ಪುಟ:Valmeeki Ramayana Shaapa Mattu Vara Preliminary Pages.pdf/೧೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

xii ಇಂದು ನಾನು ಶಾಪಮುಕ್ತನಾದೆ...* ಕಳೆದ ನಾಲ್ಕು-ನಾಲ್ಕೂವರೆ ವರ್ಷಗಳಿಂದ ಶಾಪಿತನಾಗಿರದಿದ್ದರೂ ನಾನು ಹಾಗೆ ನೋಡಿದರೆ ಶಾಪಗ್ರಸ್ತನಾದಂತೆ ಇದ್ದೆ. ವಿಜಾಪುರ ಜಿಲ್ಲೆಯಲ್ಲಿ ಮುದ್ದೇಬಿಹಾಳ ಒಂದು ತಾಲ್ಲೋಕಿನ ಸ್ಥಳವಾಗಿದೆ. ಅಲ್ಲಿ ಮಾತೋಶ್ರೀ ಗಂಗವ್ರ ಮಹಾವಿದ್ಯಾಲಯವಿದೆ. ಆ ಮಹಾವಿದ್ಯಾಲಯದ ತರುಣ ಗ್ರಂಥಪಾಲರಾದ ಶ್ರೀ ಪಂಡಿತ ಸಿದ್ದಪ್ಪ ಕನಮಡಿಯವರು ನನ್ನಲ್ಲಿಗೆ ಬಂದು ನನಗೆ ಒಂದು ಶಾಪವನ್ನು ಕೊಟ್ಟರು. ಶಾಪ ಮತ್ತು ವರ ಇವುಗಳ ಸಂಬಂಧದ ಸಂಕಲ್ಪನೆಯು ಬಹುಪ್ರಾಚೀನ ಕಾಲದಿಂದ ಬಂದಿದ್ದು. ರಾಮಾಯಣ-ಮಹಾಭಾರತದಂಥ ಗ್ರಂಥಗಳಲ್ಲಿ ಅವನ್ನು ವಿಪುಲವಾಗಿ ಬಳಸಿವೆಯಾದರೂ ಇವುಗಳ ಬಗ್ಗೆ ಯಾವದೇ ಮಾಹಿತಿಯು ಕನ್ನಡ ಸಾಹಿತ್ಯದಲ್ಲಿ ಕಂಡುಬಾರದೇ ಇದ್ದ ಹಾಗೆ ಶ್ರೀ ಕನಮಡಿ ಅವರು ಖೇದ ವ್ಯಕ್ತಪಡಿಸಿದರು. ಮರಾಠಿ ಸಾಹಿತ್ಯದಲ್ಲಿ ಈ ಬಗ್ಗೆ ಯಾವುದಾದರೊಂದು ಗ್ರಂಥವಿದೆಯೇ ಎಂದು ಪ್ರಶ್ನಿಸಿ, ಅದು ಇರದಿದ್ದರೆ ನಾನು ಏನು ಮಾಡಬೇಕೆಂಬ ಬಗ್ಗೆ ಆಗ್ರಹಿಸಿದರು. ಅವರು ನನ್ನಲ್ಲಿಟ್ಟುಕೊಂಡ ಆದರವಿಶ್ವಾಸಗಳಿಂದ ನಾನು ಸಂತೋಷಗೊಂಡೆ. ಅಷ್ಟೇ ಅಲ್ಲದೇ ಈ ರೀತಿ ಸೂಚಿಸಲ್ಪಟ್ಟ ವಿಷಯದ ಹೊಸತನ ನನಗೆ ತುಂಬಾ ಹಿಡಿಸಿತು. ಹೀಗೆ ಎನಿಸಿದರೂ ಮಹಾಭಾರತ-ರಾಮಾಯಣಗಳಂಥ ಪ್ರಾಚೀನ ಗ್ರಂಥಗಳನ್ನು ಸಹ ನಾನು ಅಭ್ಯಸಿಸಿಲ್ಲ ಎಂಬುದರಿಂದ ನನಗೆ ವಿಷಾದವೆನಿಸಿತು. ನಾನು ಅವರಿಗೆ ನನ್ನ ಒಪಿಗೆ ಅಥವಾ ನಿರಾಕರಣೆಯನ್ನು ಕೂಡಲೇ ತಿಳಿಸದೆ ತುಸು ಅವಧಿಯನ್ನು ಕೇಳಿಕೊಂಡು ಸಾಧ್ಯವಿರುವದನ್ನು ಮಾಡುವುದಾಗಿ ಆಶ್ವಾಸಿಸಿದೆ. ಈ ನಂತರ ಇದೇ ಉದ್ದೇಶವನ್ನಿಟ್ಟುಕೊಂಡು ಪುಣೆಗೆ ತೆರಳಿ ಅಲ್ಲಿ ಸನ್ಮಾನ್ಯ ಪಂಡಿತ ಮಹಾದೇವಶಾಸ್ತಿ ಜೋಶಿ ಇವರನ್ನು ಭೇಟಿಯಾದೆನು. ಮೇಲಿನ ಶಾಪದ ಕಥೆ ಮತ್ತು ನನ್ನ ಮನಸ್ಸಿನ ವ್ಯಥೆ ಎರಡನ್ನೂ ಯಾವ ಸಂಕೋಚವನ್ನೂ ಇಟ್ಟುಕೊಳ್ಳದೆ ಅವರ ಬಳಿ ತೋಡಿಕೊಂಡೆ. ಈವರೆಗೆ ನಾನು ಸಮಗ್ರ ವಾಲ್ಮೀಕಿ ರಾಮಾಯಣವನ್ನು ಎಂದೂ ಓದಿರಲೂ ಇಲ್ಲ. ಶಾಸ್ತ್ರಿಗಳು ಕೂಡ. ಈವರೆಗೆ ಮರಾಠಿ ಸಾಹಿತ್ಯದಲ್ಲಿ ಸಹ ಈ ವಿಧದ ಒಂದು ಗ್ರಂಥವೂ

  • ಮರಾಠಿಯ ಮೊದಲ ಆವೃತ್ತಿಗೆಂದು ಬರೆದದ್ದು