ಪುಟ:Valmeeki Ramayana Shaapa Mattu Vara Preliminary Pages.pdf/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

xviii ಅನುವಾದಕಿಯ ಎರಡು ಮಾತು ರಾಮಾಯಣದ ಕಥೆ ಪ್ರತಿಯೊಬ್ಬ ಭಾರತೀಯನಿಗೆ ಗೊತ್ತಿದ್ದ ವಿಷಯ. ರಾಮನ ವನವಾಸ, ಸೀತೆಯ ಅಪಹರಣ, ಲಂಕಾದಹನ, ರಾಮರಾವಣರ ಯುದ್ದ, ರಾಮನೆಂದರೆ ದೇವರು, ರಾವಣನೆಂದರೆ ರಾಕ್ಷಸ, ಸೀತೆ ಎಂದರೆ ಪತಿವ್ರತೆ. ಹನುಮಂತನೆಂದರೆ ಬೇಕುಬೇಕಾದ್ದನ್ನು ಮಾಡುವ ಶಕ್ತಿ ಇದ್ದವನು, ಕುಂಭಕರ್ಣನ ನಿದ್ರೆ- ಇಷ್ಟರಮಟ್ಟಿಗೆ ಎಲ್ಲರಿಗೂ ಗೊತ್ತಿರುತ್ತದೆ. ಚಿಕ್ಕಂದಿನಿಂದಲೂ ಕೇಳಿ, ಓದಿ ಸ್ವಲ್ಪಮಟ್ಟಿಗೆ ತಿಳಿದುಕೊಂಡಿರುತ್ತಾರೆ. ಆದರೆ ಸಂಪೂರ್ಣರಾಮಾಯಣವನ್ನು ಓದಿಕೊಂಡವರು ಬಹಳ ಕಡಿಮೆ ಎಂದೇ ಹೇಳಬಹುದು. ಶ್ರೀ ಕುವೆಂಪು ಅವರು ಬರೆದ 'ಜನಪ್ರಿಯ ವಾಲ್ಮೀಕಿ ರಾಮಾಯಣ'ದಲ್ಲಿ “ಅದೆಂತಹ ಸೈನ್ಯವಾಗಲಿ, ಅದೆಂತಹ ರಾಜಕಾರಣ ನೈಪುಣ್ಯವಾಗಲಿ, ಹಿಂದೆಂದೂ ಸಾಧಿಸಿ, ರಕ್ಷಿಸಲಾರದಿದ್ದ ಭಾರತ ವರ್ಷದ ಅಖಂಡತೆಯನ್ನೂ, ಐಕ್ಯತೆಯನ್ನೂ ಶತಶತಮಾನಗಳಿಂದಲೂ ಸಾಧಿಸಿ ರಕ್ಷಿಸಿಕೊಂಡು ಬಂದಿರುವಂತೆಯೆ ಮುಂದೆಯೂ ಸಾಧಿಸಿ ರಕ್ಷಿಸಿಕೊಂಡು ಬರುವುದರಲ್ಲಿ ಸಂದೇಹವಿಲ್ಲ. ಅಲೋಕ್ಯಸಾಮಾನ್ಯವಾದ ಶ್ರೀ ರಾಮಾಯಣ ದಿವ್ಯಶಿಲ್ಲ' ಎಂದು ಬರೆದದ್ದು ಸಾರ್ಥಕವಾಗಿದೆ. ಈ ಪರಿಯ ಮಹತ್ವದ ಗ್ರಂಥವಾದ ವಾಲ್ಮೀಕಿರಾಮಾಯಣದಲ್ಲಿಯ ಶಾಪ/ ವರಗಳನ್ನು ಮಾತ್ರ ಆಯ್ದುಕೊಂಡು ಬಹು ಪರಿಶ್ರಮಪಟ್ಟು ಶ್ರೀಮಾನ್ ಶ್ರೀ.ರಂ.ಭಿಡೆಯವರು ಈ ವಿದ್ಯತ್ ಗ್ರಂಥವನ್ನು ಹೊರತಂದಿದ್ದಾರೆ. ಈ ಗ್ರಂಥದಲ್ಲಿಯ ಪ್ರಸ್ತಾವನೆಯ “ಶಾಪಾದಪಿ-ವರಾದಪಿ' ಮುನ್ನುಡಿಯನ್ನು ಓದುಗರು ಪರಿಶೀಲಿಸಿದರೆ ಇದರಲ್ಲಿಯ ವಿಷಯವ್ಯಾಪಕತೆ ತಿಳಿದುಬರುವುದು; ಈ ಕೃತಿಯ ಹೊಸ ಆಯಾಮವು ವ್ಯಕ್ತವಾಗುವುದು. ಶಾಪ ಮತ್ತು ವರಗಳನ್ನು ತೆಗೆದುಹಾಕಿ ರಾಮಾಯಣವನ್ನು ಬರೆಯುವುದು ಸಾಧ್ಯವಿರಲಿಲ್ಲ ಎಂಬುದನ್ನು ಖಚಿತಪಡಿಸುವ ಇದೊಂದು ಸಂದರ್ಭ ಗ್ರಂಥವಾಗಿದೆ. - ಪ್ರಸ್ತುತ ಈ ಗ್ರಂಥದಲ್ಲಿ ವಾಲ್ಮೀಕಿರಾಮಾಯಣದಲ್ಲಿಯ ಅರವತ್ತೊಂದು ಶಾಪಗಳ ಮತ್ತು ಎಂಬತ್ತೆರಡು ವರಗಳನ್ನು ಒಂದೆಡೆ ಕೊಟ್ಟಿದ್ದಾರೆ. ಪ್ರತಿಯೊಂದು ಶಾಪದ ಮತ್ತು ವರದ ಬಗ್ಗೆ ಸಂಶೋಧಿತ ವಿವರಣೆಯನ್ನು ಓದುಗರ ಮುಂದಿಟ್ಟಿದ್ದಾರೆ. ಶಾಪ ಮತ್ತು ವರಗಳಿಗೆ ಸಂಬಂಧವಿದ್ದ ವ್ಯಕ್ತಿಗಳ, ಸ್ಥಳಗಳ ಉಲ್ಲೇಖವನ್ನು ಸವಿಸ್ತರವಾಗಿ