ಪುಟ:Valmeeki Ramayana Shaapa Mattu Vara Preliminary Pages.pdf/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

xiv ಕಳುಹಿದರು. ಪ್ರಾಯದ ಎಪ್ಪತ್ತೈದು ವರ್ಷಗಳನ್ನು ದಾಟಿದ ಅವರ ವ್ಯಾಸಂಗ, ಉತ್ಸಾಹ, ಸಾಮರ್ಥ್ಯ ಹಾಗೂ ಕಾರ್ಯಾಸಕ್ತಿ ಇವುಗಳನ್ನು ಗಮನಿಸಿದರೆ ನಮ್ಮ ಶಿರ ತಾನಾಗಿ ಅವರತ್ತ ಬಾಗುತ್ತದೆ. ಇದೇ ರೀತಿಯಲ್ಲಿ ಪೋದ್ದಾರ್ ಮಹಾವಿದ್ಯಾಲಯ, ಮುಂಬಯಿ, ಈ ಸಂಸ್ಥೆಯ ಹಿಂದೀ ವಿಭಾಗದ ಪ್ರಮುಖರಾಗಿ ನಿವೃತ್ತರಾದ ಮತ್ತು ಕಿರಿಯ ಮಹಾ ವಿದ್ಯಾಲಯದ ಪ್ರಾಚಾರ್ಯರಾಗಿ ನಿವೃತ್ತರಾದ ಡಾ|| ಗ.ನ. ಸಾಠ ಇವರ ಪರಿಚಯ ವಂತೂ ಅಂಚೆಯ ಮೂಲಕವೇ ಆಯಿತು. ಅವರು ಬರೆದ ಪತ್ರದ ವೈಖರಿ, ಪ್ರತ್ಯಕ್ಷಭೇಟಿಯ ಸಂಭಾಷಣೆಯನ್ನು ಮೊಟಕುಗೊಳಿಸುವಂತಿತ್ತು. ಡಾ|| ಸಾಥ್ ಅವರು ರಾಮಾಯಣದ ಗಾಢವ್ಯಾಸಂಗವನ್ನು ಮಾಡಿರುವರಲ್ಲದೆ ಭಾರತದ ಹಲವಾರು ಭಾಷೆಗಳಲ್ಲಿ ಪ್ರಕಾಶಿಸಲ್ಪಟ್ಟ ರಾಮಾಯಣಗಳ ತುಲನಾತ್ಮಕ ಪರಿಶೀಲನೆಯನ್ನು ಮಾಡಿದ್ದಾರೆ. ಹಿಂದಿ ಭಾಷೆಯ ಮೇಲಿನ ಅವರ ಪ್ರಭುತ್ವ ಮಾತೃಭಾಷೆಯಷ್ಟೇ ಬಿಗಿಯಾಗಿದೆ. ಇಂಥ ಗಣ್ಯರ ಪರಿಚಯ ಮತ್ತು ನಂತರ ಬೆಳೆದುಬಂದ ಸ್ನೇಹ- ಇವು ನನಗೆ ವರಸ್ವರೂಪವಾಯಿತು. ನನ್ನ ಎಲ್ಲ ಲೇಖನಗಳನ್ನೂ ಆಳವಾಗಿ ಅಭ್ಯಸಿಸಿ, ಮಹತ್ವದ ಸೂಚನೆಗಳನ್ನು ಮಾಡಿದರು. ಇದಲ್ಲದೆ ನನ್ನ ವಾಸಸ್ಥಾನ ವಿಜಾಪುರದಲ್ಲಿದ್ದುದರಿಂದ, ಅಲ್ಲಿ ಇದ್ದುಕೊಂಡು ಮರಾಠಿ ಪುಸ್ತಕದ ಮುದ್ರಣವನ್ನು ನೋಡಿಕೊಳ್ಳುವದು