಚ್ಚಿಯೇ ಸರಿ.']

ತರಗತಿ ಮುಗಿದು ಪ್ರಾಧ್ಯಾಪಕರೆದ್ದರು. ಅವರನ್ನು ಹಿಂಬಾಲಿಸಿದರು (Mar 7isು ಯುವ ನಾಯಕ.ಟ. G ಸಸಿ 222 - : °. ಸಾ.7: . « P: T ಸys:32A4%ಕುತh:47-9447! | K " | kukkakshashek ' ! 59 # ತH?

  • ತಕ್ಕ..:- -: +ಳgಳು