ಸ್ವಲ್ಪ ಹೊತ್ತಿಗೆ ಮುಂಚೆಯಷ್ಟೇ ನುಂಗಿದ್ದ ತುತ್ತು ಖಾರದ ಬಳಿಕ, ಈ ಸಿಹಿ.
“ನನ್ನ ಪ್ರೊಫೆಸರು ಏನಂದರು ಗೊತ್ತೆ ?”--
“ಹ್ಲಾ, ಏನಂದರು ? ಅವರಿಗೆ ತೋರಿಸಿದಿರಾ?”
“ಹೂಂ, ಇಂಗ್ಲಿಷಿನಲ್ಲಿ ಯಾಕೆ ಬರೀಲಿಲ್ಲ-ಅಂದರು, ನಮ್ಮಲ್ಲಿನ ಇಂಗ್ಲಿಷ್ ಪ್ರಾಧ್ಯಾಪಕರೆಷ್ಟೋ ಜನ...”
ವಿಶಾಲಾಕ್ಷಿ ಒಪ್ಪಿಸಿದ ವರದಿಯನ್ನು ಆಸಕ್ತಿಯಿಂದ ಗಿರಿಜಾಬಾಯಿ ಲಾಲಿಸಿದರು, ಮುಗುಳುನಗುತ್ತ ಅಸಮ್ಮತಿ ಸೂಚಕವಾಗಿ ತಲೆಯಲ್ಲಾಡಿಸಿದರು.
ಅವರು ಬಾಣ ಎಸೆದದ್ದು ಯಾರ ಮೇಲೆ ತಿಳೀತೆ ?” |
ಪ್ರಾಧ್ಯಾಪಕರು ಆ ಮಾತು ಆಡಿದಾಗ, ತಿಳಿದಿರಲಿಲ್ಲ. ಆದರೆ ಈಗ, ಅದನ್ನು ಕುರಿತು ಯೋಚಿಸತೊಡಗಿದಾಗೆ, ಹೊಳೆಯಿತು.
ಅವರಂದದ್ದು ದಿವಂಗತ ಬಿ. ಎಂ. ಶ್ರೀ.ಯವರ ವಿಷಯವಾಗಿ ಅಲ್ಲವೆ ??? -
“ಹೌದು, ಆಮೇಲೂ ಅಷ್ಟೆ : ರಂಗಣ್ಣನವರು, ಮೂರ್ತಿರಾಯರು, ಉತ್ತರದ ಕಡೆ ಗೋಕಾಕರು-ಎಲ್ಲಾ ಇಂಗ್ಲಿಷ್ ಪ್ರಾಧ್ಯಾಪಕರು ; ಜತೆಯಲ್ಲೇ ಆಧುನಿಕ ಕನ್ನಡ ಸಾಹಿತ್ಯದ ಪ್ರಮುಖರು, ಈ ಜನರ ಹಾಗೆ ನಿಮ್ಮ ಪ್ರೊಫೆಸರು ಹೆಸರಾಂತವರಲ್ಲ. ಸ್ವಲ್ಪ ಕಟುವಾಗಿ ಹೇಳೋದಾದರೆ, ಇವರ ಕೈಗೆ ಎಟಕದ ದ್ರಾಕ್ಷೆ, ಸ್ವಲ್ಪ ಹುಳಿ.“
“ನೀವು ಹೇಳ್ತಿರೋದು ನಿಜ, ಮಾತೃಭಾಷೆಯ ವಿಷಯದಲ್ಲಿ ತಾತ್ಸಾರ ಸರಿಯಲ್ಲ ಅಂತ ನನಗೂ ಅನಿಸುತ್ತಪ್ಪ”.
ಗಿರಿಜಾಬಾಯಿ ಸಂಚಿಕೆಯಲ್ಲಿದ್ದ ಇತರ ಲೇಖನಗಳನ್ನೂ ನೋಡಿದರು. ವಿಶಾಲಾಕ್ಷಿ ಬರೆದಿದ್ದ ಲೇಖನದ ಪುಟಗಳ ಮೇಲೆ ಒಲವಿನ ನೋಟ ಬೀರಿದರು, ಬಳಿಕ ಸಂಚಿಕೆಯನ್ನು ವಿಶಾಲಾಕ್ಷಿಯ ಕಡೆಗೆ ಸರಿಸಿದರು:
“ತಗೊಳ್ಳಿ.”
ಇಲ್ಲೇ ಇರಲಿ, ಎಲ್ಲಾ ಓದಿದ ಮೇಲೆ ಕೊಡುವಿರಂತೆ.”
“ಬೇಡ, ಕಾಲೇಜಿಗೆ ಬಂದಿರುತ್ತೆ, ಸಂಚಿಕೆಯ ಒಂದು ಪ್ರತಿಯಾದರೂ . ನಿಮ್ಮಲ್ಲೆ ಇರಬೇಕು,”