ಪುಟ:Vimoochane.pdf/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಆ ಊರಲ್ಲೂ ಪತ್ರಿಕೆ ಮಾರುವ ಹುಡುಗರಿದ್ದರು. ಕುತೂಹಲ ದಿಂದ ಅಸೂಯೆಯಿಂದ ಅವರನ್ನು ನಾನು ನೋಡುತ್ತಿದ್ದೆ. ಮಾರಾ ಟದ ವಿಧಾನದಲ್ಲಿ ಇಲ್ಲಿ ಹೊಸತನವಿತ್ತು. ಆ ದಿನದ ಮುಖ್ಯ ಘಟನೆ ಯನ್ನು ಮರಾಠಿಯಲ್ಲೊ ಇಂಗ್ಲಿಷಿನಲ್ಲೊ ಕೂಗಿ ಹೇಳುತ್ತಾ ಹುಡು ಗರು ಓಡಾಡುತ್ತಿದ್ದರು. ಇಲ್ಲಿ "ಪೇಪರ್ ಬೇಕೆ ಸಾರ್?" ಎಂದು ಕೇಳಬೇಕಾಗಿರಲಿಲ್ಲ. ಬೇಕಾದವರು ತಾವಾಗಿಯೆ ಹುಡುಗರನ್ನು ಸಮೀಪಿಸಿಯೋ ಕರೆದೋ ದುಡ್ಡು ಕೊಟ್ಟು ಕೊಳ್ಳುತ್ತಿದ್ದರು.

ನಾನು ಅವರಲ್ಲಿ ಒಬ್ಬಿಬ್ಬರ ಪರಿಚಯಮಾಡಿಕೊಳ್ಳಲ್ಲು ಯತ್ನಿ ಸಿದೆ. ಹರಕು ಮುರುಕು ಮರಾಠಿಯಲ್ಲಿ ಮಾತನಾಡಲು ಪ್ರಯತ್ನಿ ಸಿದೆ. ಅವರ ದೃಷ್ಟಿಯಲ್ಲಿ ನಾನು ಅನ್ಯದೇಶದವನು. ಅವರು ನಕ್ಕು ನನ್ನನ್ನು ದೂರ ಸರಿಸಿದರು. "ಹೋಗಲೆ. ಹಮಾಲಿಮಾಡು ಹೋಗು," ಎಂದರು.

ಹಮಾಲಿ ಎಂದರೆ ಸಾಮಾನು ಹೊರುವ ಕೂಲಿ ಕೆಲಸ. ಬೋರಿ ಬಂದರ್ ಸ್ಟೇಷನ್ನಿನ ಹೊರ ಆವರಣದಲ್ಲಿ ನಿಂತು, ಬರುತ್ತಲಿದ್ದ ಪ್ರತಿಯೊಂದು ರೈಲುಗಾಡಿಯನ್ನೂ ಇದಿರುಗೊಂಡೆ. ಮುಂಬಯಿಗೆ ದಕ್ಷಿಣ ಕನ್ನಡದಿಂದ, ಧಾರವಾಡದ ಕಡೆಯಿಂದ, ಮೈಸೂರಿನಿಂದ ಕನ್ನಡ ಮಾತನಾಡುವ ಜನ ಬರುತ್ತಿದ್ದರು. ಸೂಕ್ಷ್ಮ ನಿರೀಕ್ಷಣೆಯಿಂದ ಅಂತಹವರನ್ನು ಗುರುತಿಸಲು ಕಲಿತೆ. ಅವರ ಬಳಿಗೆ ಧಾವಿಸಿ ಕನ್ನಡ ದಲ್ಲೇ ಮಾತನಾಡುತ್ತ ಸಾಮಾನು ಹೊತ್ತುಕೊಳ್ಳುತ್ತಿದ್ದೆ. ನಿಲ್ದಾಣದ ಒಳಕ್ಕೆ ಹೋಗಲು ನನಗೆ ಅನುಮತಿಯಿರಲಿಲ್ಲ. ನನ್ನೊಡನೆ ಬಿಲ್ಲೆಯಿರಲ್ಲಿಲ್ಲ. ಹೊರಗೇ ಕಾದು ನಿಂತಾಗ, ತಮ್ಮ ಸಾಮಾನುಗಳನ್ನು ತಾವೇ ಪ್ರಯಾಸದಿಂದ ಹೊತ್ತುಕೊಂಡು ಹೊರಬರುತ್ತಿದ್ದ ಬಡ ಪ್ರಯಾಣಿಕರು ಮಾತ್ರ ಸಿಗುತ್ತಿದ್ದರು. ಎಷ್ಟು ದೊರೆತರೆ ಅಷ್ಟೇ ಪರಮ ಭಾಗ್ಯವೆಂದು ನಾನು ಅವರನ್ನು ಸಮೀಪಿಸುತ್ತಿದ್ದೆ. ಹೊಸತಿನಲ್ಲಿ ಊರಿಗೆ ಬಂದವರು ನನ್ನನ್ನೂ ನನ್ನ ಕನ್ನಡವನ್ನೂ ನಂಬುತ್ತಿರಲಿಲ್ಲ. ಸಾಮಾನು ಹೊತ್ತು ಓಡಿ ಹೋಗಲು ಬಂದ ಕಳ್ಳನೇ ನಾನು, ಎಂಬ ಹಾಗೆ ಅವರು ವರ್ತಿಸು