ವಿಶಾಲಾಕ್ಷಿ
ವಿದ್ಯಾರ್ಥಿಗಳು, “ಮಹಾರಾಣಿ ಕಾಲೇಜಿಗೆ ಹೋಗಿ ಗಿರಿಜಾಬಾಯಿಗೆ ಚೀಟಿ ಕಳುಹೋಣ ಇನ್ನು' ಎಂದುಕೊಳ್ಳುತ್ತ ವಿಶಾಲಾಕ್ಷಿ ಎದ್ದಳು.
ಹೊರಬಂದು ಅಂಗಳಕ್ಕಿಳಿದರೆ, ದೂರದಲ್ಲಿ ಮರದ ಕೆಳಗೆ ನೆರಳಲ್ಲಿ ಒಬ್ಬ ವಿದ್ಯಾರ್ಥಿಯೊಡನೆ ಮಾತನಾಡುತ್ತ ನಿಂತಿದ್ದರು ಪ್ರಾಧ್ಯಾಪಕರು. ['ಸ್ವಂತದ ವೈಯಕ್ತಿಕ ಸಮಸ್ಯೆಯನ್ನು ಕುರಿತು ವಿದ್ಯಾರ್ಥಿ ಅವರೆದುರು ತೋಡಿಕೊಳ್ಳುತ್ತಿರ ಬೇಕು.] ಆ ದಾರಿಯಾಗಿಯೇ, ಅವರನ್ನು ಹಾದೇ, ವಿಶಾಲಿ ಸಾಗಬೇಕಾಗಿತ್ತು. ಹಾಗೆ ಕಣ್ಣಿಗೆ ಬಿದ್ದಾಗ ಬರಿಯ ಮುಗುಳುನಗೆಗಳ ವಿನಿಮಯ, ಆದರೆ, ಈಗ ವಿಶಾಲಾಕ್ಷಿ ಅವರನ್ನು ಸಮೀಪಿಸುವಷ್ಟರಲ್ಲೇ, ಆ ವಿದ್ಯಾರ್ಥಿ ವಂದಿಸಿ ಹೊರಟು ಬಿಟ್ಟ, ಪ್ರಾಧ್ಯಾಪಕರು ನಡೆಯಲು ತೊಡಗಿದಂತೆಯೇ ಅವರ ಮಗ್ಗುಲಿಗೆ ಬಂದು ಬಿಟ್ಟಳು ವಿಶಾಲಾಕ್ಷಿ,”.
“ಹಲೋ.?"
ವಿಶಾಲಾಕ್ಷಿ ಮಂದಹಾಸಬೀರುತ್ತ, ಕತ್ತನ್ನು ತುಸು ಬಾಗಿಸಿ ನಮಿಸುವ ಶಾಸ್ತ್ರ ಮುಗಿಸಿದಳು..
ಪ್ರಾಧ್ಯಾಪಕರು ಇಂಗ್ಲಿಷಿನಲ್ಲಿ ಕೇಳಿದರು :
“ಮನೆಗೆ ಹೊರಟಯೇನು ?” ..
“ಹೂಂ ಸರ್.?
“ಹೇಗಿದೀಯ ? ಯಾವುದೂ ಕಷ್ಟ ಅನಿಸೋದಿಲ್ಲ, ಅಲ್ವೇ ?”
“ಇಲ್ಲ ಸರ್.”. (ಅಂದ ಹಾಗೆ ಮೈನಾವತಿಯಿಂದೇನಾದರೂ ಕಾಗದ ಬಂದಿದೆಯೆ ?”
“ನರ್ಮದಾಗೆ ಮೊನ್ನೆಯಷ್ಟೇ ಬರೆದಿದ್ದು ಸರ್.”
“ನರ್ಮದಾ? ಆ೦-ಆ ಮಗು....ಹುಂ....ಚೆನ್ನಾಗಿದಾಳಂತಾ ಮೈನಾವತಿ?”
[ಗೃಹರಂಗದಲ್ಲಿ ಮೈನಾ ಸಾಧಿಸಿದ್ದ ಪ್ರಗತಿಯನ್ನು ಕುರಿತು ಪ್ರಾಧ್ಯಾಪಕರಿಗೆ ಹೇಳುವಂತಿರಲಿಲ್ಲ!].
“ಹೂಂ. ಚೆನ್ನಾಗಿದಾಳೆ.”
“ಒಳ್ಳೆ ಹುಡುಗಿ, ನೀನು ಕಾಗದ ಬರೆದಾಗ ನನ್ನ ಶುಭಾಶಯ ತಿಳಿಸು.”
“ ತಿಳಿಸ್ತೀನಿ.” ,