ವಿಷಯಕ್ಕೆ ಹೋಗು

ಪುಟ:VISHAALAAKSHI - Niranjana.pdf/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೮ +++ # ++ ** Y-| ವಿಶಾಲಾಕ್ಷಿ ( ಇನ್ನೂ ಹತ್ತು ನಿಮಿಷ ಇದೆ, ಬಸ್ಸು ಬರೋಕೆ, ಬಸ್‌ಸ್ಟಾಪ್‌ವರೆಗೂ ಬರೀನಿ”

  • “ಬೇಡ್ರಿ, ನಿಮಗೆ ಆಯಾಸವಾಗುತ್ತೆ.”

- “ಕಾಲು ಗಟ್ಟಿಯಾಗದೇ ಇದ್ರೆ ನಾಳೆ ಕಾಲೇಜಿಗೆ ಹೋದಹಾಗೆಯೇ! ನಡೆಯೋದು ಅಭ್ಯಾಸವಾಗಲಿ. ಬನ್ನಿ.” ಚಿಕ್ಕ ಹುಡುಗಿಯರಾಗಲೇ ಹಿಂದಿನ ಬಾಗಿಲಿಂದ ಹೊರಬಿದ್ದು ಪಕ್ಕದ " ಮನೆ ಸೇರಿದ್ದರು, ಓರಗೆಯವರೊಡನೆ ಆಡಲೆಂದು, ರಮೆಯೊಬ್ಬಳೇ, ಮನೆಯ - ಹೊರ ದೀಪವನ್ನು ಹತ್ತಿಸಿ, ವಿಶಾಲಾಕ್ಷಿಯನ್ನು ಬೀಳ್ಕೊಡಲು ಬಾಗಿಲವರೆಗೆ ಬಂದಳು. ಬಸ್‌ಸ್ಟಾಪಿನ ಕೆಳಗೆ ಬೇರೆ ಯಾರೂ ಇರಲಿಲ್ಲ. ಬೀದಿಯೂ ಪ್ರಶಾಂತ ವಾಗಿತ್ತು, ವಿದ್ಯುದ್ದೀಪಗಳು ಆಗಲೇ ಹತ್ತಿಕೊಂಡಿದ್ದವು. ದೂರದ ಮನೆಗಳ ಸಂಜೆಯ ಕಲವರ ಕಡಮೆಯಾಗುತ್ತ ನಡೆದಿತ್ತು. “ನಾಳೆ ಕಾಲೇಜಿಗೆ ಹೊರಟೇಬಿಡ್ತೀರಿ ಹಾಗಾದರೆ,” ಎಂದಳು ವಿಶಾಲಾಕ್ಷಿ - “ಮನೆಯಲ್ಲಿ ಕೂತೇನು ಮಾಡಲಿ ? ಹಾಸಿಗೆ ಮೇಲೆ ಮಲಗಿರೋದು ಅಂದರೆ ಭಯ ನನಗೆ-ಕಾಹಿಲೆ ಎಲ್ಲಿ ಜಾಸ್ತಿಯಾಗಿಬಿಡುತ್ತೋ ಅಂತ !” ಎಂದು ನಕ್ಕರು ಗಿರಿಜಾಬಾಯಿ.

  • ಸಂಜೆಯ ಗಾಳಿ ತಣ್ಣನೆ ಬೀಸಿತು, ಮೋಟಾರು ಬಂದ ಸದ್ದಾಯಿತು. ಲಾರಿ ರೊಯೋ೦ ಎಂದು ಬಿರುಗಾಳಿಯ ವೇಗದಿಂದ ಅದು ಹೊರಟುಹೋಯಿತು.

ಗಿರಿಜಾಬಾಯಿ ಕೇಳಿದರು : | “ನಿಮ್ಮ ತಾಯಿ ಆರೋಗ್ಯವಾಗಿದಾರೆ, ಅಲ್ವಾ ?”. “ಹೂಂ” “ನಿಮ್ಮಣ್ಣ ಈ ವರ್ಷ ಬಾರೇನು ?” “ಆ ವಿಷಯ ಅಣ್ಣ ಬರೆದೇ ಇಲ್ಲ ನೋಡ್ರಿ... ರಜಾ ಸಿಗುತ್ತೋ ಇಲ್ಲೋ.......? ಕ್ಷಣಕಾಲ ಸುಮ್ಮನಿದ್ದು ಗಿರಿಜಾಬಾಯಿ ಕೇಳಿದರು : “ಇನ್ನೊಂದು ಯಾವತ್ತು ಬರೀತೀರಾ ?” ಪ್ರಶ್ನೆ ಅರ್ಥವಾಗದೆ ವಿಶಾಲಾಕ್ಷಿ ಕೇಳಿದಳು ; : J. ' +, ............... ..ಜಯ Kh - G2.442

  1. 4+FskT SE :
  • ಿಕk+!

ಒ14- •t.