“ಹೂಂ.”
ವಿಶಾಲಾಕ್ಷಿ ಕೇಳಿದಳು :
“ಒಲೆ ಹಚ್ಚಿಕೊಡ್ಲಾ, ರಮಾ ?”
ಅಮ್ಮನಿಗೆ ಜ್ವರ ಬಿಟ್ಟಿದೆಯೆಂದು ಹರ್ಷಿತಳಾದ ರಮಾ ಅಂದಳು :-
“ಬೇಡ್ರೀ : ನನಗೆ ಒಲೆ ಹೆಚ್ಚೋಕೆ ಬರುತ್ತೆ!”:
ನಾಲ್ಕು ಮಕ್ಕಳನ್ನು ಹೆತ್ತಿದ್ದ ಗಿರಿಜಾಬಾಯಿಗಿನ್ನೂ ನಾಲ್ವತ್ತು ದಾಟಿರಲಿಲ್ಲ. ನೋಡಲು ಮಾತ್ರ ಹೆಚ್ಚು ವಯಸ್ಸಾದವರಂತೆ ಕಾಣುತ್ತಿದ್ದರು, ಆ. ಭಾವನೆಗೆ ಕಾರಣವಾಗಿದ್ದುದು ಬಿಳಿಯ ತಲೆಗೂದಲು, ರಾಧಾಕೃಷ್ಣನ ಸಾವಿಗೆ ಮುನ್ನ ಒಂದು ಕೂದಲೂ ಬಿಳುಪಾಗಿರಲಿಲ್ಲ... ಆ ಬಳಿಕ, ಬಲು ಬೇಗನೆ, ಅರ್ಧಕ್ಕರ್ಧ ನರೆತಿತು. . ..
ಟೀಪಾಯ್'ಯ ಮೇಲೆ ವಿಶಾಲಾಕ್ಷಿ ಇರಿಸಿದ್ದ ಪ್ಯಾಕೆಟನ್ನು ಗಿರಿಜಾ ಬಾಯಿ ಎತ್ತಿಕೊಂಡರು, ಹಿಂದುಮುಂದು ನೋಡದೆ, ಗೆಳತಿಯ ಸಮ್ಮತಿಯನ್ನೂ ಕೇಳದೆ, ಅದನ್ನು ಬಿಚ್ಚಿದರು, ಒಳಗಿದ್ದುದನ್ನು ನೋಡಿ ಉದ್ಗರಿಸಿದರು :
ಓ ! ಬಂತೇನ್ರೀ ಲೇಖನ ?”
ವಿಶಾಲಾಕ್ಷಿಗೆ ಆದಷ್ಟೇ ಸಂತೋಷವಾಯಿತು ಅವರಿಗೂ. ಮತ್ತೂ ಉಳಿದಿದ್ದ ಲೇಖನದ ಪ್ರತಿಯ ಮೇಲೆ, ವಿಶಾಲಿ ಬರೆದಳು.:
ಆತ್ಮೀಯರಾದ ಗಿರಿಜಾಬಾಯಿ-ಗೆ..
ಪ್ರೀತಿಪೂರ್ವಕ ಕಾಣಿಕೆ.
ಅದರ ಕೆಳಗೆ “ವಿ' ಎಂಬ ಅಂಕಿತಿವಷ್ಟೇ ಸಾಕೆನಿಸಿತು.
ಇಪ್ಪತ್ತೈದು ಕೊಟ್ಟಿದ್ದಾರೆ, ಅಲ್ವಾ? ಹಂಚಿಬಿಡಿ, ಹತ್ತಾರು ಜನ ಓದಿ,” ಎಂದರು ಗಿರಿಜಾಬಾಯಿ.. -
“ಸರಿ, ಸರಿ! ಏನು ಮಹಾ ಅಂತ ಹಂಚೋದು ?
“ಏನು ಮಹಾ ಅಂದರೆ ? ಇಷ್ಟೊಳ್ಳೆ ಲೇಖನ ಬೇರೆ ಯಾರಾದರೂ " ಬರೀಲಿ ನೋಡೋಣ !”
“ಸುಮ್ಮನೆ ಮುಖಸ್ತುತಿ ಮಾಡ್ತೀರಾ ....”
“ಯಾರು ನಾನೇ ? ಈ ಮಿತಿಮಿಾರಿದ ಸೌಜನ್ಯ ಬಿಟ್ಟುಬಿಡಿ ವಿಶಾಲಿ....”