ದುಸ್ತರವಿತ್ತು. ಈ ನನ್ನ ಅಡಚಣೆಯನ್ನು ಗಮನಿಸಿ ಡಾ|| ಸಾಠ ಇವರು ತಾವಾಗಿ ನೆರವಿನ ಕೈ ಮುಂದೆ ಚಾಚಿ ಮುದ್ರಣ ವ್ಯವಸ್ಥೆ ಎಲ್ಲ ಕಾರ್ಯವನ್ನು ತಮ್ಮ ಸ್ವಂತದ ಕೆಲಸವೆಂಬಂತೆ ಪ್ರೀತಿಯಿಟ್ಟು ಪೂರೈಸಿದರು. ಅವರು ಪಟ್ಟ ಪರಿಶ್ರಮ, ವ್ಯಯ ಮಾಡಿದ ಸಮಯಗಳಿಗೆ ಮಿತಿಯಿಲ್ಲ; ಬರೀ ಶಬದಗಳಿಂದ ಅದನ್ನು ತುಂಬಿಕೊಡಲು ಅಸಾಧ್ಯವಿದೆ. ಸದ್ಯ ಅವರು ಸಂತ ಏಕನಾಥ ಮಹಾರಾಜರ 'ಭಾವಾರ್ಥ ರಾಮಾಯಣ'ದ ಹಿಂದಿ ಅನುವಾದದಲ್ಲಿ ತೊಡಗಿದ್ದರೂ ಅದನ್ನು ಬದಿಗಿರಿಸಿ ತನ್ನ ಗ್ರಂಥದ ಮುದ್ರಣಕಾರ್ಯವನ್ನು ಸಾರ್ಥಕವಾಗಿ ಮಾಡಿಕೊಟ್ಟರು. ನನ್ನ ಈ ಗ್ರಂಥದ ಅಂತರಂಗವನ್ನು ಶುದ್ದೀಕರಿಸಿ ಅದಕ್ಕೆ ಸೌಷ್ಟವವನ್ನು ನಿರ್ಮಿಸಿಕೊಟ್ಟ ಎಲ್ಲ ಶ್ರೇಯಸ್ಸು ಈ ಇಬ್ಬರು ಪ್ರಾಚಾರ್ಯರದೇ ಅಗಿದೆ. ಕಾಂಟಿನೆಂಟಲ್ ಪ್ರಕಾಶನ ಸಂಸ್ಥೆ, ಪುಣೆ, ಈ ಖ್ಯಾತ ಸಂಸ್ಥೆಯವರು ನನ್ನ ಈ ಮರಾಠಿ ಗ್ರಂಥವನ್ನು ಪ್ರಕಟಿಸಿರುವ ಸಂಗತಿ ನನಗೆ ಗೌರವಾಸ್ಪದವಾಗಿದೆ. ಈ ಸಂಸ್ಥೆ ಹೊಂದಿರುವ ಸ್ಥಾನ, ಪ್ರತಿಷ್ಠೆ, ಸ್ಥಿರತೆ ಇವೆಲ್ಲವೂ ಮಿತ್ರವರ್ಯರಾದ ಶ್ರೀ ಅನಂತರಾವ ಕುಲಕರ್ಣಿ ಇವರಲ್ಲಿದ್ದ ಗ್ರಂಥಪ್ರೇಮ, ರಸಿಕತೆ, ಸೌಂದರ್ಯದೃಷ್ಟಿ, ಪ್ರಾಮಣಿಕತೆ, ಚಾಕಚಕ್ಯತೆ ಇವನ್ನು ಆಧರಿಸಿದ್ದ ಅವರ ಐವತ್ತು ವರ್ಷಗಳ ಪರಿಶ್ರಮವಿದೆ. ಈ ರೀತಿ ಹಲವು ಬಗೆಯಲ್ಲಿ ಈ ಗ್ರಂಥದ ಅಂತರ್ಜಾಹ್ಯಸೌಂದರ್ಯ ಸೌಷ್ಟವವು ಪೋಷಿತವಾಗಿದೆ. ಜೊತೆಗೆ ನನ್ನ ಗೆಳೆಯನಾದ ಶ್ರೀ ವಿ.ವಾ. ಗೋಖಲೆ, ಧಾರವಾಡ,