ಪುಟ:Vimoochane.pdf/೧೦೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ


ತ್ತಿದ್ದರು.ಬೇರೆ ಕೆಲವರು ನನಗೆ ತಿಳಿಯದಂತಹ ಯಾವುದೋ ವಿಳಾಸಗಳನ್ನು ಕೊಟ್ಟು, "ಅಲ್ಲಿ ತನಕ ಬರ್ತೀಯಾ, ಹಾದಿ ತೋರಿ ಸ್ತೀಯಾ?" ಎನ್ನುತ್ತಿದ್ದರು. ಮುಂಬಯಿಗೆ ಹೊಸಬನಾದ ನನಗೆ ಆ ಎಲ್ಲ ಜಾಗಗಳ ಪರಿಚಯವಿರಲಿಲ್ಲ. ಆದರೂ ನಿರಾಕರಿಸದೆ, ಎಲ್ಲ ವನ್ನೂ ಬಲ್ಲವನ ಹಾಗೆ ನಟಿಸುತ್ತಾ, ಕೂಲಿ ಹಿಡಿಯುತ್ತಿದ್ದೆ. ಆಮೇಲೆ ಯಾರ ಯಾರನ್ನಾದರೂ ಕೇಳಿ ವಿಳಾಸದ ಶೋಧನೆ........ ಪ್ರಯಾಣಿಕರ ಬಯ್ಗಳು............ ಘಂಟೆಗಟ್ಟಲೆ ಸುತ್ತಾಡಿದ ಮೇಲೆ

ನನಗೆ ದೊರೆಯುತ್ತಿದ್ದ ಮೂರು ನಾಲ್ಕಾಣೆ.

ಅದೂ ಕೂಡ ಕಷ್ಟವಾಗುತ್ತಿತ್ತು. ಬೇರೆ ಹುಡುಗರು ಕಾನಡಿ ವಾಲಾ ಆದ ನನ್ನನ್ನು ದ್ವೇಷಿಸುತ್ತಿದ್ದರು. ಅವರ ಸ್ನೇಹ ಸಂಪಾದನೆ ಸಾಧ್ಯವಾಗುವುದಕ್ಕೆ ಮುಂಚೆ ನಾನು ಮುಂಬಾಯಿವಾಲಾನಾಗಿ ಮಾರ್ಪಡುವುದು ಅವಷ್ಯವಿತ್ತು. ಆ ಮಾರ್ಪಾಟಗೋಸ್ಕರ ನಾನು ಮನಪೂರ್ವಕವಾಗಿ ದುಡಿದೆ. ಆ ಹುಡುಗರಷ್ಟೇ ಅಲ್ಲ----ನನ್ನ ಸಂಪಾ ದನೆಗೆ ಅಡ್ಡಿಯಾದವರಲ್ಲಿ ಅದೇ ಆಗ ನಿರುದ್ಯೋಗಿಗಳಾಗಿದ್ದ ಸಹಸ್ರ ಸಹಸ್ರ ಜನರಿದ್ದರು. ಕಾರ್ಖಾನೆಯ ಕೆಲಸಗಾರರಷ್ಟೇ ಅಲ್ಲ. ವಿದ್ಯಾ ವಂತರಾದ ಪ್ಯಾಂಟುಧಾರಿಗಳೂ ಕೂಡ ಹಮಾಲಿ ಕೆಲಸಕ್ಕೆ ಬರುತ್ತಿ ದ್ದರು. ಪೇಟೆಯ ಅಂಗಡಿಗಳಲ್ಲಿ ವಿಧ ವಿಧದ ಸಾಮಾನುಗಳು ರಾಶಿ ಬಿದ್ದಿದ್ದುವು. ಕೊಳ್ಳುವ ಗಿರಾಕಿಗಳಿರಲಿಲ್ಲ. ಕೊಳ್ಳಲು ಜನರಲ್ಲಿ ದುಡ್ಡಿರಲಿಲ್ಲ.

ಬದುಕಿನಲ್ಲಿ ಆಸಕ್ತಿಯಿರುವ ಯಾವ ಮನುಷ್ಯನೂ ಸ್ನೇಹ ಜೀವಿಯಾಗದೇ ಇರುವುದು ಸಾಧ್ಯವಿಲ್ಲ . ಆ ಪ್ರತಿಕೂಲ ವಾತಾ ವರಣದಲ್ಲೂ ನಾನು ನನ್ನ ಹಾಗೆಯೇ ಇದ್ದ ಒಬ್ಬಿಬ್ಬರ ಗೆಳೆತನ ಕಟ್ಟಿ ಕೊಂಡೆ. ಯಾವ ಕೆಲಸವೂ ದೊರೆಯದೇ ಹೋದಾಗ ಬೀದಿಯ ಬದಿಯಲ್ಲಿ ಕುಳಿತು ಎದುರಿನ ಗೋಡೆಗಳ ಮೇಲೆ ದೊಡ್ಡ ದೊಡ್ಡ ದಾಗಿ ಅಂಟಿಸಿದ್ದ ಸಿನಿಮಾ ಜಾಹೀರಾತುಗಳನ್ನು ನೋಡುತ್ತಿದ್ದೆವು. ಯಾವನಾದರೊಬ್ಬ ಹಾಡುತಿದ್ದ: "ಛೋಟೀಸಾಬ್ ಅಂಗನಾಮೆ ಗಿಲ್ಲಿ ಖೇಲ್" ಕಣ್ಣಿಗ ಕರಿಯ ಕನ್ನಡಕ ಹಾಕಿ ಕೈಯಲ್ಲಿ ಪಿಸ್ತೂ