ಟೀಪಾಯ್'ಯ ಮೇಲಿದ್ದ ಪೇಪರಿನ ತುಂಡನ್ನು ನೋಡಿ, ಅವರು ಮುಂದುವರಿಸಿದರು :
“ಯಾರೂ ನೋಡಬಾರದೂಂತ ಮುಚ್ಚಿಕೊಂಡು ಬಂದಿರಿ, ಅಲ್ವಾ ? ಅವಮಾನವಾಗುತ್ತೇನು ಹಿಡ್ಕೊಂಡು ಹೋಗೋಕೆ ? ಎಲ್ಲಿ, ಕೊಡಿ-ಒಂದು ರಟ್ಟು ಹಾಕ್ಕೊಡ್ತೀನಿ.”
ವಿಶಾಲಾಕ್ಷಿ ನಗುತ್ತ ಅಂದಳು : -
“ಬೇಡ, ನಾನೇ ಹಾಕ್ಕೊಳ್ಳಿನಿ.”
ಕಟ್ಟಿ ತಂದಿದ್ದ ಕಾಗದವೇ: ಅಚ್ಚುಕಟ್ಟಾದ ಹೊದಿಕೆಯಾಯಿತು ಪುಸ್ತಕಕ್ಕೆ.
ರಮಾ ಹೊರಗಿಣಿಕಿ ನೋಡಿ ಅಂದಳು:.
“ನಿನಗೂ ತರಲಾ ಅಮ್ಮ?” “ಹೂ.. ಸ್ವಲ್ಪ ಸಾಕು.” :
ರುಚಿಕರವಾದ ಓವಲ್ಕಿನ್ನು, ಜತೆಗೆ ಬಿಸ್ಕತ್ತು.
“ಹಸಿವಾಗಿದೆ ಅಲ್ವಾ? ತಿಂಡಿ ಮಾಡೋ ಸ್ಥಿತೀಲಿಲ್ಲ ನಾನು. . ಬಿಸ್ಕತ್ತು ಯಾವ ಮೂಲೆಗೆ ? ಆದರೂ ತಿನ್ನಿ.”
ತನ್ನನ್ನು ಕುರಿತು ಹಾಗೆ' ಗಿರಿಜಾಬಾಯಿ ಅಂದಾಗ, ವಿಶಾಲಾಕ್ಷಿ ಪ್ರತಿ.ಭಟಿಸಿದಳು:
“ಇಲ್ರೀ, ನನಗೆ ಹಸಿವಿಲ್ಲ.”
“ಶಾಂತಾದೇವಿ ಕಾಫಿ ಕುಡಿಸಿದ್ರಾ ?” :
“ಇಲ್ಲ, ಕ್ಲಾಸಿಗೆ ಮುಂಚೆ ನರ್ಮದೆಯ ಮನೆಗೆ ಹೋಗಿದ್ದೆ, ಅಲ್ಲಿ ತಿಂಡಿಯಾಯ್ತು.”
ಭಾಗೀರಥಮ್ಮ ಕೊಟ್ಟಿದ್ದ ಹಣ್ಣು ಕೂಡಾ 'ಯಾವ ಮೂಲೆಗೆ ?” ಆದರೂ ಗಿರಿಜಾಬಾಯಿಯನ್ನು ಸಮಾಧಾನಪಡಿಸಲು ಆ ಸುಳ್ಳು ಅಗತ್ಯವಾಗಿತ್ತು.
ನರ್ಮದೆಯ ಮನೆಗೆ ವಿಶಾಲಾಕ್ಷಿ ಹೋಗಿದ್ದಳೆಂಬುದಕ್ಕೆ ಹಣೆಯ ಕಿರಿ ಬೊಟ್ಟು ಸಾಕ್ಷಿಯಾಗಿತ್ತು, ಅದನ್ನು ಒಮ್ಮೆ ನೋಡಿ ಗಿರಿಜಾಬಾಯಿ ಅಂದರು :
“ತಾಯಿ-ಮಗು ಚೆನ್ನಾಗಿದಾರಾ ?”
ಓಹೋ ! ಮುರಲಿ ಮುದ್ದಾಗಿದಾನೆ.” :