ಪುಟ:Valmeeki Ramayana Shaapa Mattu Vara Preliminary Pages.pdf/೧೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಮರಾಠಿ ಕನ್ನಡ ಸ್ನೇಹವರ್ಧನ ಕೇಂದ್ರದ ವತಿಯಿಂದ ಹೆಸರಿಗೆ ತಕ್ಕಂತೆ ಈ ಕೇಂದ್ರವು ಮರಾಠಿ ಹಾಗೂ ಕನ್ನಡ ಜನತೆಯ ನಡುವೆ ಬಾಂಧವ್ಯವನ್ನು ಹೆಚ್ಚಿಸಲೆಂದು ಕಳೆದ ವರ್ಷ ಪುಣೆಯಲ್ಲಿ ಜನ್ಮತಾಳಿತು. ಈ ಬಾಂಧವ್ಯದ ಮಾಧ್ಯಮಗಳೆಂದರೆ ಸಾಹಿತ್ಯ, ಕಲೆ ಮತ್ತು ಪರಿಸಂವಾದ. ಇದರನ್ವಯ ಕೇಂದ್ರವು ಹಲವು ವಿಧಾಯಕ ಯೋಜನೆಗಳನ್ನು ಹಮ್ಮಿಕೊಂಡಿದೆ. ಕನ್ನಡ-ಮರಾಠಿ ವಿಷಯಗಳ ಸಂಯುಕ್ತ ಅಧ್ಯಯನಕ್ಕೆ ಪುರಸ್ಕಾರ ನೀಡುತ್ತಿದೆ. ಪುಣೆ ವಿಶ್ವವಿದ್ಯಾಲಯದಲ್ಲಿ ಇದಕ್ಕಾಗಿ ಒಂದು ಪೀಠ ಸ್ಥಾಪನೆಗೆ ಯತ್ನಿಸುತ್ತಲಿದೆ. ಉಭಯ ಭಾಷೆಗಳ ಲೇಖಕರು, ಕಲಾವಿದರು ಹಾಗೂ ಅವರ ಕೃತಿಗಳನ್ನು ಪರಸ್ಪರ ಪರಿಚಯಿಸಿ ಕೊಡುತ್ತಲಿದೆ. - ಇದಕ್ಕಿಂತ ಹೆಚ್ಚು ಮಹತ್ವದ್ದು ಗ್ರಂಥ, ಲೇಖನಗಳ ಅನುವಾದ ಮತ್ತು ಪ್ರಸರಣ. “ಕಾಖಂಡಕಿಯ ಶ್ರೀ ಮಹಿಮಪತಿರಾಯರು' ಎಂಬ ಸಂಶೋಧನ ಗ್ರಂಥವನ್ನು, 'ಕಾರಂತರ ಕಾದಂಬರಿಗಳು- ಮಹಾ ರಾಷ್ಟ್ರೀಯರ ದೃಷ್ಟಿಯಲ್ಲಿ' ಎಂಬ ಸಮೀಕ್ಷೆಯನ್ನು (ಪುತ್ತೂರಿನ ಕರ್ನಾಟಕ ಸಂಘದವರ ಮೂಲಕ) ಹೊರತಂದಿದೆ. ಪ್ರಸ್ತುತ ಗ್ರಂಥದ ರಚನೆ-ಪ್ರಸರಣದಲ್ಲಿ ಕೇಂದ್ರವು ಲೇಖಕರಾದ ಶ್ರೀ ರ. ಭಿಡೆ ಅವರಿಗೆ ಪ್ರೇರಣೆಯನ್ನು ಒದಗಿಸಿದೆ. ಎಷ್ಟೆಂದರೂ ಅವರು ಕೇಂದ್ರದ ಧರ್ಮದರ್ಶಿಗಳಲ್ಲಿ ಒಬ್ಬರು. ಅವರ ಮೂಲ ಮರಾಠಿ ಕೃತಿಗಳ ಅನುವಾದವನ್ನು ಬೇರೆಯವರು ಮಾಡುತ್ತಲಿದ್ದಾರೆ. ಆದರೆ ಸ್ವತಃ ಅವರು ಕನ್ನಡ ಕೃತಿಗಳನ್ನು ಮರಾಠಿಗರಿಗೆ ಪರಿಚಯಿಸುವಲ್ಲಿ ತುಂಬಾ ಆಸಕ್ತರು; ಅದರಲ್ಲಿ ನಿರತರು. ಅವರ ಈ ಕನ್ನಡಾನುವಾದ ಕೃತಿಯ ಪ್ರಕಟನೆಗೆ ಪೂರ್ಣತಃ ಪಾಲ್ಗೊಂಡ ಗೀತಾ ಬುಕ್ ಹೌಸ್ ಅವರಿಗೆ ನಾವು ಸದೈವ ಋಣಿಗಳು. ಕೃ, ಶಿ. ಹೆಗಡೆ ಪ್ರಧಾನ ಕಾರ್ಯದರ್ಶಿ ೧೮ ಫೆಬ್ರವರಿ ೧೯೯೬