ಪುಟ:VISHAALAAKSHI - Niranjana.pdf/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇವತ್ +--+-+-+ G ಒ... ++-+ ....: i....kliksi 1à.. 14: ....... ...... (೫ಳು -A.......ವಹಿಸ .. + ' |LFl 445-Ibi “ಹ್ವಾ? ಏನೇ ಅದು ? ಏನು ಸಮಾಚಾರ ?” ಎಂದು ನರ್ಮದ ಆಡಿದ ದೇನೋ ನಗೆಚಾಟಿಕೆಯ ನುಡಿ, ' ಆದರೆ, ಗಂಗಾಧರನನ್ನು ವಿಶಾಲಾಕ್ಷಿ ಕಂಡ ದಿನದಿಂದ ಅವಳ ಹೃದಯದೊಳಗೆ ಸ್ಪಂದಿಸತೊಡಗಿದ್ದ ಭಾವನೆಯೊಂದು, ಆ ಮಾತು ಕೇಳಿದ ಬಳಿಕ ಬಲಗೊಂಡಿತು ; ಗಲಭೆ ಆರಂಭಿಸಿತು. ದಿನಗಳು ಕಳೆದುವು. ಒಮ್ಮೆಯೂ ಎಲ್ಲಿಯೂ ಕಣ್ಣಿಗೆ ಬೀಳಲೇ ಇಲ್ಲ ಆ ಕವಿವರ್ಯ. ಲೈಬ್ರೆರಿಯಲ್ಲಿ 'ಪ್ರಬುದ್ಧ ಕರ್ಣಾಟಕ'ದ ಹಿಂದಿನ ಸಂಚಿಕೆಯನ್ನೆತ್ತಿಕೊಂಡು ವಿಶಾಲಾಕ್ಷಿ ಪುಟ ಮಗುಚಿದಳು, ಆ ಕವಿತೆ ಇತ್ತು-ಆತ ಬರೆದುದು, 'ಕಲ್ಲರಳಿ ಹೂವಾಯ್ತು'-ಗಂಗಾಧರ, ಭಾವಗೀತ, ಲಲಿತ ಪದಗಳು ಚೆಲ್ಲಾಡಿದ್ದುವು : ಶತಮಾನಗಳಿಂದ ಜಡವಾಗಿ ಬಿದ್ದಿತ್ತು ಜೀವ, ಬಳಿಕ ಒಮ್ಮೆ ಪ್ರಲಯವಾಗಿತ್ತು, ಬೆಟ್ಟಗಳು ಬಿರಿದುವು. ಭೂಗರ್ಭದಿಂದ ಜ್ವಾಲಾಮುಖಿಗಳು ಆಸ್ಫೋಟಿಸಿದವು. ಸಾಗರಗಳು ಉಕ್ಕಿಬಂದುವು. ಜಲಮಯವಾಯ್ತು ಜಗವೆಲ್ಲ'........ಉಳಿದು ದೊಂದೇ ಒಂದು-ಶಿಲೆ.' 'ದಿನ ಕಳೆದು, ನೀರಿಳಿದು....' (ಜೀವಹಸ್ತವು ಸೋಂಕಿ ಕಲ್ಲರಳಿತು.' ಮುಂದೆ, ಮೆಲ್ಲಮೆಲ್ಲನೆ, 'ಕಲ್ಲರಳಿ ಹೂವಾಯಿತು.....? ಓದಿದ ವಿಶಾಲಾಕ್ಷಿಗೆ, ಹೃದಯವನ್ನು ಯಾರೋ ಮೃದುವಾಗಿ ಮುಟ್ಟಿದಂತೆ ಭಾಸವಾಯಿತು, ಮುಟ್ಟಿದುದು ಮೃದುವಾಗಿ, ಆದರೂ ಗೂಡು ಕಂಪಿಸಿತು. ಒಳಗಿದ್ದ ಎಳೆಯ ಹಕ್ಕಿಗಳೆಲ್ಲ ಪುಕ್ಕವಿಲ್ಲದ ರೆಕ್ಕೆ ಬಡೆಯುತ್ತ ಚಿಲಿಪಿಲಿಗುಟ್ಟಿದುವು. ಒಳ್ಳೆಯ ಕವಿತೆ, ಸಂದೇಹವೇ ಇರಲಿಲ್ಲ. ವಿಶಾಲಾಕ್ಷಿ ಅದನ್ನು ಮತ್ತೊಮ್ಮೆ ಓದಿದಳು, ಮತ್ತೊಮ್ಮೆ, `2೮ -...ಓಓಟ: +-ಕ್ | ಪ42 # 1-q. 375°