ವಿಷಯಕ್ಕೆ ಹೋಗು

ಪುಟ:VISHAALAAKSHI - Niranjana.pdf/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಈ4-- 1•° ೫೨ ವಿಶಾಲಾಕ್ಷಿ d-E- °

=

- U- --- ಉದ್ಯೋಗ ಖಾಯಂ ಆಗುವುದೂ ಸುಲಭವಾಗದೆ, ಕಳೆದಸಾರೆ ನೀನು ಊರಿಗೆ ಬಂದಿದ್ದಾಗ, ವಿದೇಶ ವ್ಯಾಸಂಗದ ವಿಷಯ ಮಾತನಾಡಿದ್ದು ನೆನಪಿದೆಯೊ ? ನಮ್ಮಂಥವರಿಗೆ ಅದೆಲ್ಲಿ ಹೇಳಿಸಿದಲ್ಲ' ಎಂದಿದ್ದೆ ನೀನು. ಈಗ ಅನಿರೀಕ್ಷಿತವಾಗಿ ಸಂದರ್ಭ ಹೀಗೆ ರೂಪುಗೊಂಡಿದೆ, ರಷ್ಯಾದೇಶವೇನೂ ದೂರವಲ್ಲ. ಅಮ್ಮನಿಗೆ ಹೇಳು, ಇಲ್ಲಿಯೇ ಸಮಾಪ.... fಮೊದಲು ಅರ್ಥವಾಗಲಿಲ್ಲ ವಿಶಾಲಿಗೆ, ಇಲ್ಲಿಯೇ ಸಮಾಸ' ಎಂದ ರೇನು ? ಬಳಿಕ ಹೊಳೆಯಿತು: “ಅಮ್ಮನಿಗೆ ಹೇಳು.7 ....ಹಾ, ಹಾ-ಅನ್ನುವುದರೊಳಗೇ ಆರು ತಿಂಗಳು ಕಳೆದುಹೋಗಿದೆ. ಅಭ್ಯಾಸಿಗಳ ತಂಡ ಹೊರಡುವುದು .ಡಿಸೆಂಬರ್‌ ತಿಂಗಳಲ್ಲಿ, ಅ ದ ಕ್ರೂ ಮುಂಚಿತವಾಗಿಯೊಮ್ಮೆ ಊರಿಗೆ ಬರಬಲ್ಲೆ, .. ನಿನ್ನ ಅಭಿಪ್ರಾಯವೇನು ? ಆ ದಿನವೇ ನಾನು ಹೇಳಿದ್ದೆ-ಮನೆಗೆ ನೀನೇ ದೊಡ್ಡವಳೂಂತ ನೀನ್ನು ಒಪ್ಪಿಯೇ ಒಪ್ಪುತ್ತೀಯಾ ಎನ್ನುವ ಭರವಸೆ ಇದೆ. ಅಷ್ಟೇ ಅಲ್ಲ, ತಾಯಿಯನ್ನೂ ಒಪ್ಪಿಸುತ್ತೀಯಾ ಅಂತ ನಂಬಿಕೆಯೂ ಇದೆ. ನಿನ್ನ ಅಧ್ಯಯನ ಚೆನ್ನಾಗಿಯೇ ನಡೆದಿದೆ, ಅಲ್ಲವೆ? ಚಂದ್ರ-ಜಯ : ರಾಮುಗೆ ಒಲವು ತಿಳಿಸು.. ಅಮ್ಮನಿಗೆ ಪ್ರಣಾಮಗಳು. ಎಂದು ನಿನ್ನ ಪ್ರೀತಿಯ ರಾಜು `ಮರೆತುದು: ಜಿ. ಎಂ. ಒಂದು ವಾರದೊಳಗೆ ಉತ್ತರ ಅಪೇಕ್ಷಿಸಿದ್ದಾರೆ. ಇದು ನಿನ್ನ ಕೈಸೇರಲು ಎಂದಿನಂತೆ ನಾಲೈದು ದಿನಗಳಾಗಬಹುದು. ನಿನಗೆ ಒಪ್ಪಿಗೆ ಎಂದು ತಿಳಿಸಿ ಒಂದು ತಂತಿ ಕೊಡುತ್ತೀಯಾ ? ಅದು ಬಂದಾಗ ಮಾತ್ರ ನನ್ನ ಮನಸ್ಸಿಗೆ ನೆಮ್ಮದಿ.... ರಾ. - ಓದಿ ಮುಗಿಸಿದ ವಿಶಾಲಾಕ್ಷಿ ಒಂದು ಕ್ಷಣ ಮೂಕಿಯಾಗಿ ಕುಳಿತಳು. ಸಮಾಜಶಾಸ್ತ್ರದಲ್ಲಿ ಹೆಚ್ಚಿನ ಅಧ್ಯಯನಕ್ಕಾಗಿ ಪರಿಚಿತೆಯೊಬ್ಬಳು ಅಮೆರಿಕಕ್ಕೆ ಹೋದಾಗ, ಆಗಾಗ್ಗೆ ಪತ್ರಿಕೆಗಳಲ್ಲಿ ಭಾವಚಿತ್ರಗಳೊಡನೆ ವಿದೇಶ ವ್ಯಾಸಂಗಗಳ ಪ್ರವಾಸದ ಸುದ್ದಿಗಳನ್ನು ಓದಿದಾಗ, ಯಾವ ಬಗೆಯಿಂದಲೂ ವಿಶಾಲಾಕ್ಷಿಗೆ ಅಚ್ಚರಿ 1


ಆ.

-wrn T Aski .. :.-: ಓ.. - .. :..::: :: : : "... .. " ..... .. ಈ .. - Bh_

  • £ '