ವಿಷಯಕ್ಕೆ ಹೋಗು

ಪುಟ:Vimoochane.pdf/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ದೊಯ್ದು ನಾಯಕನ ಪಾತ್ರ ಕೊಟ್ಟರಂತೆ. ಈಗ ಆತನ ಜತೆಯಲ್ಲಿ ನಟಿಸಲು ಹಾತೊರೆಯದ ತಾರೆಯೇ ಇಲ್ಲ. ನಾಲ್ಕು ಬ್ಯಾಂಕುಗಳಲ್ಲಿ ಆತ ದುಡ್ಡಿಟ್ಟಿದ್ದಾನೆ. ಅಷ್ಟೆ ಅಲ್ಲ. ತಾನು ಹಿಂದೆ ಚಿಲ್ಲರೆ ಸಾಮಾನು ಮಾರುತ್ತಿದ್ದ ಜಾಗಕ್ಕೆ ಬಂದು ಈಗ ಅಲ್ಲಿರುವ ಇನ್ನೊಬ್ಬನಿಂದ ಪ್ರತಿ

ದಿನವೂ ಏನಾದರೊಂದು ಸಾಮಾನು ಕೊಳ್ಳುತ್ತಾನೆ! ........

ನನಗೆ ನಗು ಬರುತ್ತಿತ್ತು. ನನಗಿಂತ ಎರಡು ವರ್ಷ ಚಿಕ್ಕವನು ಆ ಹುಡುಗ. ಅವನ ಕಲ್ಪನೆಯ ಪ್ರಪಂಚ ರಹಸ್ಯಮಯವಾಗಿತ್ತು. ಅದರ ಒಳಹೊಕ್ಕರೆ ಮೈ ಮರೆಯದೆ ಇರುವುದು ಸಾಧ್ಯವೇ ಇರಲಿಲ್ಲ. ನನ್ನ ಮುಖದ ಮೇಲಿದ್ದ ತೆಳ್ಳಗಿನ ಕಪ್ಪನೆಯ ಬಾಲ್ಯ ಮೀಸೆಯ ಮೇಲೆ, ನಯವಾಗಿ ನೀಳವಾಗಿ ಬೆಳೆದ್ದಿದ್ದ ಕ್ರಾಪಿನ ಮೇಲೆ, ಕೈಯಾಡಿ ಸಿದೆ. ಚಲಚ್ಛಿತ್ರ ನಿರ್ಮಾಪಕರ ಯಾವುದಾದರೂ ಕಾರು ಬಂದು ನನ್ನೆದುರು ನಿಂತು ನನಗಾಗಿ ಬಾಗಿಲು ತೆರೆಯಬಾರದೇಕೆ?

ಆ ದಿನ ನನ್ನ ಬಳಿ ನಿಂತು, ಬೇರೊಂದು ಲೋಕದ ಇಣಿಕು ನೋಟವನ್ನು ಒದಗಿಸಿಕೊಟ್ಟ ಆ ಕಾರಿನ ನೆನಪಾಯಿತು -- ದೊಡ್ಡ ಮನುಷ್ಯರ ಕಾರು........ಲೋಕಪರಾಯಣರ ಕಾರು........ಆಮೇಲೆ ನಕ್ರಹುಬ್ಬಿನ ಚಿಕ್ಕ ಮೂಗಿನ ಕುಣಿಯುವ ಜಡೆಯ ಆ ಹುಡುಗಿ .... ಪರಾಯಣರ ಮಗಳು. ಅವಳ ನೆನಪು ಹಿತಕರವಾಗಿರಲಿಲ್ಲ---ಆದರೆ?

ಹೊಟ್ಟೆ ಹಸಿದ ಮೇಲೆ ಮನುಷ್ಯನಿಗೆ ಬೇರೆ ಬಯಕೆಗಳಿರುತ್ತವೆ ಅಲ್ಲವೆ? ಹೊಟ್ಟೆ ಹಸಿದಾಗಲೂ ಬಯಕೆಗಳಿರುತ್ತವೆ ಅಲ್ಲವೆ? ಅವ ನಿಗೆ ಅನ್ನ, ರೊಟ್ಟಿ, ಅಷ್ಟೇ ಸಾಕೆ? ಆತ ಪ್ರೀತಿಯನ್ನು ಬಯಸು ತ್ತಾನೆ. ನಾನು ಆ ಮರಾಠಿ ಹುಡುಗನನ್ನು ಪ್ರೀತಿಸುತ್ತಿದ್ದೆ. ಈ ಪ್ರೀತಿಗೂ ಹುಡುಗ ಹುಡುಗಿಯರ ನಡುವಿನ ಪ್ರೀತಿಗೂ ವ್ಯತ್ಯಾಸ ವಿದೆ ಅಲ್ಲವೆ? ಹದಿನೇಳು-ಹದಿನೆಂಟರ ವಯಸ್ಸಿನಲ್ಲಿ ನಾನು, ಅಂತಹ ಪ್ರೀತಿಯೆಂದರೇನೆಂಬುದನ್ನು ತಿಳಿದಿರಲಿಲ್ಲ. ತಾಯಿಯ ಪ್ರೀತಿ ಗತ ಕಾಲದ ಸ್ಮರಣೆ ಮಾತ್ರ. ತಂಗಿ ಅಕ್ಕ ನನಗಿರಲಿಲ್ಲ. ಪ್ರಾಥಮಿಕ ಶಾಲೆಯಲ್ಲಿ ಚಿಕ್ಕವರಾದ ಶ್ರೀಮಂತ ಹುಡಿಗಿಯರಿದ್ದರು. ಆದರೆ ಅವರು ಶ್ರೀಮಂತ ಹುಡಿಗಿಯರು.ಮಳೆನಾಡಿನಿಂದ ಇಳಿದು