“ಬೇಜಾರು ಬಂತೇನ್ರಿ ಎಂ.ಎ. ಕ್ಲಾಸು ?” _
ಅವರಿಗೇನಪ್ಪಾ-ರಾಂಕ್ ಬರೋರು!”
ಮೊದಲಮಾತು ಉದ್ಗಾರಗಳೆಲ್ಲ ಮುಗಿದ ಬಳಿಕ, ಶಾಂತಾದೇವಿ-ಗಣಿತ ವಿಶಾರದೆ-ವಿಶಾಲಾಕ್ಷಿಯ ಬಳಿ ಸಾರಿ, ಮುಗುಳುನಗೆಯ ಪೀಠಿಕೆಯೊಡನೆ ಅಂದರು :
ಗಿರಿಜಾಬಾಯಿ ಬ೦ದಿಲ್ಲ ಕಣ್ರೀ, ಸೋಮವಾರದಿಂದಲೂ ರಜೆಯ ಮೇಲಿದಾರೆ, ಗೊತ್ತೆ ಇಲ್ವೆ ನಿಮಗೆ ?”
ನೀನು ಬಂದುದು ಗಿರಿಜಾಬಾಯಿಗೋಸ್ಕರವೇ ಎನ್ನುವುದನ್ನು ಬಲ್ಲೆಎಂಬ ಸೂಚ್ಯಾರ್ಥವೂ ಇತ್ತು ಆ ಧ್ವನಿಯಲ್ಲಿ..
“ಇಲ್ಲವಲ್ರೀ...ಯಾಕೆ ? ಬೆಂಗಳೂರಿಗೆ ಹೋಗಿದಾರೇನು ?” “ಜ್ವರ ಅಂತ ಕಾಣುತ್ತೆ. ಲೀವ್‌ಲೆಟರಿನಲ್ಲಿ ಹಾಗಿದೆಯಪ್ಪ, ಇನ್ನು”
ಅದನ್ನು ಕೇಳುತ್ತ ವಿಶಾಲಾಕ್ಷಿಯ ಮನಸಿನೊಳಗಾದ ಕಸಿವಿಸಿ, ಮಾತಿನ ರೂಪ ತಳೆಯಲಿಲ್ಲ. ಆ ಅಸ್ವಾಸ್ಥಕ್ಕೆ ತಾನೇನೂ ಪ್ರಾಧಾನ್ಯ ಕೊಡುತ್ತಿಲ್ಲವೆನ್ನುವಂತೆ ಸುಮ್ಮನಿದ್ದು, ದುಗುಡವನ್ನು ಶಾಂತಾದೇವಿಯಿಂದ ಮರೆಮಾಚಿ; ಅವಳೆಂದಳು:
“ಇನ್ನೇನ್ರೀ ಸಮಾಚಾರ ?” .
“ಏನಿರುತ್ತೆ ಹೇಳಿ? ಗಡಿಯಾರದ ಮುಳ್ಳಿನ ಹಾಗೆ ಜೀವನ ಇಲ್ಲಿ ನಡೀತಿದೆ.”
ಮತ್ತೂ ಹೆಚ್ಚು ಹೊತ್ತು ಅಲ್ಲಿರಲು ಇಷ್ಟಪಡದೆ, “ಬರ್ತೀನ್ರಿ” ಎಂದು, ವಿಶಾಲಾಕ್ಷಿ ಹೊರಟಳು.
ಗಿರಿಜಾಬಾಯಿಗೆ ಜ್ವರ, ವಿಶಾಲಾಕ್ಷಿಯ ಮನಸ್ಸನ್ನು ಆ ಸುದ್ದಿ ಅಲ್ಲೋಲಕಲ್ಲೋಲಗೊಳಿಸಿಬಿಟ್ಟಿತ್ತು.. ಎಷ್ಟು ತೊಂದರೆಯೊ-ಪಾಪ, ಎಷ್ಟು ಕಷ್ಟವೋ....ಶಾಂತಾದೇವಿ ಹೇಳಿದಾಗಲೇ, ನೋಡಲು ತಾನು ಹೋಗಬೇಕೆಂದು ವಿಶಾಲಾಕ್ಷಿ ನಿರ್ಧರಿಸಿದ್ದಳು....
ಶಿವರಾಮಪೇಟೆಯ ಮೂಲಕ ಬೇಗಬೇಗನೆ ಆಕೆ ದೇವರಾಜ `ಮಾರ್ಕೆಟ್ ಗೆ ನಡೆದಳು. ಮತ್ತೆ ಹತ್ತು ನಿಮಿಷಗಳಲ್ಲಿ ಕೆಸರೆಗೆ ಹೋಗುವ ಬಸ್ಸು ಬರ ಬೇಕು, ಬರಿಗೈಯಲ್ಲಿ ಹೋಗಬಾರದು ; ನಾಲ್ಕಾರು ಕಿತ್ತಳೆಹಣ್ಣುಗಳನ್ನಾದರೂ