ವಿಷಯಕ್ಕೆ ಹೋಗು

ಪುಟ:VISHAALAAKSHI - Niranjana.pdf/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆn marr° | •11 ! I° °n** ಹಿಸುಕುಟುಕು ಟ34; ಪ್ರೇಮಕ್ಕೆ ಕಣ್ಣಿಲ್ಲ ಕಾಣಿಸುತ್ತಿತ್ತು, ಆ ಕಡೆ ನೋಡಿ, ವಿಶಾಲಾಕ್ಷಿಯ ನೋಟವೂ ತನ್ನ ದೃಷ್ಟಿ ಯನ್ನು ಅನುಸರಿಸಿದಾಗ, ಅವನೆಂದ : * “ಒಳಗೆ ಹೋಗೋಣವೆ ?” “ಬೇಡ್ತೀ' ಎನ್ನಬೇಕೆಂದಿದ್ದ ವಿಶಾಲಾಕ್ಷಿ, ಕ್ಷೀಣಧ್ವನಿಯಲ್ಲಿ “ಹೂಂ” ಎಂದಳು.. ಮಾಸಿದ್ದ ಬೆತ್ತದ ಕುರ್ಚಿಗಳು-ಬಡಕಲು ಪೀಠಗಳು-ಅವರನ್ನು ಆಹ್ವಾನಿ ಸಿದುವು. “ನೀವು ಕಾಫಿ ತಗೋತೀರಿ, ಅಲ್ವೆ?” “ಬರೇ ಕಾಫಿ.” ಅದನ್ನು ತರಹೇಳಿ ಗಂಗಾಧರ ಮಾತಿಗೆ ಮೊದಲು ಮಾಡಿದ: * “ನಾನು ಆವತ್ತು ನಿಮ್ಮನ್ನು ಕಂಡ ಮಾರನೆಯ ದಿನವೇ ಊರಿಂದ ತಾರು ಬಂತು, ಶಿವಮೊಗ್ಗಾದಿಂದ, ಆಗ ಹೋದವನು ಬರೋದು ಇಷ್ಟು ತಡವಾಯ್ತು.... [ಸ್ವಲ್ಪ ತಡೆದು]....ನಮ್ಮ ತಾಯಿ ತೀರಿಕೊಂಡ್ರು....” ಆತ ಕಾಣಿಸದೇ ಇದ್ದುದಕ್ಕೆ ಕಾರಣ ತಿಳಿದು ಸಮಾಧಾನವೆನಿಸಿದಾಗ ಆ ಸುದ್ದಿ. = “ಆ! ಹಾಗೇನು ? ಏನಾಗಿತ್ತು ?” “ಈಗ ಎರಡು ವರ್ಷಗಳಿಂದ ಪಾರ್ಶ್ವವಾಯುವಿನಿಂದ ನರಳ್ತಾನೇ ಇದ್ರು. ವಯಸ್ಪೂ ಆಗಿತ್ತು, ನಾನು ಹೋದಮೇಲೂ ಒಂದು ವಾರ ನರಳಾಡಿದ್ರು.” “ಅಯ್ಯೋ ಪಾಪ!” “ಅಂತೂ ಆ ಜೀವಕ್ಕೆ ಬಿಡುಗಡೆಯಾಯ್ತು, ತಾಯಿ, ನಮ್ಮ ಕುಟುಂಬ ದಲ್ಲಿ ನಾನು ಪ್ರೀತಿಸಿದ್ದ ಒಬ್ಬಳೇ ವ್ಯಕ್ತಿ.” “ “ನಿಮ್ಮ ತಂದೆ-_» “ಇದಾರೆ, ದೊಡ್ಡ ಕಂಟ್ರಾಕ್ಟರು. ಅವರೂ ಹಿರಿಯಣ್ಣನೂ ವ್ಯವಹಾರ ನಡೆಕ್ಕೊಂಡು ಹೋಗ್ತಿದಾರೆ, ನಮ್ಮದೇನೂ ಸಣ್ಣ ಸಂಸಾರವಲ್ಲ [ನಿಮ್ಮದರ ಹಾಗೆ. ಎರಡನೆಯವನು ಸಾಗರದಲ್ಲಿ ಅಮಲ್ದಾರ, ಆಮೇಲೆ ಎರಡು ಹೆಣ್ಣು, ಮದುವೆ ಯಾಗಿದೆ, ನಾನೇ ಚಿಕ್ಕವನು, ಅಧ್ಯಾಪಕವೃತ್ತಿಗೆ ಇಳಿದೇಂತ ನಮ್ಮ ತಂದೆಗೆ ನನ್ನ ಮೇಲೆ ಸಿಟ್ಟು.” - .... -" - 1 .. .೬ - .: ..... ....: 4 - ...

T - ಸ್ತ್ರೀ.: